Post Office RD Scheme: ತಿಂಗಳಿಗೆ ₹5,000 ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ ₹3.5 ಲಕ್ಷ ಸಿಗುತ್ತದೆಯಾ?

By: Dhanya.C Poojari

On: Friday, May 15, 2026 7:57 PM

Post Office RD Scheme
---Advertisement---

ಪ್ರತಿ ತಿಂಗಳು ₹5,000 Post Office RD Scheme ನಲ್ಲಿ ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ ಎಷ್ಟು ಹಣ ಸಿಗುತ್ತದೆ? ಬಡ್ಡಿದರ, ಲಾಭ, ಮೆಚ್ಯುರಿಟಿ ಮೊತ್ತ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

Post Office RD Scheme : ಇಂದಿನ ದಿನಗಳಲ್ಲಿ ಸುರಕ್ಷಿತ ಹೂಡಿಕೆ ಮಾಡುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ವಿಶೇಷವಾಗಿ ಮಿಡಲ್ ಕ್ಲಾಸ್ ಜನರು ಕಡಿಮೆ ರಿಸ್ಕ್ ಇರುವ ಯೋಜನೆಗಳನ್ನು ಹೆಚ್ಚು ಆರಿಸಿಕೊಳ್ಳುತ್ತಾರೆ. ಅಂತಹ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಪೋಸ್ಟ್ ಆಫೀಸ್ ಆರ್ಡಿ ಸ್ಕೀಮ್ RD Scheme (Recurring Deposit) ಪ್ರಮುಖವಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. ತಿಂಗಳಿಗೆ ಸಣ್ಣ ಮೊತ್ತ ಹೂಡಿಕೆ ಮಾಡಿ ಐದು ವರ್ಷದ ನಂತರ ಉತ್ತಮ ಉಳಿತಾಯ ಮಾಡಬಹುದು.

ಪೋಸ್ಟ್ ಆಫೀಸ್ RD ಯೋಜನೆ ಎಂದರೇನು

ಪೋಸ್ಟ್ ಆಫೀಸ್ ಆರ್ ಡಿ ಯೋಜನೆ ಒಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಜಮಾ ಮಾಡಬೇಕು. ಖಾತೆಯನ್ನು ಕೇವಲ ರೂ.100 ಇಂದಲೇ ಪ್ರಾರಂಭಿಸಬಹುದು. ಈ ಪೋಸ್ಟ್ ಆಫೀಸ್ ಆರ್ ಡಿ ಯೋಜನೆಗೆ ವಾರ್ಷಿಕ ಸುಮಾರು 6.7% ಬಡ್ಡಿದರ ನೀಡುತ್ತಿದ್ದೆ. ಮಿಡಲ್ ಕ್ಲಾಸ್ ಜನರಿಗೆ ಕಡಿಮೆ ರಿಸ್ಕ್ ನಲ್ಲಿ ಆದಾಯ ಹೆಚ್ಚುವ ಸ್ಕೀಮ್ ಇದಾಗಿದೆ.

ತಿಂಗಳಿಗೆ 5,000 ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ

ಉದಾಹರಣೆಗೆ :-

ಒಬ್ಬ ವ್ಯಕ್ತಿ ಪ್ರತಿ ತಿಂಗಳು ಕೇವಲ ₹5000 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ

  • ತಿಂಗಳ ಹೂಡಿಕೆ: ₹5,000
  • 5 ವರ್ಷಗಳ ಒಟ್ಟು ಹೂಡಿಕೆ: ₹3,00,000
  • ಅಂದಾಜು ಬಡ್ಡಿ ಆದಾಯ: ₹56,000ಕ್ಕೂ ಹೆಚ್ಚು
  • ಮೆಚ್ಯುರಿಟಿ ಮೊತ್ತ: ಸುಮಾರು ₹3.56 ಲಕ್ಷ

ಅಂದರೆ ಸಣ್ಣ ಉಳಿತಾಯದ ಮೂಲಕವೂ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು.

10 ವರ್ಷ ಮುಂದುವರಿಸಿದರೆ ಲಾಭ ಹೆಚ್ಚಾಗುತ್ತದೆ

Post Office RD Scheme : ಬಹಳಷ್ಟು ಜನರು 5 ವರ್ಷಗಳ ನಂತರವೂ ಆರ್ ಡಿ ಖಾತೆಯನ್ನು ವಿಸ್ತರಿಸುತ್ತಾರೆ. ನೀವು ಒಂದು ವೇಳೆ ಇನ್ನು 5 ವರ್ಷ ಆರ್ ಡಿ ಖಾತೆಯನ್ನು ಮುಂದುವರೆಸಿದರೆ. ಒಟ್ಟು ಹಣ ಸುಮಾರು ₹8.5 ಲಕ್ಷದ ವರೆಗೂ ಬೆಳೆಯುವ ಸಾಧ್ಯತೆ ಇದೆ. ದೀರ್ಘಕಾಲದ ಹೂಡಿಕೆಯಲ್ಲಿ ಬಹಳಷ್ಟು ಲಾಭ ಆಗುವ ಸಾಧ್ಯತೆ.

RD ಖಾತೆ ಎಲ್ಲಿ ತೆರೆಯಬೇಕು ?

ಹೊಸದಾಗಿ ಆಡಿ ಖಾತೆ ರಚಿಸಲು ನಿಮ್ಮ ಹತ್ತಿರದಲ್ಲಿ ಇರುವ ಪೋಸ್ಟ್ ಆಫೀಸ್ ಕೇಂದ್ರಕ್ಕೆ ಭೇಟಿ ನೀಡಿ. ಉಚಿತವಾಗಿ ಆರ್ ಡಿ ಖಾತೆಯನ್ನು ತೆರೆಯಬಹುದು.

ಪೋಸ್ಟ್ ಆಫೀಸ್ ಆರ್ ಡಿ ಯೋಜನೆಯ ಪ್ರಮುಖ ಲಾಭಗಳು

ಸರ್ಕಾರವೇ ಗ್ಯಾರಂಟಿ

ಈ ಯೋಜನೆ ಸಂಪೂರ್ಣವಾಗಿ ಕೇಂದ್ರ ಸರ್ಕಾರ ನಿರ್ವಹಿಸುತ್ತದೆ. ನೀವು ಮಾಡಿರುವ ಹೂಡಿಕೆ ಸುರಕ್ಷಿತವಾಗಿ ನೋಡಿಕೊಳ್ಳಲು

ಕಡಿಮೆ ಮೊತ್ತದಿಂದ ಆರಂಭ

ಕೇವಲ ರೂ.100 ಇಂದಲೇ ಖಾತೆ ತೆರೆಯಬಹುದು. ಇದರಿಂದ ವಿದ್ಯಾರ್ಥಿಗಳು ಮತ್ತು ಮಿಡ್ಲ್ ಕ್ಲಾಸ್ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ

ಉಳಿತಾಯ ಅಭ್ಯಾಸ

ಪ್ರತಿ ತಿಂಗಳು ಹಣ ಉಳಿಸುವ ಅಭ್ಯಾಸ ಬೆಳೆಸಲು ಇದು ಸಹಾಯಮಾಡುತ್ತದೆ.

ಸಾಲ ಸೌಲಭ್ಯ

ಖಾತೆ ತೆರೆದು 12 ತಿಂಗಳು ಆದ ನಂತರ ಅಗತ್ಯವಿದ್ದರೆ ಬ್ಯಾಂಕ್ನಿಂದ ಸಾಲ ಪಡೆಯುವ ಅವಕಾಶವೂ ಕೂಡ ಈ ಸ್ಕೀಮ್ ನಲ್ಲಿ ಇರುತ್ತದೆ.

ಯಾರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಸ್ವಯಂ ಉದ್ಯೋಗಿಗಳು, ದಿನ ಕೂಲಿ ಕೆಲಸ ಮಾಡುವವರು, ವಿದ್ಯಾರ್ಥಿಗಳು, ಗೃಹಿಣಿಯರು, ಇತ್ಯಾದಿ…. ಎಲ್ಲರಿಗೂ ಪೋಸ್ಟ್ ಆಫೀಸ್ RD ಯೋಜನೆ ಉತ್ತಮ ಆಯ್ಕೆಯಾಗಿದೆ.

Post Office RD Scheme : ಆಫೀಸ್ RD Scheme ಸುರಕ್ಷಿತ ಮತ್ತು ಖಚಿತ ಆದಾಯ ನೀಡುವ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ತಿಂಗಳಿಗೆ ₹5,000 ಹೂಡಿಕೆ ಮಾಡುವ ಮೂಲಕ 5 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಬಹುದು. ದೀರ್ಘಕಾಲದ ಹೂಡಿಕೆ ಮಾಡಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಇದೇ ರೀತಿಯ ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡಿ.

Share

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ರಾಜ್ಯ ಸುದ್ದಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment