Shakti Smart Card : ಫ್ರೀ ಬಸ್ ಪ್ರಯಾಣಕ್ಕೆ ಹೊಸ ನಿಯಮ! ಮಹಿಳೆಯರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ – ಹೇಗೆ ಪಡೆಯುವುದು?

By Dhanya.C Poojari
On: 16/02/2026 |
11 Views
Shakti Smart Card : ಫ್ರೀ ಬಸ್ ಪ್ರಯಾಣಕ್ಕೆ ಹೊಸ ನಿಯಮ! ಮಹಿಳೆಯರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ – ಹೇಗೆ ಪಡೆಯುವುದು?
---Advertisement---

Shakti Smart Card : ಮುಖ್ಯ ಸುದ್ದಿ ,ಇನ್ಮುಂದೆ ಫ್ರೀ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ!

Shakti Smart Card : ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ದೊಡ್ಡ ಬದಲಾವಣೆ ತರುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತ ಬಸ್ ಪ್ರಯಾಣಿಸುತ್ತಿದ್ದಾರೆ. ಆದರೆ ಇನ್ನು ಮುಂದೆ ಫ್ರೀ ಬಸ್ ಪ್ರಯಾಣ ಪಡೆಯಲು ಹೊಸ ನಿಯಮದ ಪ್ರಕಾರ ಶಕ್ತಿ ಸ್ಮಾರ್ಟ್ ಕಾರ್ಡ್ ಬರಲಿದೆ.

Shakti Smart Card : ಈ ಕಾರ್ಡ್ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಚಿತ ಪ್ರಯಾಣ ಸಿಗದೇ ಇರಬಹುದು. ಹಾಗಾದರೆ ಈ ಕಾರ್ಡ್ ಏನು? ಯಾಕೆ ತರಲಾಗುತ್ತಿದೆ? ಹೇಗೆ ಪಡೆಯಬೇಕು? ಇಲ್ಲಿದೆ ನೋಡಿ ಮಾಹಿತಿ.

ಉಚಿತ ಬಸ್ ಪ್ರಯಾಣಕ್ಕೆ ಹೊಸ ನಿಯಮ

Shakti Smart Card : ಇದೀಗ ಮಹಿಳೆಯರು KSRTC, BMTC ಸೇರಿದಂತೆ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಬಸ್ ಕಂಡಕ್ಟರ್ ಗೆ ಆಧಾರ್ ಕಾರ್ಡ್ ಅಥವಾ ಐಡಿ ತೋರಿಸಿದರೆ ಸಾಕಿತ್ತು ಆದರೆ ಈ ಹೊಸ ನಿಯಮದ ಪ್ರಕಾರ ನಿಮ್ಮ ಹತ್ತಿರ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಿ ಇರಬೇಕು. ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಉಚಿತ ಬಸ್ ಟಿಕೆಟ್ ಸಿಗಲಿದೆ .

ಶಕ್ತಿ ಕಾರ್ಡ್ ಏಕೆ ಜಾರಿ ತರುತ್ತಿದ್ದಾರೆ ?

ಮಹಿಳೆಯರ ಪ್ರಯಾಣದ ನಿಖರ ಮಾಹಿತಿ ಅಥವಾ ಡೇಟಾ ಸಂಗ್ರಹಿಸಲು ಮತ್ತು ನಕಲಿ ಐಡಿ ಬಳಸಿ ಉಚಿತ ಪ್ರಯತ್ನವನ್ನು ತಡೆಯಲು ಈ ಕಾರ್ಡ್ ಬಹಳ ಪ್ರಯೋಜನಕಾರಿಯಾಗಿದೆ.

ಈ ಕಾರ್ಡ್ ಪಡೆದುಕೊಳ್ಳಲು ಹಣ ಪಾವತಿಸಬೇಕೆ ?

ಇಲ್ಲ. ಈ ಕಾರ್ಡ್ ಸಂಪೂರ್ಣ ಉಚಿತವಾಗಿದೆ ಮಹಿಳೆಯರು ಯಾವುದೇ ರೀತಿಯ ಶುಲ್ಕ ಪಾವತಿಸಲು ಅಗತ್ಯವಿರುವುದಿಲ್ಲ.

ಈ ಕಾರ್ಡಿಗೆ ಅರ್ಜಿ ಎಲ್ಲಿ ಸಲ್ಲಿಸಬೇಕು.

ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ನಿಮ್ಮ ಹತ್ತಿರದ ಗ್ರಾಮವನ್ ಅಥವಾ ಕೇಂದ್ರ ಒನ್ ಭೇಟಿ ನೀಡಿ. ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬಹುದು.

ಈ ಹೊಸ ನಿಯಮ ಯಾವಾಗಲಿಂದ ಜಾರಿ ?

ರಾಜ್ಯ ಸರ್ಕಾರ ಸೂಚಿಸಿದಂತೆ ಈ ಹೊಸ ನಿಯಮಗಳು ಜೂನ್ ವೇಳೆಗೆ ಜಾರಿಗೆ ಬರಬಹುದೆಂದು ಅಧಿಕೃತವಾಗಿ ಘೋಷಿಸಿದ್ದಾರೆ. ಜೂನ್ ತಿಂಗಳಿನಿಂದ ಹೊಸದಾಗಿ ನೋಂದಣಿ ಪ್ರಾರಂಭವಾಗುತ್ತದೆ.

ಮುಖ್ಯ ಸೂಚನೆ

Shakti Smart Card : ಗಮನಿಸಿ ಜೂನ್ ತಿಂಗಳಿನಿಂದ ನಿಮ್ಮ ಹತ್ತಿರ ಸ್ಮಾರ್ಟ್ ಕಾರ್ಡ್ ಇಲ್ಲವೆಂದರೆ ನಿಮಗೆ ಫ್ರೀ ಬಸ್ ಟಿಕೆಟ್ ಸಿಗುವುದಿಲ್ಲ . ಅದಕ್ಕಾಗಿ ಸರ್ಕಾರ ಪ್ರಕಟಣೆ ಮಾಡಿದ ಕೂಡಲೇ ನಿಮ್ಮ ಹತ್ತಿರದ ಗ್ರಾಮವನ್ ಅಥವಾ ಕೇಂದ್ರವನ್ ಕಚೇರಿಗೆ ಭೇಟಿ ನೀಡಿ ಶಕ್ತಿ ಸ್ಮಾರ್ಟ್ ಕಾರ್ಡಿಗೆ ಅರ್ಜಿ ಸಲ್ಲಿಸಿ.

Share
Founder of KarnatakaSuddi.com

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ಟೆಕ್, ಆಟೋಮೊಬೈಲ್, ಜ್ಯೋತಿಷ್ಯ, ರಾಜ್ಯ ಸುದ್ದಿ ಹಾಗೂ ಮನರಂಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment