E-Sharm Card Update 2026: ಕಾರ್ಮಿಕರಿಗೆ ₹3,000 ಪಿಂಚಣಿ, ₹2 ಲಕ್ಷ ವಿಮೆ – ನೀವು ಅರ್ಹರಾ?

By Dhanya.C Poojari
On: 03/03/2026 |
22 Views
E-Sharm Card Update 2026: ಕಾರ್ಮಿಕರಿಗೆ ₹3,000 ಪಿಂಚಣಿ, ₹2 ಲಕ್ಷ ವಿಮೆ – ನೀವು ಅರ್ಹರಾ?
---Advertisement---

E-Sharm Card Update 2026 : ತಿಂಗಳಿಗೆ ₹3,000 ಪಿಂಚಣಿ, ₹2 ಲಕ್ಷ ಅಪಘಾತ ವಿಮೆ ಮತ್ತು ₹5 ಲಕ್ಷ ಆರೋಗ್ಯ ವಿಮೆ ಸೌಲಭ್ಯ. ಅರ್ಹತೆ, ನೋಂದಣಿ ವಿಧಾನ, e-KYC ಅಪ್‌ಡೇಟ್ ಮತ್ತು ಮತ್ತಷ್ಟು ಲಾಭಗಳು ಈ ಲೇಖನದಲ್ಲಿದೆ ಸಂಪೂರ್ಣವಾಗಿ ಓದಿ.

ಕಾರ್ಮಿಕರಿಗೆ ಗುಡ್ ನ್ಯೂಸ್! ಭಾರತ ಸರ್ಕಾರದ ಪ್ರಮುಖ ಯೋಜನೆಯದ e-Shram ಕಾರ್ಡ್ ಇದೀಗ 2026ರಲ್ಲಿ ಅಪ್ಡೇಟ್ ಮಾಡಿಕೊಳ್ಳಲು ಸರ್ಕಾರ ಆದೇಶಿಸಿದ್ದಾರೆ. ಎಲ್ಲಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು ಈ ಕಾರ್ಡ್ ಬಹಳ ಮುಖ್ಯವಾಗಿದೆ. ಅಸಂಘಟಿತ ವಲಯ ಎಂದರೆ. ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆ ಕೆಲಸಗಾರರು, ಕೃಷಿ ಕಾರ್ಮಿಕರು, ಡೆಲಿವರಿ ಕೆಲಸಗಾರರು, ಇತ್ಯಾದಿ ಅನೇಕ ವಲಯದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಕೂಡ ಕಾರ್ಮಿಕ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಭಾರತ ಸರ್ಕಾರ ಸೂಚಿಸಿದ್ದಾರೆ.

ಈ ಲೇಖನದಲ್ಲಿ e-shram ಬಹುಮುಖ್ಯ ಲಾಭಗಳು ಮತ್ತು ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ಇ-ಕೆವೈ ಸಿ ಅಪ್ಡೇಟ್ ಹೇಗೆ ಮಾಡುವುದು ಎಂಬ ಸಂಪೂರ್ಣ ವಿವರ ಈ ಮಾಹಿತಿಯಲ್ಲಿ ನೀಡಲಾಗಿದೆ.

E-Sharm ಕಾರ್ಡ್ ಎಂದರೇನು ?

ಭಾರತ ಸರ್ಕಾರವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಡಿಜಿಟಲ್ ನೋಂದಣಿ ವ್ಯವಸ್ಥೆಯಿಂದ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಲು ಈ ಕಾರ್ಡ್ ಸಹಾಯವಾಗುತ್ತದೆ ಹಾಗೂ ಬಹು ಮುಖ್ಯವಾಗಿ ಕಾರ್ಮಿಕರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ನೇರವಾಗಿ ತಲುಪಿಸಲು ಸಹಾಯ ಮಾಡುತ್ತದೆ.

ತಿಂಗಳಿಗೆ ₹3000 ಪಿಂಚಣಿ ಸೌಲಭ್ಯ

E- Sharm ಕಾರ್ಡ್ ಹೊಂದಿದವರು Pradhan Mantri Shram Yogi Maandhan (PM-SYM) ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆ :

  • ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 40 ವರ್ಷದ ಒಳಗಿರಬೇಕು.
  • ಮುಖ್ಯವಾಗಿ ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿರಬೇಕು.

ಪ್ರಯೋಜನ :

  • ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ 60 ವರ್ಷದ ನಂತರ ತಿಂಗಳಿಗೆ 3000 ಪಿಂಚಣಿ ಬರುತ್ತದೆ.

2 ಲಕ್ಷ ಅಪಘಾತ ವಿಮೆ

e-Sharm ನೊಂದಾಯಿತ ಕಾರ್ಮಿಕರಿಗೆ ಅಪಘಾತ ಸಂದರ್ಭದಲ್ಲಿ ಭದ್ರತೆ ಸರ್ಕಾರದಿಂದ ನೀಡಲಾಗುತ್ತದೆ.

  • ಕಾರ್ಮಿಕರು ಆಕಸ್ಮಿಕ ಸಾವು ಹೊಂದಿದ್ದರೆ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ಪರಿಹಾರ ನೀಡಲಾಗುತ್ತದೆ.
  • ಕಾರ್ಮಿಕರಿಗೆ ಅಂಗವಿಕಲ್ಯಾಣ ಸಂಭವಿಸಿದ್ದರೆ ಸರ್ಕಾರದಿಂದ 1 ಲಕ್ಷ ಪರಿಹಾರ ಹಣ ನೀಡಲಾಗುತ್ತದೆ.

ಇದು ಸಾಮಾನ್ಯವಾಗಿ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಅಡಿಯಲ್ಲಿ ಬರುತ್ತದೆ.

ತುರ್ತು ಸಂದರ್ಭದಲ್ಲಿ DBT ಸಹಾಯ

ಪ್ರವಾಹ, ಸಾಂಕ್ರಮಿಕ ರೋಗ, ಅಥವಾ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದಿಂದ Direct Benefit Transfer ( DBT ) ಈ ಮೂಲಕ ಹಣವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜವ ಮಾಡಲಾಗುತ್ತದೆ. ಯಾವುದೇ ಮಧ್ಯವರ್ತಿಗಳ ಅಗತ್ಯವಿರುವುದಿಲ್ಲ.

5 ಲಕ್ಷ ಉಚಿತ ಚಿಕಿತ್ಸೆ

ಈ ಕಾರ್ಡ್ ಹೊಂದಿರುವ ಅರ್ಹ ಕುಟುಂಬಗಳು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜಾನ್ ಆರೋಗ್ಯ ಯೋಜನೆ ಅಡಿಯಲ್ಲಿ ವರ್ಷಕ್ಕೆ ಸುಮಾರು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.

ದೇಶದ್ಯಂತ ಪಡಿತರ ಸೌಲಭ್ಯ

One Nation One Ration Card ಈ ಯೋಜನೆಯ ಮೂಲಕ ನೀವು ಯಾವುದೇ ರಾಜ್ಯದಲ್ಲಿ ಇದ್ದರೂ ಕೂಡ ಪಡಿತರ ಪಡೆಯಬಹುದು. ಈ ಯೋಜನೆ ವಲಸೆ ಕಾರ್ಮಿಕರಿಗೆ ಬಹಳ ಉಪಯೋಗವಾಗುತ್ತದೆ.

e-Sharm ಕಾರ್ಡಿಗೆ ಅರ್ಹರು ?

  • ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು.
  • ವಯಸ್ಸು 18 ರಿಂದ 59 ವರ್ಷದ ಒಳಗಿರಬೇಕು.
  • ಆದಾಯ ತೆರಿಗೆ ಕಟ್ಟುತ್ತಿರಬಾರದು
  • EPFO ಮತ್ತು ESIC ಸದಸ್ಯರು ಆಗಿರಬಾರದು

ಬೇಕಾಗುವ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ ವಿವರ
  • ನಾಲ ಪಾಸ್ಪೋರ್ಟ್ ಸೈಜ್ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಪುರಾಮೆ ಅಗತ್ಯವಿದ್ದರೆ ಮಾತ್ರ.

e-KYC ಅಪ್ಡೇಟ್ ಕಡ್ಡಯ ?

ಹೌದು ಈ ಎಲ್ಲಾ ಯೋಜನೆಗಳನ್ನು ಪಡೆಯಲು e-Shram ಇ-ಕೆವೈಸಿ ಹೊಸದಾಗಿ ಅಪ್ಡೇಟ್ ಮಾಡಲು ಕಡ್ಡಾಯವಾಗಿದೆ. ಕೆ ವೈ ಸಿ ಅಪ್ಡೇಟ್ ಮಾಡಲು ಮತ್ತು ಹೊಸದಾಗಿ ನೋಂದಾಯಿಸಿಕೊಳ್ಳಲು ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಸೈಬರ್ ಸೆಂಟರ್ ಕಚೇರಿಗೆ ಭೇಟಿ ನೀಡಿ ಅಪ್ಡೇಟ್ ಮಾಡಿಕೊಳ್ಳಬಹುದು. ಅಪ್ಡೇಟ್ ಮಾಡಲು ಹೋಗುವಾಗ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಉದ್ಯೋಗ ಮಾಹಿತಿ, ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ.

ಅಧಿಕೃತ ವೆಬ್ಸೈಟ್ ಲಿಂಕ್ : https://eshram.gov.in/

Share
Founder of KarnatakaSuddi.com

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ಟೆಕ್, ಆಟೋಮೊಬೈಲ್, ಜ್ಯೋತಿಷ್ಯ, ರಾಜ್ಯ ಸುದ್ದಿ ಹಾಗೂ ಮನರಂಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment