Federal Bank Scholarship 2026 : ₹1 ಲಕ್ಷ ವಿದ್ಯಾರ್ಥಿವೇತನ | ಅರ್ಜಿ ಆರಂಭ | Apply Now

By Dhanya.C Poojari
On: 25/05/2026 |
13 Views
Federal Bank Scholarship 2026 : ₹1 ಲಕ್ಷ ವಿದ್ಯಾರ್ಥಿವೇತನ | ಅರ್ಜಿ ಆರಂಭ | Apply Now
---Advertisement---

Federal Bank Scholarship 2026 : ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ₹1 ಲಕ್ಷ ವರೆಗೆ ವಿದ್ಯಾರ್ಥಿವೇತನ. ಅರ್ಹತೆ, ಅರ್ಜಿ ಪ್ರಕ್ರಿಯೆ, ದಾಖಲೆಗಳು ಇಲ್ಲಿದೆ.

Federal Bank Scholarship 2026 : ರಾಜ್ಯದ ವಿದ್ಯಾರ್ಥಿಗಳಿಗೆ ( Federal Bank ) ಫೆಡರಲ್ ಬ್ಯಾಂಕ್ ಸಂಸ್ಥೆಯಿಂದ ಗುಡ್ ನ್ಯೂಸ್. ಫೆಡರಲ್ ಬ್ಯಾಂಕ್ ಈ ಸಂಸ್ಥೆಯು ಗುಜರಾತ್, ಕರ್ನಾಟಕ, ಕೇರಳ ,ಪಂಜಾಬ್, ಮತ್ತು ತಮಿಳ್ ನಾಡು ಪ್ರದೇಶದಲ್ಲಿ ಜನಪ್ರಿಯವಾದಂತ ಬ್ಯಾಂಕ್ ಸಂಸ್ಥೆಯಾಗಿದೆ. ಈ ಸಂಸ್ಥೆಯು ಇದೀಗ  ಪ್ರತಿಭಾವಂತ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಫೆದರಲ್ ಬ್ಯಾಂಕ್ ವಿದ್ಯಾರ್ಥಿಗಳಿಗೆ ಸುಮಾರು ₹1,00,000 ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 31/ 2025 ಅವಕಾಶವಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ. 

ಈ ಲೇಖನದಲ್ಲಿ ಅರ್ಜಿ ಅರ್ಹತೆ, ವಿದ್ಯಾರ್ಹತೆ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇದರಲ್ಲಿದೆ ಅರ್ಜಿ ಸಲ್ಲಿಸುವವರು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ. 

ಯಾರು ಅರ್ಜಿ ಸಲ್ಲಿಸಬಹುದು 

Federal Bank Scholarship 2026 : ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ಅರ್ಹತೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು. 

  • ಕೋರ್ಸ್ :-  MBBS, BE / B.Tech, B.Sc Nursing, MBA, B.Sc Agriculture, B.Sc (Honours) in Co-operation & Banking. ( ವಿದ್ಯಾರ್ಥಿಯು ಇದರಲ್ಲಿ ಯಾವುದಾದರೂ ಒಂದರಲ್ಲಿ ವ್ಯಾಸಾಂಗ ಮಾಡುತ್ತಿರಬೇಕು )
  • ಅಭ್ಯರ್ಥಿಯು ಕರ್ನಾಟಕದ ಖಯಂ ನಿವಾಸಿ ಆಗಿರಬೇಕು. 
  • ವಿದ್ಯಾರ್ಥಿಯು 2025-26ನೆಯ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ಪ್ರವೇಶ ಪಡೆದಿರಬೇಕು.
  • ವಿದ್ಯಾರ್ಥಿಯ ಕುಟುಂಬದ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು. 

Also Read :-  Sandhya Suraksha Scheme 2025 : ವಯಸ್ಸಾದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ₹1200 ರೂಪಾಯಿ ಪಡೆಯಿರಿ.

ಅಗತ್ಯ ದಾಖಲೆಗಳು 

  • ವಿದ್ಯಾರ್ಥಿಯ ಆಧಾರ್ ಕಾರ್ಡ್ 
  • ಪ್ರವೇಶ ಪತ್ರ  (Admission Letter)
  • ಆದಾಯ ಪ್ರಮಾಣ ಪತ್ರ 
  • ವಿದ್ಯಾರ್ಥಿಯ ಅಡ್ರೆಸ್ ಪ್ರೂಫ್ 
  • 4 ಪಾಸ್ಪೋರ್ಟ್ ಸೈಜ್ ಫೋಟೋ 
  • ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಅಗತ್ಯವಿದ್ದರೆ ಮಾತ್ರ.

ಅರ್ಜಿ ಸಲ್ಲಿಸುವ ವಿಧಾನ 

ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ಲೇಖನದಲ್ಲಿ ನೀಡಲಾಗಿದೆ. ಅರ್ಜಿದಾರರು ಲೇಖನವನ್ನು ಅನುಸರಿಸಿ. 

  • ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಥವಾ ಫೆಡರಲ್ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. 
  • ಹೊಸ ಬಳಕೆದಾರರಾದರೆ Create an Account ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಹೊಸದಾಗಿ ಖಾತೆಯನ್ನು ರಚಿಸಿಕೊಳ್ಳಿ 
  • ಲಾಗಿನ್ ಮಾಡಿ : ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿ ಲಾಗಿನ್ ಮಾಡಿಕೊಳ್ಳಿ 
  • ಲಾಗಿನ್ ಮಾಡಿದ ನಂತರ “Federal Bank Scholarship 2025-26” ಬಟನ್ ಮೇಲೆ ಕ್ಲಿಕ್ ಮಾಡಿ. 
  • ಅರ್ಜಿ ಭರ್ತಿ ಮಾಡಿ : ನಂತರ ನಿಮ್ಮ ಮುಂದೆ ಒಂದು ಅರ್ಜಿ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ಎಲ್ಲಾ ಅಗತ್ಯ ವೈಯಕ್ತಿಕ ವಿವರದೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ. 
  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ. (PDF/JPEG) ಅಗತ್ಯ ದಾಖಲೆಗಳ ಪಟ್ಟಿ ಮೇಲೆ ಲೇಖನದಲ್ಲಿ ನೀಡಲಾಗಿದೆ. 
  • ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ನಿಮ್ಮ ಅರ್ಜಿಯನ್ನು ಸಂಪೂರ್ಣವಾಗಿ ಮತ್ತೊಂದು ಸಲ ಪರಿಶೀಲಿಸಿ. ಎಲವು ಸರಿ ಇದ್ದರೆ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?

ಅರ್ಜಿ ಸಲ್ಲಿಸಲು ಡಿಸೆಂಬರ್ 31/ 2025 ರಂದು ಕೊನೆಯ ದಿನಾಂಕ ವಾಗಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

For More Information – ಹೆಚ್ಚಿನ ಮಾಹಿತಿಗೆ

Federal Bank Scholarship 2026 : ಈ ವಿದ್ಯಾರ್ಥಿವೇತನದ ಕುರಿತು ಅಧಿಕೃತ ಹಾಗೂ ಸಂಪೂರ್ಣ ಮಾಹಿತಿಗಾಗಿ
ಅಧಿಕೃತ ವೆಬ್‌ಸೈಟ್ ಲಿಂಕ್ : Click Here

Share
Founder of KarnatakaSuddi.com

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ಟೆಕ್, ಆಟೋಮೊಬೈಲ್, ಜ್ಯೋತಿಷ್ಯ, ರಾಜ್ಯ ಸುದ್ದಿ ಹಾಗೂ ಮನರಂಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment