---Advertisement---

SBI Platinum Jubilee Asha Scholarship :  9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ₹15,000 ವಿದ್ಯಾರ್ಥಿವೇತನ ಸೌಲಭ್ಯ !

karnatakasuddi.com

By: Karnataka Suddi

On: Monday, November 3, 2025 2:08 PM

SBI Platinum Jubilee Asha Scholarship :  9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ₹15,000 ವಿದ್ಯಾರ್ಥಿವೇತನ ಸೌಲಭ್ಯ !
Google News
Follow Us
---Advertisement---

Table of Contents

SBI Platinum Jubilee Asha Scholarship : SBI ವಿದ್ಯಾರ್ಥಿವೇತನ 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ₹15,000! ನವೆಂಬರ್ 15, 2025 ಗೆ ಮುನ್ನ ಅರ್ಜಿ ಸಲ್ಲಿಸಿ.

  • ವಿದ್ಯಾರ್ಥಿವೇತನದ ಹೆಸರು: SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ
  • ಯೋಜನೆಯ ವೆಬ್ಸೈಟ್: Buddy4Study.com
  • ಮೊತ್ತ: ₹15,000 ಪ್ರತಿ ವಿದ್ಯಾರ್ಥಿಗೆ
  • ಕೊನೆಯ ದಿನಾಂಕ: 15 ನವೆಂಬರ್ 2025
  • ಅರ್ಜಿ ಮಾಧ್ಯಮ: ಆನ್‌ಲೈನ್ ಮಾತ್ರ 

SBI Platinum Jubilee Asha Scholarship : 9 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಎಸ್ ಬಿ ಐ ಬ್ಯಾಂಕ್! ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಎಸ್ ಬಿ ಐ ಫೌಂಡೇಶನ್ ಒಂದು ಅದ್ಭುತ ಯೋಜನೆಯನ್ನು ಪ್ರಾರಂಭಿಸಿದೆ. ( SBI Platinum Jubilee Asha Scholarship) ಎಸ್ ಬಿ ಐ ಪ್ಲಾಟಿನಮ್ ಜುಬಿಲಿ ಆಶಾ ಸ್ಕಾಲರ್ಶಿಪ್ ಈ ಯೋಜನೆಯಿಂದ ಪ್ರತಿವರ್ಷಕ್ಕೂ ನೂರಾರು ವಿದ್ಯಾರ್ಥಿಗಳ ಜೀವನವನ್ನು  ಉತ್ತಮವಾಗಿ ಸಾಗಿಸಲು ಬಹಳ ಉಪಯೋಗವಾಗಿದೆ. 

Also Read :- Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ 1.50ಲಕ್ಷ ರೂಪಾಯಿ ನೆರವು? 

ಎಸ್ ಬಿ ಐ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಹತೆ, ಕೊನೆಯ ದಿನಾಂಕ, ಅರ್ಜಿ ಸಲ್ಲಿಸಲು ಬೇಕಾಗುವ ಅಂತ ಅಗತ್ಯ ದಾಖಲೆಗಳು, ಇನ್ನು ಹೆಚ್ಚಿನ ಮಾಹಿತಿ ಕೆಳಗಿನ ಲೇಖನದಲ್ಲಿ ಇದೆ. ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ. 

ಎಸ್ ಬಿ ಐ ಫೌಂಡೇಶನ್ ಸ್ಕಾಲರ್ಶಿಪ್ ಬಗ್ಗೆ ಹೆಚ್ಚಿನ ಮಾಹಿತಿ. – SBI Platinum Jubilee Asha Scholarship More Information 

SBI Platinum Jubilee Asha Scholarship : ಎಸ್ ಬಿ ಐ ಫೌಂಡೇಶನ್, ಭಾರತದ ಹೆಸರುವಾಸಿ ಬ್ಯಾಂಕ್ ಗಳಲ್ಲಿ ಸ್‌ಬಿಐ ಕೂಡ ಒಂದು. ಈ ಫೌಂಡೇಶನ್ ನಲ್ಲಿ ತನ್ನ ಪ್ಲಾಟ್ಫಾರಂನಲ್ಲಿ ಜೆಬಿಲಿ ಆಶಾ ವಿದ್ಯಾರ್ಥಿವೇತನ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆ ಮುಖ್ಯ ಉದ್ದೇಶವೇನೆಂದರೆ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನದ ಸಹಾಯ ಮಾಡಲು ಇದರ ಮೂಲ ಉದ್ದೇಶಆಗಿದೆ. ಮತ್ತು ಅರ್ಹತೆ ಇರುವ ಪ್ರತಿ ವಿದ್ಯಾರ್ಥಿಗೂ ಕೂಡ ಸುಮಾರು ₹15,000 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹಾಗೂ ಬಹು ಮುಖ್ಯವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15 ರವರೆಗೆ ಮಾತ್ರ ಕಾಲಾವಕಾಶ ಇರುವುದು ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

ವಿದ್ಯಾರ್ಥಿವೇತನದ ಪ್ರಯೋಜನಗಳು ? – SBI Scholarship Benefits

ಎಸ್ ಬಿ ಐ ವಿದ್ಯಾರ್ಥಿ ವೇತನವು ಕೇವಲ ಆರ್ಥಿಕ ಸಹಾಯವಲ್ಲ ಇದು ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತಮಗೊಳಿಸಲು ಬಹಳ ಸಹಾಯ ಮಾಡುತ್ತದೆ. ವಿದ್ಯಾರ್ಥಿ ವೇತನದಿಂದ ಬಂದ ಹಣದಿಂದ ವಿದ್ಯಾರ್ಥಿಗಳು ತಮ್ಮ ದಿನನಿತ್ಯಕ್ಕೆ ಬೇಕಾಗುವಂತಹ ಪಠ್ಯ ಪುಸ್ತಕಗಳು, ಯೂನಿಫಾರಂ, ಸಾರಿಗೆ ಮತ್ತು ಇತರೆ ಶುಲ್ಕ, ಇನ್ನು ಇತ್ಯಾದಿ.. ಖರ್ಚುಗಳಿಗೆ ಬಹಳ ಉಪಯೋಗವಾಗುತ್ತದೆ. ಈ ಎಸ್ ಬಿ ಐ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ನೋಡುವುದಾದರೆ ಕೆಳಗಿನ ಲೇಖನದಲ್ಲಿ ಇದೆ ಅದನ್ನು ಸರಿಯಾಗಿ ಅನುಸರಿಸಿ.

ಎಸ್ ಬಿ ಐ ವಿದ್ಯಾರ್ಥಿ ವೇತನಕ್ಕೆ ಅರ್ಹತೆಗಳು?  (SBI Scholarship Eligibility)

ಈ ಎಸ್ ಬಿ ಐ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ಪ್ರತಿ ವಿದ್ಯಾರ್ಥಿಯು ಈ ಕೆಳಗೆ ನೀಡಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು. 

  • ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಪ್ರತಿ ವಿದ್ಯಾರ್ಥಿಯು  ಭಾರತೀಯ ನಾಗರಿಕನಾಗಿರಬೇಕು.
  • ಹಾಗೂ ವಿದ್ಯಾರ್ಥಿಗಳು 9,10, ಅಥವಾ 12ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿರಬೇಕು 
  • ವಿದ್ಯಾರ್ಥಿಯು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅಥವಾ ತರಗತಿಯಲ್ಲಿ ಕನಿಷ್ಠವಾಗಿ 75% ಅಂಕ ಪಡೆದಿರಬೇಕು. 
  • ಹಾಗೂ ಬಹು ಮುಖ್ಯವಾಗಿ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು. 
  • ಇದಿಷ್ಟು ಅರ್ಹತೆ ನೀವು ಹೊಂದಿದ್ದರೆ ನೀವು ಎಸ್ಬಿಐ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಇರುವುದು. 

ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲೆಗಳು – Required Documents For Scholarship

ಎಸ್ ಬಿ ಐ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳು ಅಗತ್ಯವಾಗಿ ಕೇಳಲಾಗುತ್ತದೆ. 

  • ವಿದ್ಯಾರ್ಥಿಯ ಆಧಾರ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ 
  • ಶೈಕ್ಷಣಿಕ ಪ್ರಮಾಣ ಪತ್ರ ( ಉದಾಹರಣೆಯ ನಿಮ್ಮ ಅಂಕಪಟ್ಟಿ )
  • ನಿಮ್ಮ ಕುಟುಂಬದ ಆದಾಯ ಪ್ರಮಾಣ ಪತ್ರ 
  • ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ. 

ನೆನಪಿರಲಿ : ಇದಿಷ್ಟು ದಾಖಲೆಗಳು ಕೂಡ ಜೆಪಿಇಜಿ (JPEG) ಅಥವಾ ಪಿಡಿಎಫ್ (PDF)  ಫಾರ್ಮೆಟ್ ನಲ್ಲಿ ಇರಬೇಕು ಹಾಗೂ ಬಹು ಮುಖ್ಯವಾಗಿ 2 MB ಗಿಂತ ಕಡಿಮೆ ಇರಬೇಕು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? – Scholarship Online Application – Step by Step Guide

ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮೊದಲನೇದು ನೀವು ಸ್ವತಹ ನಿಮ್ಮ ಮೊಬೈಲ್ ಫೋನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ಎರಡನೆಯದು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ವಿಧಾನವನ್ನು ತಿಳಿಯಲು ಕೆಳಗಿನ ಲೇಖನವನ್ನು ಅನುಸರಿಸಿ.

  • ಮೊದಲು ಅಧಿಕೃತ https://www.buddy4study.com/sbiplatinumjubilee ವೆಬ್ಸೈಟ್ಗೆ ಭೇಟಿ ನೀಡಿ.
  • ನಂತರ “Scholarship Online Application” ಇಲ್ಲಿ ಕ್ಲಿಕ್ ಮಾಡಿಕೊಳ್ಳಿ. 
  • ವೆಬ್ಸೈಟ್ ಅಪ್ಲಿಕೇಶನ್ ಲೋಡ್ ಆದ ನಂತರ  ಇದನ್ನು ” SBI Platinum Jubilee Asha Scholarship for School Students 2025-26″ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿದ ನಂತರ  Apply now ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  •  ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಉಪಯೋಗಿಸಿ ನಿಮ್ಮ ಖಾತೆಯನ್ನು ರಚಿಸಿಕೊಳ್ಳಿ.
  •  ಪುನಹ ಲಾಗಿನ್ ಮಾಡಿ. ನಂತರ ಅಲ್ಲಿ ಕೇಳುವ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿಕೊಳ್ಳಿ ಉದಾಹರಣೆಗೆ :- ನಿಮ್ಮ ಹೆಸರು, ಶೈಕ್ಷಣಿಕ ಮಾಹಿತಿ, ಬ್ಯಾಂಕ್ ಖಾತೆ ವಿವರ,
  •  ನಂತರ ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳ ಪಟ್ಟಿ ಮೇಲೆ ನೀಡಲಾಗಿದೆ ಅದನ್ನು ನೋಡಿಕೊಳ್ಳಿ.
  •  ನಿಮ್ಮ ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.
  •  ಅರ್ಜಿ ಪರಿಶೀಲಿಸಿದ ನಂತರ ಕೊನೆಯದಾಗಿ (Submit) ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಎಸ್ ಬಿ ಐ ವಿದ್ಯಾರ್ಥಿ ವೇತನದ ಆಯ್ಕೆ ಪ್ರಕ್ರಿಯೆ ಹೇಗಿರುವುದು?- SBI Scholarship Selection Process

ಎಲ್ಲ ಅರ್ಜಿಗಳನ್ನು ಸಂಗ್ರಹಿಸಿದ ನಂತರ ಎಸ್‌ಬಿಐ ಫೌಂಡೇಶನ್ ತಂಡವು ಈ ಕೆಳಗಿನ ಆಧಾರದ ಮೇಲೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 

  • ದಾಖಲೆ ಪರಿಶೀಲನೆ : ಎಸ್ ಬಿ ಐ ಫೌಂಡೇಶನ್ ತಂಡವು ಮೊದಲು ವಿದ್ಯಾರ್ಥಿಯ ದಾಖಲೆಯನ್ನು ಪರಿಶೀಲನೆ ನಡೆಸುತ್ತಾರೆ .
  • ಶೈಕ್ಷಣಿಕ ಮೆಟ್ರಿಕ್: 75% ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊದಲ ಪ್ರಾಮುಖ್ಯತೆ ನೀಡಲಾಗುತ್ತದೆ. 
  • ವಿದ್ಯಾರ್ಥಿಯ ಆರ್ಥಿಕ ಬೇಡಿಕೆ: ಕೊನೆಯದಾಗಿ ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇಂದು ಸರಿಯಾಗಿ ಪರಿಶೀಲಿಸುತ್ತಾರೆ. 

ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಸೂಚನೆ ನೀಡಲಾಗುತ್ತದೆ. 

Also Read :- Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ 1.50ಲಕ್ಷ ರೂಪಾಯಿ ನೆರವು? 

ಗಮನಿಸಿ :- ನೀವೇ ಸ್ವತಃ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಅರ್ಜಿ ಬರ್ತಿಯನ್ನು ಸರಿಯಾಗಿ ಭರ್ತಿ ಮಾಡಿಕೊಳ್ಳಬೇಕು. ಚಿಕ್ಕಪುಟ್ಟು ತಪ್ಪು ಮಾಡಿದರೆ ನಿಮ್ಮ ಅರ್ಜಿ ರಿಜೆಕ್ಟ್ ಆಗುವ ಸಾಧ್ಯತೆ ಇರುವುದು. ಒಂದು ವೇಳೆ ನಿಮಗೆ ಅರ್ಜಿ ಸಲ್ಲಿಸಲು ಬರುವುದಿಲ್ಲವೆಂದರೆ ದಯವಿಟ್ಟು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೂ ಬಹು ಮುಖ್ಯವಾಗಿ ಅರ್ಜಿ ಸಲ್ಲಿಸುವ ವೇಳೆ ಯಾವುದೇ ರೀತಿಯಲ್ಲೂ ತಪ್ಪು ಮಾಹಿತಿ ಕೊಡುವಂತಿಲ್ಲ ಒಂದು ವೇಳೆ ತಪ್ಪು ಮಾಹಿತಿ ಕೊಂಡು ಬಂದರೆ ಅಂತಹ ವಿದ್ಯಾರ್ಥಿಗಳನ್ನು ರಿಜೆಕ್ಟ್ ಮಾಡಬಹುದೆಂದು ಎಸ್ ಬಿ ಐ ಫೌಂಡೇಶನ್ ತಂಡ ಅಧಿಕೃತವಾಗಿ ಸೂಚನೆ ನೀಡಿದ್ದಾರೆ. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? – Last Date for Scholarship

ಎಸ್‌ಬಿಐ ವಿದ್ಯಾರ್ಥಿ ವೇತನಕ್ಕೆ ಅರ್ಜಿ  ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 /11/2025 ರವರೆಗೆ ಮಾತ್ರ ನೀಡಲಾಗಿದೆ. ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಬೇಗ ಸಲ್ಲಿಸಿ.

SBI Platinum Jubilee Asha Scholarship : ಎಸ್ ಬಿ ಐ ಪ್ಲಾಟಿನಮ್ ಜಬಿಲಿ ಆಶಾ ವಿದ್ಯಾರ್ಥಿವೇತನವು ಇದು ಕೇವಲ ಆರ್ಥಿಕ ಸಹಾಯ ಅಲ್ಲ ಅದೆಷ್ಟೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆಶಾ ಕಿರಣವಾಗಿದೆ. ಈ ಯೋಜನೆ ಅಡಿಯಲ್ಲಿ ಆಯ್ಕೆಯಾದ ಪ್ರತಿ ವಿದ್ಯಾರ್ಥಿಯರಿಗೂ ಕೂಡ ₹ 15000 ರೂಪಾಯಿ ವರೆಗೆ  ಸಹಾಯ ಮಾಡಲು ಎಸ್ ಬಿ ಐ ಕಾಲರ್ ಶಿಪ್ ಫೌಂಡೇಶನ್ ತಂಡವು ಮುಂದಾಗಿದೆ. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಮಾತ್ರ ಉಳಿದಿದೆ. ನವಂಬರ್ 15ರವರೆಗೆ ಮಾತ್ರ ಕಾಲಾವಕಾಶ ನೀಡುತ್ತಿದ್ದಾರೆ . ಇನ್ನು ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ತಡವಾದರೆ ಸರ್ವರ್ ಪ್ರಾಬ್ಲಮ್ ಎದುರಿಸಬೇಕಾಗಬಹುದು ಎಂದು ಎಸ್‌ಬಿಐ ಅಧಿಕೃತವಾಗಿ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಮಾತ್ರ ಭೇಟಿ ನೀಡಿ ಪರಿಶೀಲಿಸಬೇಕು. ಅಧಿಕೃತ ವೆಬ್ಸೈಟ್ ಕೆಳಗೆ ಲಿಂಕಿನಲ್ಲಿ :- https://www.buddy4study.com/sbiplatinumjubilee 

ಅರ್ಜಿ ಪ್ರಕ್ರಿಯೆ ಅಥವಾ ವಿದ್ಯಾರ್ಥಿವೇತನದ ಬಗ್ಗೆ ಯಾವುದೇ ಸಹಾಯ ಅಗತ್ಯವಿದ್ದರೆ, Buddy4Study ಹೆಲ್ಪ್‌ಡೆಸ್ಕ್ ಅನ್ನು ಸಂಪರ್ಕಿಸಬಹುದು.

  • ಫೋನ್: 011-430-92248 (ಸೋಮ-ಶುಕ್ರ, 10:00 AM – 6:00 PM)
  • ಇಮೇಲ್: help@buddy4study.com
ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆ, ಉದ್ಯೋಗದ ಮಾಹಿತಿ, ಕೃಷಿ ಸುದ್ದಿ,  ಹಾಗೂ ವಿದ್ಯಾರ್ಥಿ ವೇತನ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡುತ್ತಾ ಇರಿ. ಇದರಲ್ಲಿ ನಾವು ನಿಖರವಾದ ಮಾಹಿತಿಯೊಂದಿಗೆ ನಿಮ್ಮ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಎಂದಿಗೂ ಸಿದ್ದರಾಗಿರುತ್ತೇವೆ. 

karnataka Suddi

For Feedback - feedback@example.com

Join WhatsApp

Join Now

Join Telegram

Join Now

Leave a Comment