Aadhaar Card update : 5 ರಿಂದ 17 ವರ್ಷದ ಮಕ್ಕಳಿಗೆ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

By: Dhanya.C Poojari

On: Tuesday, April 21, 2026 6:21 PM

Aadhaar Card update : 5 ರಿಂದ 17 ವರ್ಷದ ಮಕ್ಕಳಿಗೆ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
---Advertisement---

Aadhaar Card update : 5 ರಿಂದ 17 ವರ್ಷದ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯ. ವಿದ್ಯಾರ್ಥಿ ವೇತನ, ಶಾಲಾ ದಾಖಲಾತಿ, SSLC ಪರೀಕ್ಷೆಗೆ ಅಗತ್ಯ. ಸೆಪ್ಟೆಂಬರ್ 30, 2026 ರೊಳಗೆ ಉಚಿತವಾಗಿ ಹೇಗೆ ಅಪ್‌ಡೇಟ್ ಮಾಡಿಸಬೇಕು ತಿಳಿದುಕೊಳ್ಳಿ.

ಕರ್ನಾಟಕದ ಪೋಷಕರಿಗೆ ಮುಖ್ಯ ಸುದ್ದಿ : 5 ರಿಂದ 17 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಅಪ್ಡೇಟ್ ಮಾಡಲು ಸರ್ಕಾರ ಕಡ್ಡಾಯಗೊಳಿಸಿದೆ. ಶಾಲಾ ದಾಖಲಾತಿ ಮತ್ತು ವಿದ್ಯಾರ್ಥಿ ವೇತನ, ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇದು ಬಹಳ ಅಗತ್ಯವಾಗಿದೆ. ಒಂದು ವೇಳೆ ಇದನ್ನು ಮಾಡಿಸಿಲ್ಲವೆಂದರೆ ನಿಮಗೆ ಸಿಗಬೇಕಾದ ಸರ್ಕಾರಿ ಯೋಜನೆಗಳು ಇನ್ನು ಮುಂದೆ ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದ್ದಾರೆ.

Aadhaar Card update : ಯಾಕೆ ಅಪ್ಡೇಟ್ ಮಾಡಿಸಬೇಕು ?

ಐದು ವರ್ಷಕ್ಕಿಂತ ಮೊದಲು ತೆಗೆಸಿದ ಆಧಾರ್ ಕಾರ್ಡಿನಲ್ಲಿ ಬೆರಳಚ್ಚು ಮತ್ತು ಕಣ್ಣಿನ ಗುರುತುಗಳು ಸಂಪೂರ್ಣವಾಗಿ ದಾಖಲಾಗುವುದಿಲ್ಲ. ಮಗು ಬೆಳೆದಂತೆ ಬಯೋಮೆಟ್ರಿಕ್ ಬದಲಾಗುತ್ತದೆ ಆದ್ದರಿಂದ 5 ವರ್ಷ ಮತ್ತು 15 ವರ್ಷದಲ್ಲಿ ಮತ್ತೊಮ್ಮೆ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಪೋಷಕರ ನಿರ್ಲಕ್ಷೆಯಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೆಂದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ಇನ್ ಆಕ್ಟಿವ್ ( inactive) ಆಗುತ್ತದೆ. ಒಂದು ಸಲ ನಿಮ್ಮ ಮಗುವಿನ ಆಧಾರ್ ಕಾರ್ಡ್ ಇನ್ ಆಕ್ಟಿವ್ ಆದರೆ ನಿಮ್ಮ ಮಗುವಿಗೆ ಸಿಗಬೇಕಾದ ವಿದ್ಯಾರ್ಥಿ ವೇತನ ಸರ್ಕಾರಿ ಸೌಲಭ್ಯಗಳು ತಕ್ಷಣ ನಿಂತು ಹೋಗುತ್ತದೆ.

ಅಪ್ಡೇಟ್ ಮಾಡಿಲ್ಲವೆಂದರೆ ಏನು ಸಮಸ್ಯೆ ?

  • ವಿದ್ಯಾರ್ಥಿ ವೇತನ ಹಣ ಬರುವುದಿಲ್ಲ
  • ಹೊಸ ಶಾಲೆ ಹಾಗೂ ಕಾಲೇಜಿಗೆ ಸೇರಲು ತೊಂದರೆಯಾಗುತ್ತದೆ
  • ಎಸ್ ಎಸ್ ಎಲ್ ಸಿ ಪರೀಕ್ಷಾ ನೋಂದಣಿಯಲ್ಲಿ ಸಮಸ್ಯೆ ಬರಬಹುದು
  • ಸರ್ಕಾರದ ಉಚಿತ ಯೋಜನೆಗಳ ಲಾಭ ತಪ್ಪುವುದು.

ಆಧಾರ್ ಕಾರ್ಡ್ ಅಪ್ಡೇಟ್ ಎಲ್ಲಿ ಮಾಡಿಸಬೇಕು ?

ನಿಮ್ಮ ಮಗುವಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು.

ಅಪ್ಡೇಟ್ ಮಾಡಿಸಲು ಕೊನೆಯ ದಿನಾಂಕ ?

ನಿಮ್ಮ ಮಗುವಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಸರ್ಕಾರ 30 ಸೆಪ್ಟೆಂಬರ್ 2026 ರಂದು ಸರ್ಕಾರ ಡೆಡ್ ಲೈನ್ ನೀಡಿದ್ದಾರೆ. ಸಮಯ ವ್ಯರ್ಥ ಮಾಡದೆ ಆದಷ್ಟು ಬೇಗ ಅಪ್ಡೇಟ್ ಮಾಡಿಸಿ.

ಅಪ್ಡೇಟ್ ಮಾಡಿಸಲು ಬೇಕಾಗುವ ಅಗತ್ಯ ದಾಖಲೆಗಳು ?

  • ಮಗುವಿನ ಆಧಾರ್ ಕಾರ್ಡ್
  • ಜನ್ಮ ಪ್ರಮಾಣ ಪತ್ರ
  • ಶಾಲೆಯ ಅಥವಾ ಕಾಲೇಜಿನ ಐಡಿ ಕಾರ್ಡ್
  • ಪೋಷಕರ ಆಧಾರ್ ಕಾರ್ಡ್
  • ನಿಮ್ಮ ಮಗುವಿನ ಪಾಸ್ಪೋರ್ಟ್ ಸೈಜ್ ಫೋಟೋ

Aadhaar Card update : ಕೊನೆಯ ದಿನಾಂಕದವರೆಗೂ ಕಾಯದೆ ನಿಮ್ಮ ಮಗುವಿಗೆ ಆದಷ್ಟು ಬೇಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ. ಇದೇ ರೀತಿಯ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ..

Share

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ರಾಜ್ಯ ಸುದ್ದಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment