AAI Agnishamaka Jobs 2026 : ಕೇವಲ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಮತ್ತು ಕೊನೆಯ ದಿನಾಂಕವನ್ನು ಈ ಲೇಖನದಲ್ಲಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿಯನ್ನು ಸಲ್ಲಿಸಿ.
AAI Agnishamaka Jobs 2026 : ಭಾರತದಲ್ಲಿ ಸರ್ಕಾರಿ ಉದ್ಯೋಗ ವೆಂದರೆ ಅನೇಕ ಯುವಕರ ಕನಸಾಗಿದೆ. ಈಗ ನಿಮ್ಮ ಕನಸನ್ನು ನನಸು ಮಾಡಲು ಸರ್ಕಾರ ಖಾಲಿ ಇರುವ ಅಗ್ನಿಶಾಮಕ ನಾನ್-ಎಕ್ಸಿಕ್ಯೂಟಿವ್ (AAI) ಹುದ್ದೆಗಳಿಗೆ ನೇಮಕಾತಿ ಹೊರಡಿಸಿದ್ದಾರೆ. ನೀವು ಕೇವಲ ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳಾದರೆ ಸಾಕು ನೀವು ಕೂಡ ಈ ಉತ್ತಮ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಕೆಳಗಿನ ಲೇಖನದಲ್ಲಿದೆ.
Also Read :- 1 ಲಕ್ಷ Loan Subsidy Scheme 2025 : ಕ್ರಿಶ್ಚಿಯನ್ ಸಮುದಾಯಕ್ಕೆ ಸುವರ್ಣ ಅವಕಾಶ!
AAI Agnishamaka Jobs 2026 – ಮುಖ್ಯ ಮಾಹಿತಿ
| ವಿಷಯ | ವಿವರ |
| ಸಂಸ್ಥೆ | ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) |
| ನೇಮಕಾತಿ ವರ್ಷ | 2026 |
| ಹುದ್ದೆಗಳ ಸ್ವರೂಪ | ನಾನ್-ಎಕ್ಸಿಕ್ಯೂಟಿವ್ |
| ಒಟ್ಟು ಹುದ್ದೆಗಳು | 14 |
| ಉದ್ಯೋಗ ಸ್ಥಳ | ಈಶಾನ್ಯ ಭಾರತದ ವಿಮಾನ ನಿಲ್ದಾಣಗಳು |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಜಿ ಆರಂಭ | 12 ಡಿಸೆಂಬರ್ 2025 |
| ಕೊನೆಯ ದಿನ | 11 ಜನವರಿ 2026 |
ಖಾಲಿ ಇರುವ ಹುದ್ದೆಗಳ ಪಟ್ಟಿ
AAI Agnishamaka Jobs 2026 : ಈ ನೇಮಕಾತಿಯಲ್ಲಿ ಒಟ್ಟು ಮೂರು ರೀತಿಯ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹರಿಸಲಾಗಿದೆ.
- ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್) : 5
- ಜೂನಿಯರ್ ಅಸಿಸ್ಟೆಂಟ್ (HR) : 2
- ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ) : 7
ಗಮನಿಸಿ : ಸಂಸ್ಥೆಯ ಅಗತ್ಯದ ಪ್ರಕಾರ ಹುದ್ದೆಯ ಸಂಖ್ಯೆ ಬದಲಾಗುತ್ತಿರಬಹುದು. ಅರ್ಜಿ ಸಲ್ಲಿಸುವಾಗ ಅಧಿಕೃತ ವೆಬ್ಸೈಟ್ಗೆ ಹೋಗಿ ಅಧಿಸೂಚನೆಯನ್ನು ಸರಿಯಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.
ಶೈಕ್ಷಣಿಕ ಅರ್ಹತೆ
ಈ ನೇಮಕಾತಿಯಲ್ಲಿ ಹುದ್ದೆಯ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯು ಹೊಂದಿರುತ್ತದೆ.
ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)
- ಎಲೆಕ್ಟ್ರಾನಿಕ್ಸ್ / ಟೆಲಿಕಾಂ / ರೇಡಿಯೋ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
- ಕನಿಷ್ಠ 2 ವರ್ಷಗಳ ಅನುಭವ
ಜೂನಿಯರ್ ಅಸಿಸ್ಟೆಂಟ್ (HR)
- ಯಾವುದೇ ವಿಷಯದಲ್ಲಿ ಪದವಿ
- MS Office ಮೂಲ ಜ್ಞಾನ (ಕಂಪ್ಯೂಟರ್ ಪರೀಕ್ಷೆ ಮೂಲಕ ಪರಿಶೀಲನೆ)
ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ)
- 10ನೇ ಪಾಸ್ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ
ವಯೋಮಿತಿ
AAI Agnishamaka Jobs 2026 : ಈ ನಿಮ್ಮ ಖಾತೆಗೆ ಅರ್ಜಿ ಸಲ್ಲಿಸಲು ನಿಮಗೆ ಕನಿಷ್ಠ 18 ವರ್ಷವಾಗಿರಬೇಕು ಹಾಗೂ ಗರಿಷ್ಠ 30 ವಯಸ್ಸಿನ ನಡುವೆ ಇರಬೇಕು. ವಯಸ್ಸಿನ ಸಡಿಲಿಕೆ ಕೂಡ ಇರುತ್ತದೆ.
ಉದಾರಣೆಗೆ :- OBC: 3 ವರ್ಷ, SC / ST: 5 ವರ್ಷ, ಅಂಗವಿಕಲರು: 10 ವರ್ಷ, ಸರ್ಕಾರಿ ನೌಕರರು: 10 ವರ್ಷ.
ವೇತನ ಶ್ರೇಣಿ (ತಿಂಗಳಿಗೆ)
- ಸೀನಿಯರ್ ಅಸಿಸ್ಟೆಂಟ್ : ₹36,000 – ₹1,10,000
- ಜೂನಿಯರ್ ಅಸಿಸ್ಟೆಂಟ್ : ₹31,000 – ₹92,000
ಹೆಚ್ಚುವರಿ ಸೌಲಭ್ಯಗಳು:
- ತುಟ್ಟಿಭತ್ಯೆ (DA)
- ಮನೆ ಬಾಡಿಗೆ ಭತ್ಯೆ (HRA)
- ವೈದ್ಯಕೀಯ ಸೌಲಭ್ಯ
- ಪಿಂಚಣಿ ಯೋಜನೆ
- ವಿಮಾ ಸೌಲಭ್ಯಗಳು
ಅರ್ಜಿ ಶುಲ್ಕ
- ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ : ₹1000 + ಬ್ಯಾಂಕ್ ಶುಲ್ಕ
- ಮಹಿಳೆಯರು, SC/ST, PwD, ಮಾಜಿ ಸೈನಿಕರು, ಅಪ್ರೆಂಟಿಸ್: ಶುಲ್ಕವಿಲ್ಲ. ( ಇವರಿಗೆ ಸಂಪೂರ್ಣ ಉಚಿತವಾಗಿದೆ )
ಈ ಹುದ್ದೆಗೆ ಅರ್ಜಿ ಹೇಗೆ ಸಲ್ಲಿಸುವುದು ?
- ಮೊದಲು ಅಧಿಕೃತ ವೆಬ್ ಸೈಟ್ https://www.aai.aero/ ಗೆ ಭೇಟಿ ನೀಡಿ
- ನಂತರ Careers ವಿಭಾಗ ಹುಡುಕಿ ಕ್ಲಿಕ್ ಮಾಡಿಕೊಳ್ಳಿ.
- ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
- ಹೊಸ ಬೆಳಕಿದಾರರಾದರೆ ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿಯನ್ನು ಬಳಸಿ ಲಾಗಿನ್ ಮಾಡಿಕೊಳ್ಳಿ.
- ಲಾಗಿನ್ ಮಾಡಿದ ನಂತರ ನಿಮ್ಮ ಮುಂದೆ ಒಂದು ಅರ್ಜಿ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ಎಲ್ಲಾ ಅಗತ್ಯ ವಿವರದೊಂದಿಗೆ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ.
- ಶುಲ್ಕ ಪಾವತಿಸಿ.
- ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ ಅರ್ಜಿ ಫಾರಂ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?
AAI Agnishamaka Jobs 2026 : ಈ ಹುದ್ದೆಯಲ್ಲಿ ಆಯ್ಕೆ ಪ್ರಕ್ರಿಯೆಯು ನೀವು ಆರಿಸಿಕೊಳ್ಳುವ ಹುದ್ದೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಸೀನಿಯರ್ ಅಸಿಸ್ಟೆಂಟ್
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದಾಖಲೆ ಪರಿಶೀಲನೆ
ಜೂನಿಯರ್ ಅಸಿಸ್ಟೆಂಟ್ (HR)
- ಲಿಖಿತ ಪರೀಕ್ಷೆ
- ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ
ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ)
- ಲಿಖಿತ ಪರೀಕ್ಷೆ
- ದೈಹಿಕ ಅಳತೆ ಪರೀಕ್ಷೆ
- ಚಾಲನಾ ಪರೀಕ್ಷೆ
- ದೈಹಿಕ ಸಾಮರ್ಥ್ಯ ಪರೀಕ್ಷೆ
ಮುಖ್ಯ ದಿನಾಂಕಗಳು ?
AAI Agnishamaka Jobs 2026 : ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕವು 12 ಡಿಸೆಂಬರ್ 2025. ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವು 11 ಜನವರಿ 2026ರಂದು. ಪರೀಕ್ಷೆಯ ದಿನಾಂಕವು ಇನ್ನು ಕೂಡ ಸೂಚಿಸಿಲ್ಲ ಸದ್ಯದಲ್ಲೇ ಪ್ರಕಟಗೊಳ್ಳುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ?
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- 12ನೇ ಅಥವಾ ಹತ್ತನೇ ತರಗತಿಯ ಅಂಕಪಟ್ಟಿ
- ಡಿಪ್ಲೋಮ ಪ್ರಮಾಣ ಪತ್ರ
- ಜಾತಿ ಪ್ರಮಾಣ
- ಅರ್ಜಿ ಶುಲ್ಕ ಪಾವತಿಸಿದ ದಾಖಲೆ
- ನಿಮ್ಮ ಫೋಟೋ ಮತ್ತು ಸಹಿ
- ವಿಕಲಚೇತನರಾದರೆ ಅಂಗವಿಕಲ ಪ್ರಮಾಣ ಪತ್ರ
- ಅನುಭವ ಪ್ರಮಾಣ ಪತ್ರ ಬೇಕಾದರೆ ಮಾತ್ರ
- ನಿವಾಸ ಪರಮಾಣು ಪತ್ರ
- ವೈದ್ಯಕೀಯ ಫಿಟ್ನೆಸ್
Also Read :- Sandhya Suraksha Scheme 2025 : ವಯಸ್ಸಾದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ₹1200 ರೂಪಾಯಿ ಪಡೆಯಿರಿ.
AAI Agnishamaka Jobs 2026 : ಯುವಕರಿಗೆ ಭಾರತದಲ್ಲಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಪಡೆದುಕೊಳ್ಳುವ ಆಸಕ್ತಿ ಇದ್ದರೆ ಆದಷ್ಟು ಬೇಗ ತಡ ಮಾಡದೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ. ನೀವು ಕೇವಲ 10ನೇ ತರಗತಿ ಪಾಸಾದರು ಸಾಕು. ಅರ್ಜಿ ಸಲ್ಲಿಸಲು 12 ಡಿಸೆಂಬರ್ ರಂದು ಪ್ರಾರಂಭವಾಗುತ್ತದೆ ಹಾಗೂ ಅರ್ಜಿ ಕೊನೆಯ ದಿನಾಂಕ 11 ಜನವರಿ 2026ರಂದು ಮುಕ್ತಾಯಗೊಳ್ಳುತ್ತದೆ. ಆದಷ್ಟು ಬೇಗ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಕೆಲಸ ನಿಮ್ಮದಾಗಿಸಿಕೊಳ್ಳಿ.
ಪ್ರಮುಖ ಲಿಂಕುಗಳು
- ಅಧಿಕೃತ ವೆಬ್ಸೈಟ್: https://www.aai.aero/
- ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

















