ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2026: 1207 ಹುದ್ದೆಗಳಿಗೆ ಅರ್ಜಿ ಆಹ್ವಾನ!. ₹42,000 ರಿಂದ ₹58,೦೦೦ ತನಕ ಸಂಬಳ.

By: Dhanya.C Poojari

On: Thursday, July 9, 2026 8:16 PM

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2026: ಅಬಕಾರಿ ಇಲಾಖೆಯಲ್ಲಿ 1207 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!. ₹42,000 ರಿಂದ ₹58,೦೦೦ ತನಕ ಸಂಬಳ.
---Advertisement---

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2026: 1207 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಹತೆ, ವೇತನ ಸಂಪೂರ್ಣ ಮಾಹಿತಿ


Karnataka Excise Department Recruitment 2026 : ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್! ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಒಟ್ಟು 1207 ಖಾಲಿ ಇರುವ ಹುದ್ದೆಗಳ ಅರ್ಜಿ ಸಲ್ಲಿಸಲು ಅಧಿಸೂಚನೆ ನೀಡಿದ್ದಾರೆ. ಈ ನೇಮಕಾತಿಯಲ್ಲಿ ಅಬಕಾರಿ ಕಾನ್ಸ್‌ಟೇಬಲ್ ಮತ್ತು ಅಬಕಾರಿ ಉಪ ನಿರೀಕ್ಷಕ (Excise Sub Inspector) ಹುದ್ದೆಗಳು ಸೇರಿವೆ.ಈ ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

ವಿವರಮಾಹಿತಿ
ನೇಮಕಾತಿ ಇಲಾಖೆಕರ್ನಾಟಕ ಅಬಕಾರಿ ಇಲಾಖೆ
ಪರೀಕ್ಷೆ ನಡೆಸುವ ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಒಟ್ಟು ಹುದ್ದೆಗಳು1207
ಹುದ್ದೆಗಳ ಹೆಸರುಅಬಕಾರಿ ಕಾನ್ಸ್‌ಟೇಬಲ್, ಅಬಕಾರಿ ಉಪ ನಿರೀಕ್ಷಕ
ಉದ್ಯೋಗ ಸ್ಥಳಕರ್ನಾಟಕ
ಅರ್ಜಿ ವಿಧಾನಆನ್‌ಲೈನ್

ಹುದ್ದೆಗಳ ಮಾಹಿತಿ


ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2026ರಲ್ಲಿ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ:

  • ಅಬಕಾರಿ ಕಾನ್ಸ್‌ಟೇಬಲ್ – 942 ಹುದ್ದೆಗಳು
  • ಅಬಕಾರಿ ಉಪ ನಿರೀಕ್ಷಕ (ESI) – 265 ಹುದ್ದೆಗಳು

ಶೈಕ್ಷಣಿಕ ಅರ್ಹತೆ


ಅಬಕಾರಿ ಕಾನ್ಸ್‌ಟೇಬಲ್ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ದ್ವಿತೀಯ ಪಿಯುಸಿ (12ನೇ ತರಗತಿ) ಮುಗಿಸಬೇಕು.

ಅಬಕಾರಿ ಉಪ ನಿರೀಕ್ಷಕ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರ್ಣಗೊಳಿಸಿರಬೇಕು.

ವಯೋಮಿತಿ

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯಸ್ಸು 38 ವರ್ಷಗಳ ಒಳಗೆ ಇರಬೇಕು. ವಯಮಿತಿಯು ಜಾತಿಯ ಆದರದ ಮೇಲೆ ವಯಸ್ಸಿನ ಸಡಿಲಿಕಿಯು ಕೂಡ ಆಗಬಹುದು.

ವೇತನ ವಿವರ


ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ಉತ್ತಮ ವೇತನ ನೀಡಲಾಗುತ್ತದೆ.

  • ಅಬಕಾರಿ ಕಾನ್ಸ್‌ಟೇಬಲ್: ₹21,400 ರಿಂದ ₹42,000 ಪ್ರತಿ ತಿಂಗಳು
  • ಅಬಕಾರಿ ಉಪ ನಿರೀಕ್ಷಕ: ₹30,350 ರಿಂದ ₹58,250 ಪ್ರತಿ ತಿಂಗಳು
  • ಇದರ ಜೊತೆಗೆ ಸರ್ಕಾರದ ನಿಯಮಗಳ ಪ್ರಕಾರ ಇತರೆ ಭತ್ಯೆಗಳು ಮತ್ತು ಸೌಲಭ್ಯಗಳು ಲಭ್ಯವಾಗುತ್ತವೆ.

ಆಯ್ಕೆ ವಿಧಾನ

  • ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಾಮಾನ್ಯವಾಗಿ 5 ಹಂತಗಳನ್ನು ಒಳಗೊಂಡಿರುತ್ತದೆ:
  • ಲಿಖಿತ ಪರೀಕ್ಷೆ
  • ದೈಹಿಕ ಪರೀಕ್ಷೆ (ಅಗತ್ಯವಿದ್ದಲ್ಲಿ)
  • ದಾಖಲೆ ಪರಿಶೀಲನೆ
  • ಅಂತಿಮ ಆಯ್ಕೆ ಪಟ್ಟಿ
  • ಈ ನೇಮಕಾತಿಯಲ್ಲಿ ರಾಜ್ಯ ಮಟ್ಟದ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ


ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಬಿಡುಗಡೆಯಾದ ನಂತರ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:

  • ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನೇಮಕಾತಿ ಅಧಿಸೂಚನೆಯನ್ನು ಓದಿ.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಅಗತ್ಯ ವಿವರವದಿಗೆ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ತೆಗೆದುಕೊಳ್ಳಿ.

ಅಗತ್ಯ ದಾಖಲೆಗಳು


ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಈ ದಾಖಲೆಗಳು ಅಗತ್ಯವಾಗಬಹುದು:

  • ಆಧಾರ್ ಕಾರ್ಡ್
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ)
  • ಆದಾಯ ಪ್ರಮಾಣ ಪತ್ರ (ಅನ್ವಯಿಸಿದರೆ)
  • ಫೋಟೋ ಮತ್ತು ಸಹಿ
  • ಇತರೆ ಅಗತ್ಯ ದಾಖಲೆಗಳು

ಪ್ರಮುಖ ದಿನಾಂಕಗಳು


ಅಧಿಸೂಚನೆ ಪ್ರಕಟವಾದ ನಂತರ ಅರ್ಜಿ ಪ್ರಾರಂಭ ದಿನಾಂಕ, ಕೊನೆಯ ದಿನಾಂಕ, ಪರೀಕ್ಷಾ ದಿನಾಂಕ ಮತ್ತು ಇತರೆ ಮಾಹಿತಿಗಳನ್ನು ಅಧಿಕೃತವಾಗಿ ತಿಳಿಸಲಾಗುತ್ತದೆ.

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2026ಕ್ಕೆ ಸಂಬಂಧಿಸಿದ ಅಂತಿಮ ಮಾಹಿತಿ, ಅರ್ಜಿ ದಿನಾಂಕ ಮತ್ತು ನಿಯಮಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.
ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಕರ್ನಾಟಕದ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಬಹುದು. ಆದ್ದರಿಂದ ಅಭ್ಯರ್ಥಿಗಳು ಪರೀಕ್ಷೆಗೆ ಈಗಿನಿಂದಲೇ ತಯಾರಿ ಆರಂಭಿಸುವುದು ಉತ್ತಮ.

ಅರ್ಜಿ ಸಲ್ಲಿಸಲು ಮತ್ತು ಪರೀಕ್ಷಾ ದಿನಾಂಕ ನೋಡಲು :- https://cetonline.karnataka.gov.in/kea/

ಇದೇ ರೀತಿಯ ಹೆಚ್ಚಿನ ಉಪಯುಕ್ತ ಹುದ್ದೆಗಳ ಹಾಗೂ ಸರ್ಕಾರಿ ಯೋಜನೆಯ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡಿ.

Share

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ರಾಜ್ಯ ಸುದ್ದಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment