Kisan Vikas Patra Scheme : ಕಿಸಾನ್ ವಿಕಾಸ್ ಪತ್ರ (KVP) 7.5% ಬಡ್ಡಿದರದಲ್ಲಿ 9 ವರ್ಷದಲ್ಲಿ ಹಣ ಡಬಲ್ | Farmer ID ಹೊಸ ನಿಯಮಗಳು !

By Dhanya.C Poojari
On: 04/03/2026 |
16 Views
Kisan Vikas Patra Scheme : ಕಿಸಾನ್ ವಿಕಾಸ್ ಪತ್ರ (KVP) 7.5% ಬಡ್ಡಿದರದಲ್ಲಿ 9 ವರ್ಷದಲ್ಲಿ ಹಣ ಡಬಲ್ | Farmer ID ಹೊಸ ನಿಯಮಗಳು !
---Advertisement---
Kisan Vikas Patra Scheme : 7.5% ಬಡ್ಡಿದರದಲ್ಲಿ 9 ವರ್ಷದಲ್ಲಿ ಹಣ ಡಬಲ್! KVP ಯೋಜನೆ + Farmer ID ಹೊಸ ಕಡ್ಡಾಯ ನಿಯಮ ಸಂಪೂರ್ಣ ವಿವರ

Kisan Vikas Patra Scheme : ಬ್ಯಾಂಕ್ ಎಫ್ ಡಿ ಬಡ್ಡಿಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಸರ್ಕಾರದ ಗ್ಯಾರೆಂಟಿ ಯೊಂದಿಗೆ ಸುರಕ್ಷಿತವಾದ ಹೂಡಿಕೆ ಮಾಡಲು ಬಯಸಿದವರಿಗೆ ಸರ್ಕಾರದ ಕಿಸಾನ್ ವಿಕಾಸ್ ಪತ್ರ Kisan Vikas Patra Scheme ಒಳ್ಳೆಯ ಆಯ್ಕೆಯಾಗಿದೆ. ಇದು ಪೋಸ್ಟ್ ಪೋಸ್ಟ್ ಆಫೀಸ್ ನ ಉಳಿತಾಯ ಯೋಜನೆಯಾಗಿದೆ.

ಇದನ್ನು ಓದಿ : E-Sharm Card Update 2026: ಕಾರ್ಮಿಕರಿಗೆ ₹3,000 ಪಿಂಚಣಿ, ₹2 ಲಕ್ಷ ವಿಮೆ – ನೀವು ಅರ್ಹರಾ?

ಕಿಸಾನ್ ವಿಕಾಸ್ ಪತ್ರ KVP ಎಂದರೇನು ?

Kisan Vikas Patra Scheme ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದೆ. ನಿಗದಿತ ಅವಧಿಯಲ್ಲಿ ನಿಮ್ಮ ಹೂಡಿಕೆ ಮೊತ್ತವನ್ನು ಎರಡರಷ್ಟು ಮಾಡುವಂತೆ ಈ ಯೋಜನೆ ವಿನ್ಯಾಸಗೊಂಡಿದೆ.

  • ಪ್ರಸ್ತುತ ಬಡ್ಡಿದರ: 7.50% ವಾರ್ಷಿಕ (ಚಕ್ರಬಡ್ಡಿ)
  • ಹಣ ಡಬಲ್ ಆಗುವ ಅವಧಿ: 9 ವರ್ಷ 7 ತಿಂಗಳು (115 ತಿಂಗಳು)
  • ಕನಿಷ್ಠ ಹೂಡಿಕೆ: ₹1,000
  • ಗರಿಷ್ಠ ಹೂಡಿಕೆಗೆ : ಮಿತಿ ಇಲ್ಲ
  • ಉದಾಹರಣೆ: ₹1,00,000 ಹೂಡಿಕೆ ಮಾಡಿದರೆ, 9 ವರ್ಷ 7 ತಿಂಗಳ ನಂತರ ₹2,00,000 ಆಗುತ್ತದೆ.

Kisan Vikas Patra Scheme ಯೋಜನೆಯ ಮುಖ್ಯ ವೈಶಿಷ್ಟ್ಯಗಳು ?

  • ಸರ್ಕಾರದ ಭದ್ರತೆ
  • ನಿಗದಿತ ಬಡ್ಡಿದರ
  • ದೀರ್ಘಕಾಲದ ಉಳಿತಾಯಕ್ಕೆ ಈ ಯೋಜನೆ ಸೂಕ್ತ
  • ಪೋಸ್ಟ್ ಆಫೀಸ್ ನಲ್ಲಿ ಸುಲಭವಾಗಿ ಲಭ್ಯ
  • ಒಬ್ಬರ ಹೆಸರಿನಲ್ಲಿ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು.

ರೈತರಿಗೆ ಹೊಸ ನಿಯಮ: ‘ಸೆಂಟ್ರಲ್ ರೆಜಿಸ್ಟರ್ಡ್ ಫಾರ್ಮರ್ ಐಡಿ’ (Farmer ID) ಕಡ್ಡಾಯ.

Kisan Vikas Patra Scheme : ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಕೃಷಿ ಯೋಜನೆಗಳ ಸೌಲಭ್ಯ ಪಡೆಯಲು ರೈತರಿಗೆ ಹೊಸ ಕೇಂದ್ರ ನಂದಾಯಿತ ರೈತ ಸಂಖ್ಯೆ ( Farmer ID ) ಮಾಡಿಸಿಕೊಳ್ಳಬೇಕು ಇದು ಕಡ್ಡಾಯವಾಗಿದೆ.

ಏಕೆ ಈ ಐಡಿ ಮುಖ್ಯ ?

ರಾಜ್ಯದಲ್ಲಿ FRUITS ID ಮತ್ತು Bhoomi ಭೂ ದಾಖಲೆ ವ್ಯವಸ್ಥೆಯನ್ನು ಒಟ್ಟಾಗಿ ಜೋಡಿಸಲಾಗಿದೆ. ಆದ್ದರಿಂದ ರೈತರು ಕೆಳಗಿನ ಕ್ರಮಗಳನ್ನು ಪೂರ್ಣಗೊಳಿಸಬೇಕು.

  • FRUITS ನಲ್ಲಿ e-KYC ಮಾಡಿಸಬೇಕು
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಬೇಕು
  • ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಪಹಣಿಗಳನ್ನು (RTC) FID ನಲ್ಲಿ ಸೇರಿಸಬೇಕು.

ಯಾವ ಯೋಜನೆಗಳಿಗೆ Farmer ID ಅಗತ್ಯ ?

Farmer ID ಇಲ್ಲದಿದ್ದರೆ ಇನ್ನು ಮುಂದೆ ನಿಮಗೆ ಕೆಳಗಿನ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದ್ದಾರೆ.

  • PM-Kisan ಪ್ರೋತ್ಸಾಹಧನ
  • ಬರಗಾಲ ಪರಿಹಾರ ಧನ
  • ಬೆಳೆ ವಿಮೆ
  • ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ
  • ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಗಳು. ಇತ್ಯಾದಿ..

ಬೇಕಾಗುವ ಅಗತ್ಯ ದಾಖಲೆಗಳು ?

ಹೊಸದಾಗಿ ಫಾರ್ಮರ್ ಐಡಿ ರಚಿಸಲು ಮಾಡಲು ಹಾಗೂ ಅಪ್ಡೇಟ್ ಮಾಡಲು ಕೆಳಗಿನ ದಾಖಲೆಗಳು ಅಗತ್ಯವಾಗಿ ನೀಡಬೇಕಾಗುತ್ತದೆ.

  • ರೈತರ ಆಧಾರ್ ಕಾರ್ಡ್
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರೋ ಮೊಬೈಲ್ ನಂಬರ್
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
  • ಎಲ್ಲಾ ಜಮೀನಿನ ಪಹಣಿ (RTC)

ಎಲ್ಲಿಗೆ ಹೋಗಿ ಮಾಡಿಸಬೇಕು ?

ನಿಮ್ಮ ಹತ್ತಿರದ ಗ್ರಾಮ ಒನ್ ಕಚೇರಿ ಅಥವಾ ರೈತ ಸಂಪರ್ಕ ಕಚೇರಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಬೇಕು ಹೋಗುವಾಗ ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ.

ಗಮನಿಸಿ : ಫಾರ್ಮರ್ ಐಡಿ ಮಾಡಿಸದೆ ಇದ್ದರೆ ಭವಿಷ್ಯದಲ್ಲಿ ನಿಮಗೆ ಸಿಗಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಸೌಲಭ್ಯಗಳು ಇನ್ನು ಮುಂದೆ ನಿಮಗೆ ಸಿಗುವುದಿಲ್ಲ.

Kisan Vikas Patra Scheme : ಸುರಕ್ಷಿತ ಹೂಡಿಕೆಗಾಗಿ ಕಿಸಾನ್ ವಿಕಾಸ್ ಪತ್ರ ಉತ್ತಮ ಆಯ್ಕೆಯಾಗಿದೆ. ಹಾಗೂ ಯಾವೆಲ್ಲ ರೈತರು ಇನ್ನು ಕೂಡ ಹೊಸದಾಗಿ ಫಾರ್ಮರ್ ಐಡಿ ಅಪ್ಡೇಟ್ ಮಾಡಿಕೊಂಡಿಲ್ಲ ದಯವಿಟ್ಟು ಆದಷ್ಟು ಬೇಗ ಅಪ್ಡೇಟ್ ಮಾಡಿಕೊಳ್ಳಿ. ಇದೇ ರೀತಿಯ ಸರ್ಕಾರದ ಯೋಜನೆ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ.

ಅಧಿಕೃತ ವೆಬ್ಸೈಟ್ ಲಿಂಕ್ : ಇದರ ಮೇಲೆ ಕ್ಲಿಕ್ ಮಾಡಿ.

Share
Founder of KarnatakaSuddi.com

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ಟೆಕ್, ಆಟೋಮೊಬೈಲ್, ಜ್ಯೋತಿಷ್ಯ, ರಾಜ್ಯ ಸುದ್ದಿ ಹಾಗೂ ಮನರಂಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment