Ganga Kalyana Yojane 2026 : ಗಂಗಾ ಕಲ್ಯಾಣ ಯೋಜನೆ 2026ರಲ್ಲಿ ವಿದ್ಯುತ್ ಸಬ್ಸಿಡಿ ₹1.5 ಲಕ್ಷಕ್ಕೆ ಏರಿಕೆ. ₹3.5–₹4 ಲಕ್ಷ ಸಹಾಯಧನ, ಜೂನ್–ಆಗಸ್ಟ್ 2026 ಅರ್ಜಿ ದಿನಾಂಕ, ಅರ್ಹತೆ ಮತ್ತು ದಾಖಲೆಗಳ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
| ವಿವರ | ಮಾಹಿತಿ |
|---|---|
| ವಿದ್ಯುತ್ ಸಬ್ಸಿಡಿ | ₹75,000 → ₹1,50,000 |
| ಒಟ್ಟು ಸಹಾಯಧನ | ₹3.50 ಲಕ್ಷದಿಂದ ₹4 ಲಕ್ಷ |
| ಅರ್ಜಿ ದಿನಾಂಕ | ಪ್ರಾರಂಭವಾಗಿದೆ. |
| ಅರ್ಜಿ ವಿಧಾನ | ಆನ್ಲೈನ್ / ನಿಗಮ ಕಚೇರಿ |
| ಅರ್ಹರು | ಸಣ್ಣ ಮತ್ತು ಅತಿ ಸಣ್ಣ ರೈತರು |
Ganga Kalyana Yojane 2026 : ಇಂದು ಕರ್ನಾಟಕ ರಾಜ್ಯ ಸರ್ಕಾರವು ಸಣ್ಣ ರೈತರಿಗೆ ಭರ್ಜರಿ ಸುದ್ದಿ ನೀಡಿದ್ದಾರೆ. 2026-27ನೆ ಸಾಲಿನ ಗಂಗಾ ಕಲ್ಯಾಣ ಯೋಜನೆಗೆ ಹೆಚ್ಚುವರಿ ಅನುದಾನ ನೀಡಲಾಗಿದ್ದು, ವಿಶೇಷವಾಗಿ ವಿದ್ಯುತ್ ಸಂಪರ್ಕ ಸಬ್ಸಿಡಿ ಮೊತ್ತವನ್ನು ದುಪ್ಪಟ್ಟು ಮಾಡಲಾಗಿದೆ.
ಬಜೆಟ್ 2026-27ರಲ್ಲಿ ಪ್ರಮುಖ ಬದಲಾವಣೆಗಳು ಆಗಿವೆ.
- ವಿದ್ಯುತ್ ಸಂಪರ್ಕ ಸಬ್ಸಿಡಿ ಮೊತ್ತ ₹75,000ರಿಂದ ₹1,50,000ಕ್ಕೆ ಹೆಚ್ಚಿಸಲಾಗಿದೆ.
- ಬೋರ್‌ವೆಲ್, ಪಂಪ್‌ಸೆಟ್ ಮತ್ತು ವಿದ್ಯುತ್ ಸಂಪರ್ಕ ಸೇರಿ ಒಟ್ಟು ಘಟಕ ವೆಚ್ಚಕ್ಕೆ ಹೆಚ್ಚಿನ ಸಹಾಯಧನ.
- ಹಣದ ಕೊರತೆಯಿಂದ ವಿದ್ಯುತ್ ಸಂಪರ್ಕ ಪಡೆಯಲು ಆಗದ ರೈತರಿಗೆ ಇದು ಸಹಾಯಕರ.
ರೈತರಿಗೆ ಸಹಾಯಧನ ಎಷ್ಟು ಸಿಗಲಿದೆ ?
ಗಂಗಾ ಕಲ್ಯಾಣ ಯೋಜನೆಯು ಜಿಲ್ಲೆಯ ಅಂತರ್ಜಲ ಮಟ್ಟದ ಆಧಾರದ ಮೇಲೆ ಸಹಾಯಧನವು ಬದಲಾಗುತ್ತದೆ.
ಬಯಲು ಸೀಮೆ ಜಿಲ್ಲೆಗಳಲ್ಲಿ ಗರಿಷ್ಠ 4 ಲಕ್ಷ ಸಹಾಯಧನ
- ಬೆಂಗಳೂರು ಗ್ರಾಮಾಂತರ
- ಕೋಲಾರ
- ಚಿಕ್ಕಬಳ್ಳಾಪುರ
- ರಾಮನಗರ
- ಈ ಮೊತ್ತದಲ್ಲಿ:
- ಬೋರ್‌ವೆಲ್ ಕೊರೆಸುವುದು
- ಪಂಪ್‌ಸೆಟ್ ಅಳವಡಿಕೆ
- ವಿದ್ಯುತ್ ಸಂಪರ್ಕ ಸಬ್ಸಿಡಿ (₹1.5 ಲಕ್ಷವರೆಗೆ)
- ಎಲ್ಲವೂ ಸೇರಿರುತ್ತದೆ.
ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಗರಿಷ್ಠ ₹3.50 ಲಕ್ಷದವರೆಗೂ ಸಹಾಯಧನ ನೀಡಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
- ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ನಿವಾಸಿ ಆಗಿರಬೇಕು
- ಹಾಗೂ ರೈತರಿಗೆ 2.5 ಎಕರೆಯಿಂದ 5 ಎಕರೆ ಒಳಗಿನ ಭೂಮಿ ಹೊಂದಿರಬೇಕು
ರೈತರು ಯಾವ ನಿಗಮದ ಮೂಲಕ ಅರ್ಜಿ ಸಲ್ಲಿಸಬೇಕು?
Ganga Kalyana Yojane 2026 : ರೈತರ ಜಾತಿಯ ಆಧಾರದ ಮೇಲೆ ಸಂಬಂಧಿಸಿದ ನಿಗಮದಲ್ಲಿ ಅರ್ಜಿ ಸಲ್ಲಿಸಬೇಕು:
- ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ (SC)
- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ (ST)
- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (OBC)
- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC)
- ಲಿಂಗಾಯತ, ಒಕ್ಕಲಿಗ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ನಿಗಮಗಳು
ಅರ್ಜಿ ಸಲ್ಲಿಸುವ ವಿಧಾನ ?
Ganga Kalyana Yojane 2026 : ಗಂಗಾ ಕಲ್ಯಾಣ ಯೋಜನೆಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು, ನಿಮ್ಮ ಹತ್ತಿರದ ಗ್ರಾಮ ಒನ್ ಕಚೇರಿ, ಸೈಬರ್ ಸೆಂಟರ್, ಅಥವಾ ನಿಮ್ಮ ಜಿಲ್ಲೆಯ ತೋಟಗಾರಿಕೆ ಇಲಾಖೆಗೆ ಬೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಹೋಗುವಾಗ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ತೆಗೆದುಕೊಂಡು ಹೋಗಿ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ?
- ಅರ್ಜಿದಾರರ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಜಮೀನಿನ ಪಹಣಿ (RTC)
- ಸಣ್ಣ/ಅತಿ ಸಣ್ಣ ರೈತ ದೃಢೀಕರಣ ಪತ್ರ (ಕಡ್ಡಾಯ)
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- BPL ರೇಷನ್ ಕಾರ್ಡ್
- ಪಾಸ್‌ಪೋರ್ಟ್ ಸೈಜ್ ಫೋಟೋ
ರೈತರಿಗೆ ಮುಖ್ಯ ಸೂಚನೆಗಳು ?
- ಅರ್ಜಿ ಸಲ್ಲಿಸಲು ಕಚೇರಿಗಳಿಗೆ ಹೋಗುವಾಗ ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
- ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒಂದು ಕಚೇರಿ ಅಥವಾ ನಿಮ್ಮ ಜಿಲ್ಲೆಯ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?
Ganga Kalyana Yojane 2026 :ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸರ್ಕಾರ ಇನ್ನು ಘೋಷಿಸಿಲ್ಲ. ಆದರೆ ಈ ಯೋಜನೆ ಕೆಲವೇ ದಿನಗಳ ಮಾತ್ರ ಇರುತ್ತದೆ. ರೈತರು ಆದಷ್ಟು ಬೇಗ ಸಮಯ ವ್ಯರ್ಥ ಮಾಡದೆ ಅರ್ಜಿಯನ್ನು ಸಲ್ಲಿಸಿ.
Ganga Kalyana Yojane 2026 : ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಹಳ ಉಪಯುಕ್ತ ಯೋಜನೆ ಇದಾಗಿದೆ. ವಿಶೇಷವಾಗಿ ವಿದ್ಯುತ್ ಸಬ್ಸಿಡಿ ಹಣ ಡಬ್ಬಲ್ ಆಗಿರುವುದರಿಂದ ನಿಮಗೆ ಸುಮಾರು ₹1.5 ಲಕ್ಷಕ್ಕೆ ಹೆಚ್ಚಳದಿಂದ ರೈತರು ನೇರವಾಗಿ ಲಾಭ ಪಡೆಯಬಹುದು. ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಪ್ರಕಟ ಮಾಡಿಲ್ಲ ಆದರೆ ಇದು ಕೆಲವೇ ದಿನದಲ್ಲಿ ಮುಕ್ತಾಯಗೊಳ್ಳಬಹುದು. ರೈತರು ಸಮಯ ವ್ಯರ್ಥ ಮಾಡದೆ ಆದಷ್ಟು ಬೇಗ ಈ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ. ಈ ಸುದ್ದಿಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಇದೇ ರೀತಿಯ ರೈತರಿಗೆ ಉಪಯುಕ್ತ ಆಗುವ ಯೋಜನೆ ಹಾಗೂ ಸರ್ಕಾರಿ ಉದ್ಯೋಗದ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ ಸೈಟ್ ಗೆ ಭೇಟಿ ನೀಡಿ.

















