Loreal Scholarship 2025 : ಭಾರತದಲ್ಲಿ ಪ್ರಸಿದ್ಧ ಬ್ಯೂಟಿ ಬ್ರ್ಯಾಂಡ್ ಗಳಲ್ಲಿ ಒಂದಾದ ರೋರಿಯಲ್ ಇಂಡಿಯಾ ಕಂಪನಿಯು ಭಾರತದ ಯುವ ವಿಜ್ಞಾನ ವಿದ್ಯಾರ್ಥಿಗಳಿಗೆ ಅವರ ಕನಸನ್ನು ನನಸು ಮಾಡಲು “ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್” ಈ ಯೋಜನೆ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕ್ಕೆ ಅವಕಾಶವನ್ನು ನೀಡುತ್ತಿದ್ದಾರೆ. 2025 26 ಸಾಲಿನ ಶೈಕ್ಷಣಿಕ ವರ್ಷಕ್ಕೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದ್ದಾರೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 21 /2025 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.
ಈ ಲೇಖನದಲ್ಲಿ ಈ ಲೋರಿಯಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಅರ್ಹತೆ, ಕೊನೆಯ ದಿನಾಂಕ, ಮತ್ತು ಮುಖ್ಯ ಮಾಹಿತಿಯು ಈ ಲೇಖನದಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿಗಳು ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ.
Also Read :- Muthoot Finance Scholarship 2025 : ಮುತ್ತುಟ್ ಫೈನಾನ್ಸ್ ಕಡೆಯಿಂದ ವಿದ್ಯಾರ್ಥಿಗಳಿಗೆ 2.40 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಯೋಜನೆ.
ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ವಿದ್ಯಾರ್ಥಿವೇತನ
Loreal Scholarship 2025 : ಭಾರತದಲ್ಲಿ ಹೆಸರುವಾಸಿ ಆಗಿರುವ ಲೋರಿಯಲ್ ಇಂಡಿಯಾ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಳಯಲ್ಲಿ ಎಂಬ ಮನಸ್ಸಿನಿಂದ ಅವರಿಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಹಾಗೂ ಬಹಳ ಮುಖ್ಯವಾಗಿ ವಿದ್ಯಾರ್ಥಿಗಳ ಶಿಕ್ಷಣ ಉತ್ತಮವಾಗಿ ಮುಂದುವರಿಸಲು ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ವಿದ್ಯಾರ್ಥಿವೇತನಕ್ಕೆ ಯಾರು ಅರ್ಹತೆ ಇದ್ದೀರಿ ಎಂದು ತಿಳಿಯಲು ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.
ವಿದ್ಯಾರ್ಥಿವೇತನದ ಅರ್ಹತೆ – Scholarship Eligibility
Loreal Scholarship 2025 : ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗೆ ನೀಡಿರುವ ಎಲ್ಲಾ ಅರ್ಹತೆಗಳನ್ನು ನೀವು ಪೂರೈಸಿರಬೇಕು.
- ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು
- ಈ ವಿದ್ಯಾರ್ಥಿ ವೇತನವು ಕೇವಲ ಮಹಿಳಾ ವಿದ್ಯಾರ್ಥಿನಿಯರಿಗೆ ಮಾತ್ರ
- ಅರ್ಜಿದಾರರು ವಿಜ್ಞಾನ ಹಾಗೂ ಗಣಿತ ವಿಷಯಗಳೊಂದಿಗೆ 12 ನೇ ತರಗತಿಯಲ್ಲಿ ಕನಿಷ್ಠ 60% ಅಂಕ ತೆಗೆದಿರಬೇಕು.
- ಅರ್ಜಿದಾರರು ವಿಜ್ಞಾನ ಕ್ಷೇತ್ರದಲ್ಲಿ ನಾಟಕೋತರ ಪದವಿ ಅಂದರೆ ಅಂಡರ್ ಗ್ರಾಜುಯೇಷನ್. ಪಡೆದಿರಬೇಕು. ಇದರಲ್ಲಿ ಟೆಕ್ನಾಲಜಿ , ಇಂಜಿನಿಯರಿಂಗ್, ಮೆಡಿಸಿನ್, ಲೈಫ್ ಸೈನ್ಸ್, ಬಯೋಟೆಕ್ನಾಲಜಿ, ಇತ್ಯಾದಿ ಕ್ಷೇತ್ರಗಳಲ್ಲಿ ಸೇರಿರಬೇಕು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು
- ವಿದ್ಯಾರ್ಥಿಗಳು ಭಾರತದ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಪ್ರವೇಶ ಪತ್ರವನ್ನು ಪಡೆದಿರಬೇಕು.
ಗಮನಿಸಿ : ಈ ವಿದ್ಯಾರ್ಥಿವೇತನವು ಪೋಸ್ಟ್ ಗ್ರಾಜುಯೇಷನ್ ವಿದ್ಯಾರ್ಥಿನಿಯರಿಗೆ ಬರುವುದಿಲ್ಲ.
Also Read :– BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮ ನಲ್ಲಿ ಸುಪ್ರವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅಗತ್ಯ ದಾಖಲೆಗಳು – important documents for scholarship
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಾಗ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಕ್ಯಾನ್ ಕಾಫಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು. JPEG OR PNG
- ಅರ್ಜಿದಾರರ ಆಧಾರ್ ಕಾರ್ಡ್
- ಕುಟುಂಬದ ವಾರ್ಷಿಕ ಆದಾಯಪರಮಣ ಪತ್ರ
- ಶೈಕ್ಷಣಿಕ ಪತ್ರ ಹಾಗೂ 10ನೇ ತರಗತಿ ಮತ್ತು 12ನೇ ತರಗತಿಯ ಅಂಕ ಪಟ್ಟಿ
- ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಐಡಿ ಕಾರ್ಡ್ ಮತ್ತು ಪ್ರವೇಶ ಪತ್ರ
- ನಾಲಕ್ಕು ಪಾಸ್ ಪೋರ್ಟ್ ಸೈಜ್ ಫೋಟೋ
- ನಿಮ್ಮ ಬ್ಯಾಂಕ್ ಖಾತೆ ವಿವರ
ಈ ಯೋಜನೆಯಿಂದ ವಿದ್ಯಾರ್ಥಿಗಳಿಗಾಗುವ ಲಾಭಗಳು ? Loreal Scholarship Benefits
Loreal Scholarship 2025 : ಈ ಲೋರಿಯಲ್ ವಿದ್ಯಾರ್ಥಿ ವೇತನದಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗಗಳಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡುತ್ತಾರೆ. ಈ ಹಣದಿಂದ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣ ಖರ್ಚನ್ನು ತಾವೇ ನೋಡಿಕೊಳ್ಳಬಹುದು . ಉದಾಹರಣೆ: ಟ್ಯೂಷನ್ ಶುಲ್ಕ, ಪರೀಕ್ಷಾ ಶುಲ್ಕ, ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳು, ವಸತಿ ಮತ್ತು ಊಟದ ಖರ್ಚುಗಳು, ಇತ್ಯಾದಿ ಸಮಸ್ಯೆಗಳಿಗೆ ವಿದ್ಯಾರ್ಥಿನಿಯರು ತಮ್ಮ ಖರ್ಚನ್ನು ತಾವೇ ನೋಡಿಕೊಳ್ಳಬಹುದು. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ಲೇಖನದಲ್ಲಿ ನೀಡಲಾಗಿದೆ.
Also Read :– Labor Card Gift 2025 : ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಗಿಫ್ಟ್ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಅರ್ಜಿ ಸಲ್ಲಿಸುವ ವಿಧಾನ ? How to Apply Loreal Scholarship 2025
ಲೋರಿಯಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಕೆಳಗೆ ಲೇಖನದಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ. ವಿದ್ಯಾರ್ಥಿಗಳು ಕೆಳಗಿನ ಲೇಖನವನ್ನು ಅನುಸರಿಸಿ ತಮ್ಮ ಅರ್ಜಿಯನ್ನು ತಾವೇ ಸಲ್ಲಿಸಬಹುದು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೇವಲ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಇಲ್ಲಿ ನೀಡಿರುವ https://www.buddy4study.com/page/loreal-india-for-young-women-in-science-scholarships ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ರಿಜಿಸ್ಟರ್ ಮಾಡಿ: ವೆಬ್ ಸೈಟ್ ಓಪನ್ ಆದ ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿ ಹೊಸ ಖಾತೆಯನ್ನು ರಚಿಸಿಕೊಳ್ಳಿ.
- ಲಾಗಿನ್ ಮಾಡಿ : ಹೊಸ ಅಕೌಂಟ್ ಕ್ರಿಯೇಟ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿಕೊಳ್ಳಿ.
- ನಂತರ “ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಸ್ಕಾಲರ್‌ಶಿಪ್” ಇದನ್ನು ಆಯ್ಕೆ ಮಾಡಿಕೊಳ್ಳಿ.
- ಆಯ್ಕೆ ಮಾಡಿದ ನಂತರ ನಿಮ್ಮ ಮುಂದೆ ಒಂದು ಅರ್ಜಿ ಫಾರಂ ತೆರೆಯುವುದು ಅದರಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಉದಾಹರಣೆ : ನಿಮ್ಮ ಹೆಸರು, ನಿಮ್ಮ ವಿಳಾಸ, ನಿಮ್ಮ ಆಧಾರ್ ಸಂಖ್ಯೆ, ಕುಟುಂಬದ ಆದಾಯ ವಿವರ, ನಿಮ್ಮ ಶಿಕ್ಷಣದ ವಿವರ, ಇತ್ಯಾದಿ…
- ದಾಖಲೆಗಳನ್ನು ಅಪ್ಲೋಡ್ ಮಾಡಿ : ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಬೇಕು. ದಾಖಲೆಗಳು ಸ್ಕ್ಯಾನ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು. ಉದಾಹರಣೆ ( JPEG ಅಥವಾ PNG) ಅಗತ್ಯ ದಾಖಲೆಗಳ ಪಟ್ಟಿ ಮೇಲೆ ಲೇಖನದಲ್ಲಿ ನೀಡಲಾಗಿದೆ.
- ಅರ್ಜಿ ಸಲ್ಲಿಸಿ: ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ನಿಮ್ಮ ಅರ್ಜಿಯನ್ನು ಮತ್ತೊಂದು ಸಲ ಸರಿಯಾಗಿ ಪರಿಶೀಲಿಸಿಕೊಳ್ಳಿ. ಅರ್ಜಿ ಪರಿಶೀಲಿಸಿದ ನಂತರ (Submit) ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ನಂತರ ನೀವು ನೀಡಿರುವ ಇಮೇಲ್ ಐಡಿಗೆ ಒಂದು ರೆಫರೆನ್ಸ್ ಐಡಿ ಬರುತ್ತದೆ ಅದನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ.
ಗಮನಿಸಿ : ಒಂದು ವೇಳೆ ವಿದ್ಯಾರ್ಥಿಗಳಿಗೆ ತಾವೇ ಸ್ವತಹ ಅರ್ಜಿ ಸಲ್ಲಿಸಲು ಬರುವುದಿಲ್ಲವೆಂದರೆ ದಯವಿಟ್ಟು ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒಂದು ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಅರ್ಜಿಯನ್ನು ಬಹಳ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಹೋಗುವಾಗ ಮೇಲೆ ನೀಡಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
Also Read :– SBI Platinum Jubilee Asha Scholarship : 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ₹15,000 ವಿದ್ಯಾರ್ಥಿವೇತನ ಸೌಲಭ್ಯ !
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – Last Date For Application
Loreal Scholarship 2025 : ಲೋರಿಯಲ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ನವೆಂಬರ್ 21 / 2025 ರವರೆಗೆ ಮಾತ್ರ ಅವಕಾಶವನ್ನು ನೀಡುತ್ತಿದ್ದಾರೆ. ಅರ್ಜಿ ಸಲ್ಲಿಸುವಂತ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯದೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸುವವರಿಗೆ ಪ್ರಮುಖ ಸಲಹೆಗಳು -Important tips for applicants
- ಕೊನೆಯ ದಿನಾಂಕದವರೆಗೂ ಕಾಯದೆ ಅರ್ಜಿಯನ್ನು ಬೇಗನೆ ಸಲ್ಲಿಸಿದರೆ ಬಹಳ ಒಳ್ಳೆಯದು. ಏಕೆಂದರೆ ಕಾಲುಮೀರಿದಂತೆ ತಾಂತ್ರಿಕ ಸಮಸ್ಯೆ ಎದುರಾಗಬಹುದು ಎಂದು ಲೋರಿಯಲ್ ಸಂಸ್ಥೆಯು ಹೇಳಿದ್ದಾರೆ.
- ಅರ್ಜಿ ಫಾರಂನಲ್ಲಿ ನೀಡಿರುವ ಎಲ್ಲಾ ವಿವರಗಳನ್ನು ಯಾವುದೇ ತಪ್ಪಿಲ್ಲದೆ ಸರಿಯಾಗಿ ಭರ್ತಿ ಮಾಡಿ. ಹಾಗೂ ನಿಮ್ಮ ದಾಖಲೆಗಳ ಸ್ಕ್ಯಾನ್ ಕಾಪಿ ಸ್ಪಷ್ಟವಾಗಿ ಕಾಣಿಸುವ ಹಾಗೆ ಫೋಟೋ ತೆಗೆದುಕೊಳ್ಳಿ.
- ನಿಮ್ಮ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಮುಖಾಂತರ ಫೈಲ್ ಮಾಡಿಕೊಳ್ಳಿ. ಉದಾಹರಣೆ JPEG ಅಥವಾ PNG.
- ಬಹಳ ಮುಖ್ಯವಾಗಿ ನಿಮ್ಮ ಅರ್ಜಿ ಸಬ್ಮಿಟ್ ಮಾಡುವಾಗ ನಿಮ್ಮ ವಿವರ ಮತ್ತು ದಾಖಲೆಗಳನ್ನು ಸರಿಯಾಗಿ ಮತ್ತೊಂದು ಸಲ ಪರಿಶೀಲಿಸಿಕೊಳ್ಳಿ.
ಲೋರಿಯಲ್ ವಿದ್ಯಾರ್ಥಿ ವೇತನ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ? – Loreal scholarship selection process
ಈ ವಿದ್ಯಾರ್ಥಿ ವೇತನದ ಆಯ್ಕೆ ಪ್ರಕ್ರಿಯೆಯು ನೀವು ನೀಡಿರುವ ವೈಯಕ್ತಿಕ ವಿವರ ಹಾಗೂ ದಾಖಲೆಗಳನ್ನು ಲೋರಿಯಲ್ ಸಂಸ್ಥೆಯ ಟೀಮ್ ಸರಿಯಾಗಿ ಪರಿಶೀಲಿಸುತ್ತಾರೆ. ವಿದ್ಯಾರ್ಥಿ ವೇತನಕ್ಕೆ ಸೆಲೆಕ್ಟ್ ಆದ ಅಭ್ಯರ್ಥಿಗಳು ಇ-ಮೇಲ್ ಮುಖಾಂತರ ಸೂಚನೆ ನೀಡಲಾಗುತ್ತದೆ.
Also Read :- Canara Bank personal loan 2025 : ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!
Loreal Scholarship 2025 : ಲೋರಿಯಲ್ ವಿದ್ಯಾರ್ಥಿವೇತನವು ಭಾರತದ ಭವಿಷ್ಯದ ಯುವ ವಿಜ್ಞಾನಿಯರನ್ನು ರೂಪಿಸುವಲ್ಲಿ ಒಂದು ಮಹತ್ವ ಪಾತ್ರ ವಹಿಸುತ್ತದೆ. ಇದು ಕೇವಲ ಒಂದು ಆರ್ಥಿಕ ಸಹಾಯ ಮಾತ್ರವಲ್ಲ ಬದಲಿಗೆ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಅತ್ಯುತ್ತಮ ಯೋಜನೆಯಾಗಿದೆ. ನೀವೇನಾದರೂ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ನವೆಂಬರ್ 21, 2025 ಗಿಂತ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಿ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಲೋರಿಯಲ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಇಲ್ಲಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಿ.
ಪ್ರಮುಖ ಲಿಂಕ್ :- Link https://www.buddy4study.com/page/loreal-india-for-young-women-in-science-scholarships
ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆ, ಉದ್ಯೋಗದ ಮಾಹಿತಿ, ಕೃಷಿ ಸುದ್ದಿ, ಹಾಗೂ ವಿದ್ಯಾರ್ಥಿ ವೇತನ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡುತ್ತಾ ಇರಿ. ಇದರಲ್ಲಿ ನಾವು ನಿಖರವಾದ ಮಾಹಿತಿಯೊಂದಿಗೆ ನಿಮ್ಮ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಎಂದಿಗೂ ಸಿದ್ದರಾಗಿರುತ್ತೇವೆ.
FAQ ಜನರು ಹೆಚ್ಚು ಕೇಳುವ ಪ್ರಶ್ನೆಗಳು ?
- ನಾನು ನಾತಕೋತರ (M.Sc, M.Tech) ಪದವಿ ಮಾಡುತ್ತಿದ್ದೇನೆ ನಾನು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾ ?
- ಇಲ್ಲ ಸ್ನೇಹಿತರೆ ನೀವು ಅಂಡರ್ ಗ್ರಾಜುಯೇಷನ್ ಮಟ್ಟದ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿದ್ದರೆ ಮಾತ್ರ ಈ ಯೋಜನೆಗೆ ನೀವು ಅರ್ಹತೆ ಹೊಂದಿರುತ್ತೀರಿ. ಈ ಕ್ಷೇತ್ರ ಬಿಟ್ಟು ಬೇರೆ ಯಾವ ಕೋರ್ಸ್ ಮಾಡಿದರೂ ಸಹ ನಿಮಗೆ ವಿದ್ಯಾರ್ಥಿ ವೇತನವು ಸಿಗುವುದಿಲ್ಲ.
- ನಾನು 12ನೇ ತರಗತಿಯಲ್ಲಿ 58% ಅಂಕಗಳನ್ನು ಪಡೆದಿದ್ದೇನೆ ನಾನು ಅರ್ಜಿ ಸಲ್ಲಿಸಬಹುದೇ ?
- ಇಲ್ಲ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನೀವು ವಿಜ್ಞಾನ ಹಾಗೂ ಗಣಿತ ಸಂಬಂಧಿತ ವಿಷಯದಲ್ಲಿ 12ನೇ ತರಗತಿಯಲ್ಲಿ 60% ಅಂತ ಪಡೆದಿರಬೇಕು.
- ಈ ವಿದ್ಯಾರ್ಥಿವೇತನದ ಹಣವನ್ನು ನಾನು ಹೇಗೆ ತೆಗೆದುಕೊಳ್ಳಬಹುದು.
- ನೀವು ಆಯ್ಕೆಯಾದರೆ ವಿದ್ಯಾರ್ಥಿ ವೇತನದ ಒಂದು ಲಕ್ಷ ರೂಪಾಯಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
- ಆಯ್ಕೆ ಪ್ರಕ್ರಿಯೆ ಯಾವ ರೀತಿಯಲ್ಲಿ ಇರುತ್ತದೆ ?
- ಈ ವಿದ್ಯಾರ್ಥಿ ವೇತನದ ಆಯ್ಕೆ ಪ್ರಕ್ರಿಯೆಯು ನೀವು ನೀಡಿರುವ ವೈಯಕ್ತಿಕ ವಿವರ ಹಾಗೂ ದಾಖಲೆಗಳನ್ನು ಲೋರಿಯಲ್ ಸಂಸ್ಥೆಯ ಟೀಮ್ ಸರಿಯಾಗಿ ಪರಿಶೀಲಿಸುತ್ತಾರೆ. ವಿದ್ಯಾರ್ಥಿ ವೇತನಕ್ಕೆ ಸೆಲೆಕ್ಟ್ ಆದ ಅಭ್ಯರ್ಥಿಗಳು ಇ-ಮೇಲ್ ಮುಖಾಂತರ ಸೂಚನೆ ನೀಡಲಾಗುತ್ತದೆ.
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕುಟುಂಬದ ವಾರ್ಷಿಕ ಆದಾಯ ಎಷ್ಟಿರಬೇಕು ?
- ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಅರ್ಜಿ ಸಲ್ಲಿಸುವಾಗ ಯಾವುದೇ ಶುಲ್ಕವಿದೆಯೇ ?
- ಇಲ್ಲ ಲೋರಿಯಲ್ ಸಂಸ್ಥೆಯು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ. ಇದು ಸಂಪೂರ್ಣ ಉಚಿತವಾಗಿದೆ.
- ಅರ್ಜಿ ಎಲ್ಲಿ ಸಲ್ಲಿಸಬೇಕು ?
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ ಲೋರಿಯಲ್ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
- Link : – https://www.buddy4study.com/page/loreal-india-for-young-women-in-science-scholarships
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಷ್ಟು ?
- ನವಂಬರ್ 30 /2025 ರವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದ್ದಾರೆ. ಆಸಕ್ತ ಅಭ್ಯರ್ಥಿಗಳು ಕೊನೆ ದಿನಾಂಕದವರೆಗೂ ಕಾಯದೆ ಅರ್ಜಿಯನ್ನು ಸಲ್ಲಿಸಿ.








