1 ಲಕ್ಷ Loan Subsidy Scheme 2025 : ಕ್ರಿಶ್ಚಿಯನ್ ಸಮುದಾಯಕ್ಕೆ ಸುವರ್ಣ ಅವಕಾಶ!

karnatakasuddi.com

By: Karnataka Suddi

On: Monday, December 15, 2025 10:30 AM

1 ಲಕ್ಷ Loan Subsidy Scheme 2025 : ಕ್ರಿಶ್ಚಿಯನ್ ಸಮುದಾಯಕ್ಕೆ ಸುವರ್ಣ ಅವಕಾಶ!
| Follow Us |

1 ಲಕ್ಷ Loan Subsidy Scheme 2025 : ಸ್ವಂತ ಉದ್ಯೋಗ ಆರಂಭಿಸಲು ಸರ್ಕಾರದಿಂದ ದೊಡ್ಡ ಸಹಾಯ! ಕ್ರಿಶ್ಚಿಯನ್ ಸಮುದಾಯಕ್ಕೆ ₹1 ಲಕ್ಷ ಸಾಲ + 50% ಸಬ್ಸಿಡಿ. ಅರ್ಜಿ ಕೊನೆಯ ದಿನಾಂಕ 20 ಡಿಸೆಂಬರ್ 2025.

Also Read :-  Sandhya Suraksha Scheme 2025 : ವಯಸ್ಸಾದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ₹1200 ರೂಪಾಯಿ ಪಡೆಯಿರಿ.

1 ಲಕ್ಷ Loan Subsidy Scheme 2025 : ಕ್ರಿಶ್ಚಿಯನ್ ಸಮುದಾಯದವರಿಗೆ ವೃತ್ತಿ ಪ್ರೋತ್ಸಾಹ ಸಾಲ (KCCDC) ಯೋಜನೆ ಮೂಲಕ 1 ಲಕ್ಷದವರೆಗೂ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲು ನಿರ್ಧರಿಸಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಹತೆ ಇನ್ನು ಮುಖ್ಯ ಮಾಹಿತಿಗಳು ಈ ಲೇಖನದಲ್ಲಿ ಇದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ. 

1 ಲಕ್ಷ Loan Subsidy Scheme 2025 : ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಹಲವು ಜನಸ್ನೇಹಿತ ಯೋಜನೆಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಅತ್ಯಂತ ಉಪಯುಕ್ತ ಮತ್ತು ಪರಿಣಾಮಕಾರಿ ಯೋಜನೆ ಎಂದರೆ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ (KCCDC) ವತಿಯಿಂದ ಜಾರಿಯಾಗಿರುವ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಿಶ್ಚಿಯನ್ ಸಮುದಾಯದವರಿಗೆ ಸುಮಾರು 1 ಲಕ್ಷ ರೂಪಾಯಿ ಸಾಲ  ನೀಡಲು ಮುಂದಾಗಿದ್ದಾರೆ. ಈ ಯೋಜನೆಯ ಮೂಲಕ ಕ್ರಿಶ್ಚಿಯನ್ ಸಮುದಾಯದ ಯುವಕ ಹಾಗೂ ಯುವತಿಯರಿಗೆ ಮತ್ತು ಮಹಿಳೆಯರು ಹಾಗೂ ಸಣ್ಣಪುಟ್ಟ ಉದ್ಯಮ ನಡೆಸುತ್ತಿರುವವರಿಗೆ ಸರ್ಕಾರದಿಂದ ಸಾಲ ನೀಡಿ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರ್ಕಾರವೇ ನಿಮಗೆ ಸಹಾಯ ಮಾಡುತ್ತಿದೆ.

ಯಾರು ಅರ್ಜಿ ಸಲ್ಲಿಸಬಹುದು ?

1 ಲಕ್ಷ Loan Subsidy Scheme 2025 : ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು. 

  • ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುತ್ತಿರಬೇಕು 
  • ಅಭ್ಯರ್ಥಿಗಳು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರಬೇಕು ಇದು ಕಡ್ಡಾಯ! 
  • ಅಭ್ಯರ್ಥಿಗಳು 18ರಿಂದ 55 ವರ್ಷಗಳ ನಡುವೆ ಇರಬೇಕು 
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು 
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೂಡ ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾಗಿರಬಾರದು. 
  • ಬಹಳ ಮುಖ್ಯವಾಗಿ ಈ ಹಿಂದೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಪಡೆದಿರಬಾರದು. 

ಎಷ್ಟು ಸಾಲ ಸಿಗುತ್ತದೆ ?

  • ಒಟ್ಟು ಸಾಲ ಮೊತ್ತ: ₹1,00,000
  • ಸಬ್ಸಿಡಿ: ₹50,000 (50%)
  • ಬ್ಯಾಂಕ್ ಸಾಲ: ₹50,000
  • ಸಾಲದ ಬಡ್ಡಿದರ :- ಸಾಮಾನ್ಯವಾಗಿ 4% ರಿಂದ 6% 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

1 ಲಕ್ಷ Loan Subsidy Scheme 2025 : ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲ ದಾಖಲೆಗಳು ಅಗತ್ಯವಾಗಿ ಕೇಳಲಾಗುತ್ತದೆ. ಹಾಗೂ ಅರ್ಜಿ ಸಲ್ಲಿಸುವಾಗ ಇವೆಲ್ಲ ದಾಖಲೆಗಳನ್ನು ನೀವು ಪಿಡಿಎಫ್ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು.

  • ಅರ್ಜಿದಾರರ ಆಧಾರ್ ಕಾರ್ಡ್ 
  • ಪ್ರಾಜೆಕ್ಟ್ ರಿಪೋರ್ಟ್ 
  • ಆದಾಯ ಪ್ರಮಾಣ ಪತ್ರ 
  • ಜಾತಿ ಪ್ರಮಾಣ ಪತ್ರ 
  • ಸ್ವಯಂ ಘೋಷಣೆ ಪತ್ರ 
  • 4 ಪಾಸ್ ಪೋರ್ಟ್ ಸೈಜ್ ಫೋಟೋ 
  • ಬ್ಯಾಂಕ್ ಖಾತೆ ವಿವರ 

Also Read :-  IOCL Recruitment 2025 : IOCL ಸಂಸ್ಥೆಯಲ್ಲಿ ಖಾಲಿ ಇರುವ 2776 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಅರ್ಜಿ ಹೇಗೆ ಸಲ್ಲಿಸುವುದು ?

1 ಲಕ್ಷ Loan Subsidy Scheme 2025 : ಈ ಯೋಜನೆಗೆ  ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮಾರ್ಗದರ್ಶನ ಕೆಳಗೆ ಲೇಖನದಲ್ಲಿ ನೀಡಲಾಗಿದೆ. 

  • ಮೊದಲು ಇಲ್ಲಿ ನೀಡಿರುವ https://kccdclonline.karnataka.gov.in/Portal/ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. 
  • ನಂತರ “ವೃತ್ತಿ ಪ್ರೋತ್ಸಾಹ ಸಾಲ ಯೋಜನೆ” ಆಯ್ಕೆಮಾಡಿ.
  • ಹೊಸ ಬಳಕೆದಾರರಾದರೆ ನಿಮ್ಮ ಮೊಬೈಲ್ ನಂಬರ್ ಬಳಸಿ ಹೊಸದಾಗಿ ನೋಂದಾಯಿಸಿಕೊಳ್ಳಿ. 
  • ನೋಂದಾಯಿಸಿದ ನಂತರ ನಿಮ್ಮ ಮುಂದೆ ಅರ್ಜಿ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ಎಲ್ಲಾ ಅಗತ್ಯ ವಿವರದೊಂದಿಗೆ ಭರ್ತಿ ಮಾಡಿ. 
  • ನಂತರ ಮೇಲೆ ನೀಡಿರುವ ಅಗತ್ಯ ದಾಖಲೆಗಳನ್ನು ಅನುಸರಿಸಿ ಅದನ್ನು PDF ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ. 
  • ಅರ್ಜಿ ಸರಿಯಾಗಿ ಇನ್ನೊಂದು ಸಲ ಪರಿಶೀಲಿಸಿ. 
  • ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅರ್ಜಿಯನ್ನು ಸಲ್ಲಿಸಿ. 

Also Read :-  DRDO Recruitment 2025 : 764 ಹುದ್ದೆಗಳು ಬಿಡುಗಡೆ! ಅರ್ಜಿ ಹಾಕುವ ವಿಧಾನ, ಅರ್ಹತೆ, ವೇತನ – ಸಂಪೂರ್ಣ ಮಾಹಿತಿ!

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?

1 ಲಕ್ಷ Loan Subsidy Scheme 2025 : ಈ ಯೋಜನೆಗೆ ಒಟ್ಟು ಎರಡು ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ಇರುತ್ತದೆ. ಮೊದಲನೇದು ದಾಖಲೆ ಪರಿಶೀಲನೆ ಮಾಡಲಾಗುತ್ತದೆ ಹಾಗೂ ಎರಡನೆಯದು ನಿಮ್ಮ ಸ್ಥಳ ಪರಿಶೀಲನೆ ಮಾಡಲಾಗುತ್ತದೆ.

ಮುಖ್ಯ ದಿನಾಂಕಗಳು 

ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20/ 2025 ರವರೆಗೆ ಮಾತ್ರ ಅವಕಾಶವಿದೆ.

1 ಲಕ್ಷ Loan Subsidy Scheme 2025 : ವೃತ್ತಿ ಪ್ರೋತ್ಸಾಹ ಸಾಲ ಯೋಜನೆ 2025 ಕ್ರಿಶ್ಚಿಯನ್ ಸಮುದಾಯದವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯಲ್ಲಿ ಕ್ರಿಶ್ಚಿಯನ್ ಸಮುದಾಯದವರಿಗೆ 1 ಲಕ್ಷದವರೆಗೂ ಸಾಲ ಸಿಗುತ್ತದೆ ಮತ್ತು 50% ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಈ ಸಾಲ ದೊರುಕುತ್ತಿದೆ. ಈ ಯೋಜನೆಗೆ ಡಿಸೆಂಬರ್ 20 /2025 ರ ಒಳಗೆ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಲಿಂಕ್ 

Apply Link : https://kccdclonline.karnataka.gov.in/Portal/

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment