SEBI Recruitment 2026: 110 ಗ್ರೇಡ್ ‘ಎ’ ಸಹಾಯಕ ವ್ಯವಸ್ಥಾಪಕ ಹುದ್ದೆಗಳು | ವೇತನ ₹1.84 ಲಕ್ಷ | ಈಗಲೇ ಅರ್ಜಿ

karnatakasuddi.com

By: Karnataka Suddi

On: Monday, February 9, 2026 12:54 PM

SEBI Recruitment 2026
SEBI Recruitment 2026 ಅಧಿಸೂಚನೆ ಬಿಡುಗಡೆ. 110 ಗ್ರೇಡ್ ‘ಎ’ ಸಹಾಯಕ ವ್ಯವಸ್ಥಾಪಕ ಹುದ್ದೆಗಳು. ಅರ್ಹತೆ, ವೇತನ ₹1.84 ಲಕ್ಷ, ಅರ್ಜಿ ದಿನಾಂಕ ತಿಳಿಯಿರಿ.

ಭಾರತದ ಬಂಡವಾಳ ಮಾರುಕಟ್ಟೆಗಳ ನಿಯಂತ್ರಣ ಮತ್ತು ಆರ್ಥಿಕ ಭದ್ರತೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುವ ಭಾರತೀಯ ಭದ್ರತಾ ಪಾತ್ರಗಳು ಮತ್ತು ವಿನಿಮಯ ಮಂಡಳಿ ಅಂದರೆ SEBI Recruitment 2026 (SEBI) ಸಂಸ್ಥೆಯು ಎ ಗ್ರೇಡ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಪ್ರಕಟಿಸಿದ್ದಾರೆ. 

ಈ ನೇಮಕಾತಿಯ ಮೂಲಕ ಒಟ್ಟು 110 ಅಧಿಕಾರಿ ಹುದ್ದೆಗಳು ಭರ್ತಿ ಮಾಡಲಾಗುತ್ತಿದ್ದು, ಜನರಲ್, ಲೀಗಲ್, ಐಟಿ, ರಿಸರ್ಚ್, ಅಧಿಕೃತ ಭಾಷೆ ಹಾಗೂ ಇಂಜಿನಿಯರಿಂಗ್ (ಸಿವಿಲ್/ಎಲೆಕ್ಟ್ರಿಕಲ್) ಸೇರಿದಂತೆ 7 ವಿಭಿನ್ನ ಸ್ಟ್ರೀಮ್‌ಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

SEBI ನೇಮಕಾತಿ ವಿವರಗಳು 

ಸಂಸ್ಥೆ: ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ

ಹುದ್ದೆಯ ಹೆಸರು: ಆಫೀಸರ್ ಗ್ರೇಡ್ ‘ಎ’ (ಅಸಿಸ್ಟೆಂಟ್ ಮ್ಯಾನೇಜರ್)

ಒಟ್ಟು ಹುದ್ದೆಗಳು: 110

ಉದ್ಯೋಗ ಸ್ಥಳ: ಭಾರತಾದ್ಯಂತ SEBI ಕಚೇರಿಗಳು

ಅರ್ಜಿಯ ವಿಧಾನ: ಆನ್‌ಲೈನ್ ಮಾತ್ರ.

ಒಟ್ಟು ಖಾಲಿ ಇರುವ ಹುದ್ದೆಗಳು ?

  1. ಜನರಲ್ ಸ್ಟ್ರೀಮ್: 56 ಹುದ್ದೆಗಳು
  2. ಲೀಗಲ್ ಸ್ಟ್ರೀಮ್: 20 ಹುದ್ದೆಗಳು
  3. ಮಾಹಿತಿ ತಂತ್ರಜ್ಞಾನ (IT): 22 ಹುದ್ದೆಗಳು
  4. ರಿಸರ್ಚ್ ಸ್ಟ್ರೀಮ್: 4 ಹುದ್ದೆಗಳು
  5. ಅಧಿಕೃತ ಭಾಷೆ: 3 ಹುದ್ದೆಗಳು
  6. ಇಂಜಿನಿಯರಿಂಗ್ (ಎಲೆಕ್ಟ್ರಿಕಲ್): 2 ಹುದ್ದೆಗಳು
  7. ಇಂಜಿನಿಯರಿಂಗ್ (ಸಿವಿಲ್): 3 ಹುದ್ದೆಗಳು

ಶೈಕ್ಷಣಿಕ ಅರ್ಹತೆ ?

ಜನರಲ್ ಸ್ಟ್ರೀಮ್:  ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಡಿಗ್ರಿ ಪದವಿ ಅಥವಾ ಕಾನೂನು,CA,CS, CFA ಪದವಿ ಮುಗಿಸಿರಬೇಕು. 

ಲೀಗಲ್ ಸ್ಟ್ರೀಮ್ : ಮಾನ್ಯತೆ ಪಡೆದ ಸಂಸ್ಥೆಯಿಂದ LL.B ಪದವಿ (2 ವರ್ಷ ಅನುಭವ ಇರುವವರಿಗೆ ಆದ್ಯತೆ)

IT ಸ್ಟ್ರೀಮ್: ಇಂಜಿನಿಯರಿಂಗ್ ಪದವಿ ಅಥವಾ ಕಂಪ್ಯೂಟರ್ ಸೈನ್ಸ್ / ಐಟಿ / MCA ಸ್ನಾತಕೋತ್ತರ ಪದವಿ

ರಿಸರ್ಚ್ ಸ್ಟ್ರೀಮ್: ಅರ್ಥಶಾಸ್ತ್ರ, ಫೈನಾನ್ಸ್, ಅಂಕಿಅಂಶ, ಡಾಟಾ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ

ಇಂಜಿನಿಯರಿಂಗ್: ಸಂಬಂಧಿತ ಶಾಖೆಯಲ್ಲಿ ಬ್ಯಾಚುಲರ್ ಪದವಿ

ವಯೋಮಿತಿ

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ  18 ರಿಂದ ಗರಿಷ್ಠ 30 ವರ್ಷದ ಒಳಗಿರಬೇಕು.

SC/ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ

OBC (NCL): 3 ವರ್ಷ ಸಡಿಲಿಕೆ

PwBD / ಮಾಜಿ ಸೈನಿಕರಿಗೆ: ಸರ್ಕಾರದ ನಿಯಮಾನುಸಾರ ಸಡಿಲಿಕೆ

ವೇತನ 

ಈ ಹುದ್ದೆಯಲ್ಲಿ ಮೂಲವೇತನ ಶ್ರೇಣಿಯು ₹62,500 – ₹1,26,100 ರವರಿಗೆ ಇರುತ್ತದೆ ಹಾಗೂ ನಿಮಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದಂತ ಎಲ್ಲಾ ಸೌಲಭ್ಯವು ಕೂಡ ಈ ಹುದ್ದೆಯಲ್ಲಿ ಸಿಗುತ್ತದೆ. 

ಉದಾಹರಣೆಗೆ : DA, NPS, ವೈದ್ಯಕೀಯ ಸೌಲಭ್ಯ, LTC, Leave Encashment ಸೇರಿದಂತೆ ಹಲವು ಭತ್ಯೆಗಳು ಲಭ್ಯ.

ಅರ್ಜಿಶುಲ್ಕ

ಸಾಮಾನ್ಯ / OBC / EWS: ₹1000 + GST

SC / ST / PwBD: ₹100 + GST

ಆಯ್ಕೆ ಪ್ರಕ್ರಿಯೆ 

ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಒಟ್ಟು ಮೂರು ರೀತಿಯ ಪರೀಕ್ಷೆಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. 

  • ಆನ್ಲೈನ್ ಪರೀಕ್ಷೆ 
  • ದಾಖಲೆ ಪರಿಶೀಲನೆ 
  • ಸಂದರ್ಶನ 

ಅರ್ಜಿ ಹೇಗೆ ಸಲ್ಲಿಸುವುದು ?

  • ಮೊದಲು SEBI ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://www.sebi.gov.in/
  • ಹೋಮ್ ಪೇಜ್‌ನಲ್ಲಿ “Careers” ವಿಭಾಗವನ್ನು ಕ್ಲಿಕ್ ಮಾಡಿ ಮತ್ತು SEBI Grade A Recruitment 2025 ಅಧಿಸೂಚನೆ ಆಯ್ಕೆಮಾಡಿ.
  • ಹೊಸ ಬಳಕೆದಾರರಾದರೆ ನೀವು ಹೊಸದಾಗಿ ಖಾತೆ ರಚಿಸಿ ಲಾಗಿನ್ ಮಾಡಿಕೊಳ್ಳಿ.
  • ನಂತರ ಲಾಗಿನ್ ಆದ ನಂತರ ಅರ್ಜಿ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಎಲ್ಲಾ ಅಗತ್ಯ ವೈಯಕ್ತಿಕ ವಿವರದೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆ ಅಪ್ಲೋಡ್ ಮಾಡಿಕೊಳ್ಳಿ 
  • ಅರ್ಜಿ ಶುಲ್ಕ ಪಾವತಿಸಿ 
  • ಹಾಗೂ ಕೊನೆಯದಾಗಿ ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ಅಗತ್ಯ ದಾಖಲೆಗಳ ಪಟ್ಟಿ 

  • ಅಭ್ಯರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ. 
  • ಅಭ್ಯರ್ಥಿಯ ಸಹಿ. 
  • ಶೈಕ್ಷಣಿಕ ದಾಖಲೆಗಳು 
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಅನುಭವ ಪ್ರಮಾಣ ಪತ್ರ

ಈ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ PDF ಅಥವಾ JPEJ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment