Sandhya Suraksha Scheme 2025 : ವಯಸ್ಸಾದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ₹1200 ರೂಪಾಯಿ ಪಡೆಯಿರಿ.

karnatakasuddi.com

By: Karnataka Suddi

On: Friday, December 12, 2025 10:10 AM

Sandhya Suraksha Scheme 2025 : ವಯಸ್ಸಾದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ₹1200 ರೂಪಾಯಿ ಪಡೆಯಿರಿ.
| Follow Us |

Sandhya Suraksha Scheme 2025 : ಸಂಧ್ಯಾ ಸುರಕ್ಷಾ ಯೋಜನೆ ವಯಸ್ಸಾದವರಿಗೆ ಸರ್ಕಾರದಿಂದ ದೊಡ್ಡ ಗಿಫ್ಟ್! ಇನ್ನು ಮುಂದೆ ವಯಸ್ಕರರ ಖಾತೆಗೆ ಪ್ರತಿ ತಿಂಗಳು ₹1,200 ರೂಪಾಯಿ ನೇರವಾಗಿ ಜಯವಾಗುತ್ತದೆ.

Sandhya Suraksha Scheme 2025 : ಕರ್ನಾಟಕ ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿದರೆ ಇನ್ನು ಮುಂದೆ ನಿಮಗೆ ಪ್ರತಿ ತಿಂಗಳು ಸುಮಾರು ₹1200 ರೂಪಾಯಿ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗುತ್ತದೆ. ಈ ಯೋಜನೆಗೆ ಅರ್ಜಿ ವಿಧಾನ, ಕೊನೆಯ ದಿನಾಂಕ, ಅರ್ಹತೆ, ಮತ್ತು ಅಗತ್ಯ ದಾಖಲೆಗಳನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ. 

Also Read :-  DRDO Recruitment 2025 : 764 ಹುದ್ದೆಗಳು ಬಿಡುಗಡೆ! ಅರ್ಜಿ ಹಾಕುವ ವಿಧಾನ, ಅರ್ಹತೆ, ವೇತನ – ಸಂಪೂರ್ಣ ಮಾಹಿತಿ!

ಸಂಧ್ಯಾ ಸುರಕ್ಷಾ ಯೋಜನೆ 

ವಿಷಯವಿವರ
ಯೋಜನೆಯ ಹೆಸರುಸಂಧ್ಯಾ ಸುರಕ್ಷಾ ಯೋಜನೆ
ಯಾರಿಗೆ65+ ವಯಸ್ಸಿನ ಕಡಿಮೆ ಆದಾಯದ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ
ಪಿಂಚಣಿ ಮೊತ್ತ₹1,200 / ತಿಂಗಳು
ಅಸ್ತಿತ್ವ ಪರಿಶೀಲನೆವಾರ್ಷಿಕ ಲೈಫ್ ಸರ್ಟಿಫಿಕೆಟ್ ಕಡ್ಡಾಯ
ಅರ್ಜಿಯ ವಿಧಾನಆನ್‌ಲೈನ್ / ಆಫ್‌ಲೈನ್
ಅಧಿಕೃತ ಜಾಲತಾಣnadakacheri.karnataka.gov.in

ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ? 

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವವರು ಕೆಳಗಿನ ಹಂತದ ಅಂಶಗಳನ್ನು ಒಳಗೊಂಡಿರಬೇಕು. 

  • ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರಬೇಕು. 
  • ಅರ್ಜಿದಾರರಿಗೆ ಕನಿಷ್ಠ 65 ವರ್ಷಗಳು ಕಡ್ಡಾಯವಾಗಿ ಇರಬೇಕು. 
  • ಕುಟುಂಬದ ವಾರ್ಷಿಕ ಆದಾಯವು ಏಕಾಂಗಿಗಳಾದರೆ 20,000 ಕ್ಕಿಂತ ಕಡಿಮೆ ಇರಬೇಕು ಹಾಗೂ ದಂಪತಿಗಳಾದರೆ 32,೦೦೦ ಕ್ಕಿಂತ ಕಡಿಮೆ ಇರಬೇಕು.
  • ಸಣ್ಣ ರೈತರು, ನೇಕಾರರು, ಮೀನುಗಾರರು, ಕಾರ್ಮಿಕರು, ಇಂತಹ ಹಲವಾರು ವೃದ್ಧರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. 
  • ಈ ಯೋಜನೆ ಪಡೆಯಲು ಯಾವುದೇ ರೀತಿಯ ವಯಸ್ಕರ ಪಿಂಚಣಿ ಪಡಿಯುತ್ತಿರಬಾರದು.

ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳು ? 

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ಇರಬೇಕು. ನೀವೇ ಸ್ವತಃ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದಾದರೆ ನಿಮ್ಮ ದಾಖಲೆಗಳನ್ನು PDF / JPEG ಈ ರೂಪದಲ್ಲಿ ಅಪ್ಲೋಡ್ ಮಾಡಿಕೊಳ್ಳಬೇಕು. 

  • ಅರ್ಜಿದಾರರ ಆಧಾರ್ ಕಾರ್ಡ್ 
  • ಮತದಾರರ ಚೀಟಿ 
  • ಜನನ ಪ್ರಮಾಣ ಪತ್ರ 
  • ನಿವಾಸ ಪ್ರಮಾಣ ಪತ್ರ 
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ 
  • ಆದಾಯ ಪ್ರಮಾಣ ಪತ್ರ 
  • 4 ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಹೇಗೆ ಸಲ್ಲಿಸುವುದು ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಎರಡು ರೀತಿಯಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಮೊದಲನೆಯದು ಆನ್ಲೈನ್ ಮೂಲಕ ಹಾಗೂ ಎರಡನೆಯದು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ?

  • ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ nadakacheri.karnataka.gov.in ಗೆ ಭೇಟಿ ನೀಡಿ 
  • ನಂತರ “Online Application” ಇದನ್ನು ಆಯ್ಕೆ ಮಾಡಿಕೊಳ್ಳಿ 
  • ನಿಮ್ಮ ಮೊಬೈಲ್ ಸಂಖ್ಯೆ ಬಳಸಿ OTP ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಿ 
  • ‘Sandhya Suraksha’ ಸೇವೆಯನ್ನು ಆರಿಸಿಕೊಳ್ಳಿ 
  • ನಿಮ್ಮ ಮುಂದೆ ಒಂದು ಅರ್ಜಿಯ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ಎಲ್ಲಾ ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ 
  • ನಂತರ ನಿಮ್ಮ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಅಗತ್ಯ ವಿವರಗಳ ಪಟ್ಟಿ ಮೇಲೆ ಲೇಖನದಲ್ಲಿ ನೀಡಲಾಗಿದೆ. 
  • ಅರ್ಜಿ ಶುಲ್ಕ ಪಾವತಿಸಿ 
  • ಕೊನೆಯದಾಗಿ ನಿಮ್ಮ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ನಂತರ ನಿಮ್ಮ ಅರ್ಜಿ ಫಾರಂ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. 
  • ಅರ್ಜಿ ಸಲ್ಲಿಸಿದ ನಂತರ Acknowledgement slip ಇದನ್ನು ಡೌನ್ಲೋಡ್ ಮಾಡಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. 

ಆಫ್ಲೈನ್ ಮೂಲಕ ಅರ್ಜಿ ಹೇಗೆ ಸಲ್ಲಿಸುವುದು ?

ನೀವು ನಿಮ್ಮ ಅರ್ಜಿಯನ್ನು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ನೀವು ನಾಡಕಚೇರಿ ಅಥವಾ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ತುಂಬಾ ಸುಲಭವಾಗಿ ಸಲ್ಲಿಸಬಹುದು. ಹೋಗುವಾಗ ಮೇಲೆ ನೀಡಿರುವ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ. 

ಈ ಯೋಜನೆಯಿಂದ ಆಗುವ ಲಾಭಗಳು ?

ಸಂಧ್ಯಾ ಸುರಕ್ಷಾ ಯೋಜನೆಯಿಂದ ಒಟ್ಟು 4 ರೀತಿಯ ಲಾಭಗಳಿವೆ. 

  • ಪ್ರತಿ ತಿಂಗಳು ₹1,200 : ಈ ಯೋಜನೆಯಿಂದ 65 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ಸುಮಾರು ₹1,200 ರೂಪಾಯಿ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾವಾಗುತ್ತದೆ. 
  • ವೈದ್ಯಕೀಯ ಸೌಲಭ್ಯ : ಈ ಯೋಜನೆಯಿಂದ ಅರ್ಜಿದಾರರಿಗೆ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆಯು ಕೂಡ ನೆರವಾಗುತ್ತದೆ. 
  • KSRTC ಪಾಸ್ ರಿಯಾಯಿತಿ : ಹಿರಿಯ ನಾಗರಿಕರಿಗೆ ಪ್ರಯಣಕ್ಕೆ KSRTC ಬಸ್ ಪಾಸ್ ಮೇಲೆ ವಿಶೇಷವಾದ ರಿಯಾಯಿತಿಯು ಕೂಡ ಇರುತ್ತದೆ. 
  • ಸುರಕ್ಷತಾ ನೆರವು : ಸರ್ಕಾರದ ಹಿರಿಯ ನಾಗರಿಕರಿಗೆ ವಿಶೇಷವಾದ ಹೆಲ್ಪ್ ಲೈನ್ ಹಾಗೂ ಡಿಕೆ ಕೇಂದ್ರಗಳನ್ನು ನಿರ್ವಹಿಸುತ್ತದೆ. ತುರ್ತು ಸಂದರ್ಭದಲ್ಲಿ ಸಹಾಯವಾಣಿಯು ಸೇವೆಯಿಂದ ತಕ್ಷಣ ಸಹಾಯ ಲಭಿಸುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?

ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ಸರ್ಕಾರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಇನ್ನು ಸೂಚಿಸಿಲ್ಲ. ಆದರೆ ಇದು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಅರ್ಜಿದಾರರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

Also Read :-  IOCL Recruitment 2025 : IOCL ಸಂಸ್ಥೆಯಲ್ಲಿ ಖಾಲಿ ಇರುವ 2776 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಈ ಸಂಧ್ಯಾ ಸುರಕ್ಷಾ ಯೋಜನೆಯಿಂದ ವಯಸ್ಕರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು. ಏಕೆಂದರೆ ವಯಸ್ಸಾದವರ ಜೀವನವನ್ನು ಸಾವಲಂಭಿಯಾಗಿ ಮತ್ತು ಉತ್ತಮವಾಗಿ ನಡೆಸಲು ಸರ್ಕಾರವೇ ಸಂಧ್ಯಾ ಸುರಕ್ಷಾ ಯೋಜನೆ ಎಂಬ ಅತ್ಯುತ್ತಮ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಯೋಜನೆಯಿಂದ ಅರ್ಜಿದಾರರಿಗೆ ಪ್ರತಿ ತಿಂಗಳು  ₹ 1,200 ರೂಪಾಯಿ ನೇರವಾಗಿ ವಯಸ್ಕರ ಖಾತೆಗೆ ಜಮವಾಗುತ್ತದೆ. ಆದಷ್ಟು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ. ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್ ಕೆಳಗೆ ನೀಡಲಾಗಿದೆ. 

ಅರ್ಜಿ ಸಲ್ಲಿಸುವ ಲಿಂಕ್ 

Apply Link : https://nadakacheri.karnataka.gov.in/AJSK/ 

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment