NWKRTC Recruitment 2025 : ಕೇಂದ್ರ ಸಾರಿಗೆ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 

karnatakasuddi.com

By: Karnataka Suddi

On: Monday, November 24, 2025 3:44 PM

NWKRTC Recruitment 2025 : ಕೇಂದ್ರ ಸಾರಿಗೆ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 
| Follow Us |

NWKRTC Recruitment 2025 : ಕೇಂದ್ರ ಸಾರಿಗೆ ಸಂಸ್ಥೆಯಲ್ಲಿ ಉನ್ನತ ದರ್ಜೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದ್ದಾರೆ. 

NWKRTC Recruitment 2025 : ನೀವೇನಾದರೂ ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಯಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ( NWKRTC ) ಆಡಳಿತದಲ್ಲಿ ಉನ್ನತ ದರ್ಜೆಯ ಅಧಿಕಾರಿಯಾಗಿ ಕೆಲಸ ಮಾಡಲು ಆಸೆ ಇದೆಯಾ ಹಾಗಾದರೆ ಈ ಹುದ್ದೆ ನಿಮಗಾಗಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ಪ್ರಗತಿಸಿರುವ ಈ 2 ದರ್ಜೆ ಅಧಿಕಾರಿಗಳ  ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 33 ಮಹತ್ವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 10/2025 ಈ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಿ. ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ.

Also Read :- Muthoot Finance Scholarship 2025 : ಮುತ್ತುಟ್ ಫೈನಾನ್ಸ್ ಕಡೆಯಿಂದ ವಿದ್ಯಾರ್ಥಿಗಳಿಗೆ 2.40 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಯೋಜನೆ. 

NWKRTC Recruitment 2025 : ನೇಮಕಾತಿ ವಿವರ

ವಿವರಮಾಹಿತಿ
ನೇಮಕಾತಿ ಸಂಸ್ಥೆವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯ ಪರವಾಗಿ KEA
ಹುದ್ದೆಗಳ ಹೆಸರುದರ್ಜೆ-2 ಅಧಿಕಾರಿಗಳು (ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಇತ್ಯಾದಿ.)
ಒಟ್ಟು ಹುದ್ದೆಗಳು33 ಹುದ್ದೆಗಳು 
ಆನ್‌ಲೈನ್ ಅರ್ಜಿ ಆರಂಭ21 ನವೆಂಬರ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ10 ಡಿಸೆಂಬರ್ 2025
ಅರ್ಜಿ ವಿಧಾನಆನ್‌ಲೈನ್ ಮೂಲಕ (KEA ವೆಬ್‌ಸೈಟ್)
ವೇತನ ಶ್ರೇಣಿರೂ. 42,600/- ರಿಂದ ಪ್ರಾರಂಭ

ಯಾವ ಅಧಿಕಾರಿಗಳ ಹುದ್ದೆ ಲಭ್ಯ ? – Which job positions are available?

NWKRTC Recruitment 2025 : ಈ ನೇಮಕಾತಿಯಲ್ಲಿ ಹುದ್ದೆಯಹಲವು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಹುದ್ದೆಗಳ ಪಟ್ಟಿ ಕೆಳಗೆ ನೀಡಲಾಗಿದೆ. 

  • ಸಹಾಯಕ ಸಂಚಾರ ವ್ಯವಸ್ಥಾಪಕ: 8 ಹುದ್ದೆಗಳು
  • ಸಹಾಯಕ ತಾಂತ್ರಿಕ ಶಿಲ್ಪಿ: 6 ಹುದ್ದೆಗಳು
  • ಸಹಾಯಕ ಕಾನೂನು ಅಧಿಕಾರಿ: 5 ಹುದ್ದೆಗಳು
  • ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ: 4 ಹುದ್ದೆಗಳು
  • ಸಹಾಯಕ ಆಡಳಿತಾಧಿಕಾರಿ: 2 ಹುದ್ದೆಗಳು
  • ಸಹಾಯಕ ಲೆಕ್ಕಾಧಿಕಾರಿ: 2 ಹುದ್ದೆಗಳು

Also Read :- Loreal Scholarship 2025 : ಲೋರಿಯಲ್  1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ!. 

ಶೈಕ್ಷಣಿಕ ಅರ್ಹತೆ – Educational qualification 

NWKRTC Recruitment 2025 : ಪ್ರತಿ ಹುದ್ದೆಗೂ ಕೂಡ ತನ್ನದೇ ಆದಂತ ಶೈಕ್ಷಣಿಕ ಅರ್ಹತೆ ಇರುತ್ತದೆ. ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ನೋಡಿಕೊಳ್ಳಿ. 

ಹುದ್ದೆಯ ಹೆಸರುಪ್ರಮುಖ ಅರ್ಹತೆ
ಸಹಾಯಕ ಸಂಚಾರ ವ್ಯವಸ್ಥಾಪಕMBA (ಸಾರಿಗೆ/ಮಾರ್ಕೆಟಿಂಗ್), MSW (ಸಿಬ್ಬಂದಿ ನಿರ್ವಹಣೆ/ಕೈಗಾರಿಕಾ ಸಂಬಂಧ), ಅಥವಾ BE (ಮೆಕ್ಯಾನಿಕಲ್/ಆಟೋಮೊಬೈಲ್). + ಕಡ್ಡಾಯವಾಗಿ HTV ಡ್ರೈವಿಂಗ್ ಲೈಸೆನ್ಸ್.
ಸಹಾಯಕ ತಾಂತ್ರಿಕ ಶಿಲ್ಪಿBE (ಆಟೋಮೊಬೈಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್) + ಕಡ್ಡಾಯವಾಗಿ HTV ಡ್ರೈವಿಂಗ್ ಲೈಸೆನ್ಸ್.
ಸಹಾಯಕ ಕಾನೂನು ಅಧಿಕಾರಿಕಾನೂನು ಪದವಿ (Law Degree) + ಕನಿಷ್ಠ 2 ವರ್ಷ ವಕೀಲರಾಗಿ ಅಭ್ಯಾಸ.
ಸಹಾಯಕ ಲೆಕ್ಕಾಧಿಕಾರಿM.Com ಅಥವಾ MBA (ಹಣಕಾಸು) ಜೊತೆಗೆ B.Com ಪದವಿ.
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿMSW – ಕೈಗಾರಿಕಾ ಸಂಬಂಧಗಳು/ಕಾರ್ಮಿಕ ಕಲ್ಯಾಣದಲ್ಲಿ ವಿಶೇಷತೆ.
ಸಹಾಯಕ ಆಡಳಿತಾಧಿಕಾರಿಸ್ನಾತಕೋತ್ತರ ಪದವಿ (ಸಮಾಜಕಾರ್ಯ/ವ್ಯವಹಾರ ನಿರ್ವಹಣೆ) – ಸಿಬ್ಬಂದಿ ನಿರ್ವಹಣೆಯಲ್ಲಿ ವಿಶೇಷತೆ.

ಗಮನಿಸಿ: ಸಹಾಯಕ ಸಂಚಾರ ವ್ಯವಸ್ಥಾಪಕ ಮತ್ತು ಸಹಾಯಕ ತಾಂತ್ರಿಕ ಶಿಲ್ಪಿ ಹುದ್ದೆಗಳಿಗೆ ಭಾರಿ ವಾಹನ ಚಾಲನಾ ಪರವಾನಗಿ (HTV) ಕಡ್ಡಾಯ! 

ಈ ಹುದ್ದೆಗೆ ವಯೋಮಿತಿ – Age limit for this post

NWKRTC Recruitment 2025 : ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಮಗೆ ಕನಿಷ್ಠ ವಯಸ್ಸು 18 ರಿಂದ ಗರಿಷ್ಠ 38 ವಯಸ್ಸಿನ ನಡುವೆ ಇರಬೇಕು.   ಹಾಗೂ ಈ ಹುದ್ದೆಯಲ್ಲಿ ವಯಸ್ಸಿನ ಸಡಿಲಿಕ್ಕೆ ಕೂಡ ಇರುತ್ತದೆ. 

  • 2A, 2B, 3A, 3B: ಗರಿಷ್ಠ 41 ವರ್ಷಗಳು
  • ಪ.ಜಾತಿ, ಪ.ಪಂಗಡ, ಪ್ರವರ್ಗ-1: ಗರಿಷ್ಠ 43 ವರ್ಷಗಳು
  • ಇಲಾಖಾ ಅಭ್ಯರ್ಥಿಗಳಿಗೆ (ಆಂತರಿಕ ನೇಮಕಾತಿ) ಗರಿಷ್ಠ 45 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಲಭ್ಯವಿದೆ

ಅರ್ಜಿ ಶುಲ್ಕ – Application fee

ಈ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಶುಲ್ಕ ನೀಡಬೇಕಾಗುತ್ತದೆ. ಶುಲ್ಕವು ಆನ್ಲೈನ್ ಮುಖಾಂತರ ಪಾವತಿ ಮಾಡಬೇಕು. 

  • ಸಾಮಾನ್ಯ ವರ್ಗದವರು : ₹ 750/-
  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪವರ್ಗ-1 / ಹಾಗೂ ಮಾಜಿ ಸೈನಿಕರು : ₹500/-
  • ವಿಕಲಚೇತನ ಅಭ್ಯರ್ಥಿಗಳು : ₹250/-

Also Read :-   BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮ ನಲ್ಲಿ ಸುಪ್ರವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 

ವೇತನ ಶ್ರೇಣಿ – Salary scale

NWKRTC Recruitment 2025 : ಈ ಹುದ್ದೆಗೆ ವೇತನ ಶ್ರೇಣಿ ನೋಡುವುದಾದರೆ ದರ್ಜೆ -2  ಅಧಿಕಾರಿ ಹುದ್ದೆಗಳಿಗೆ ನಿಮ್ಮ ಆರಂಭಿಕ ಸಂಬಳವು 42,600/- ಇಂದ ಶುರುವಾಗುತ್ತದೆ. ಇದರ ಜೊತೆಗೆ ನಿಮಗೆ ಸರ್ಕಾರಿ ಉದ್ಯೋಗದ ಎಲ್ಲಾ ಪ್ರಯೋಜನಗಳು ಮತ್ತು ಸೌಲಭ್ಯಗಳು ಲಭ್ಯವಾಗುತ್ತದೆ. ಇದು ದೀರ್ಘಕಾಲಿನ ಆರ್ಥಿಕ ಸುರಕ್ಷತೆ ಹಾಗೂ ನಿಮ್ಮ ಜೀವನ ಗುಣಮಟ್ಟವನ್ನು ಸುಗಮವಾಗಿ ಸಾಗಿಸಲು ಇದು ಒಳ್ಳೆಯ ಆರಂಭಿಕ ಸಂಬಳವಾಗಿದೆ. ಸಂಬಳದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. 

NWKRTC Recruitment 2025 : ಕೇಂದ್ರ ಸಾರಿಗೆ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 

ಆಯ್ಕೆ ವಿಧಾನ – Selection process

NWKRTC Recruitment 2025 : ಈ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶಿಕ್ಷಣ ಅರ್ಹತೆ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತಾರೆ. ಅಭ್ಯರ್ಥಿಗಳನ್ನು ಒಟ್ಟು ಎರಡು ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯ ಪ್ರಕ್ರಿಯೆ ಕೆಳಗೆ ಲೇಖನದಲ್ಲಿ ನೀಡಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ (OMR Paper)

ಪತ್ರಿಕೆ 1 : ಈ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಗಣಿತ, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 300 ಅಂಕಗಳು ಹಾಗೂ 2 ಗಂಟೆ ಸಮಯದಲ್ಲಿ ನೀವು ಈ ಪತ್ರಿಕೆ ಮುಗಿಸಬೇಕು. 

ಪತ್ರಿಕೆ 2 : ಈ ಪ್ರಶ್ನೆ ಪತ್ರಿಕೆಯಲ್ಲಿ ನೀವು ಆಯ್ಕೆ ಮಾಡಿಕೊಂಡ ಹುದ್ದೆಯ ಸಂಬಂಧಿತ ವಿಷಯದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದು ಕೂಡ 300 ಅಂಕಗಳು ಹಾಗೂ ಎರಡು ಗಂಟೆ ಸಮಯ ನೀಡಲಾಗುತ್ತದೆ.

ಗಮನಿಸಿ : ಈ ಪತ್ರಿಕೆಯಲ್ಲಿ ನೀವು ಒಂದು ಉತ್ತರ ತಪ್ಪು ಮಾಡಿದರು ಒಂದಕ್ಕೆ ನಾಲ್ಕರಷ್ಟು ಅಂಕ ಕಡಿತಗೊಳಿಸಲಾಗುತ್ತದೆ. 

ನೇರ ನೇಮಕಾತಿ 

ಅಭ್ಯರ್ಥಿಗಳನ್ನು ಅಂತಿಮ ಆಯ್ಕೆ ಮಾಡಲು ಕೆಳಗಿನ ಅಂಶಗಳನ್ನು ಒಗ್ಗೂಡಿಸಿ ಆಯ್ಕೆ ಮಾಡಲಾಗುತ್ತದೆ. 

  • ಪ್ರಶ್ನೆ ಪತ್ರಿಕೆಯಲ್ಲಿ ಗಳಿಸಿದ ಅಂಕಗಳ ಶೇಕಡ 50 %
  • ಶಿಕ್ಷಣದಲ್ಲಿ ಪಡೆದ ಅಂಕಗಳ ಶೇಕಡ 50 %

 ಎರಡನೇ ಸುತ್ತಿನಲ್ಲಿ ನೀವು ಅಭ್ಯರ್ಥಿಗಳು ಮೊದಲನೇ ಪರೀಕ್ಷೆಯಲ್ಲಿ ತೆಗೆದ 50% ಅಂಕ ಹಾಗೂ ಅಭ್ಯರ್ಥಿಗಳು ಶಿಕ್ಷಣದಲ್ಲಿ ಪಡೆದ 50% ಅಂಗಗಳನ್ನು ಒಗ್ಗೂಡಿಸಿ ಅಭ್ಯಾಸಗಳನ್ನು ಆಯ್ಕೆ ಮಾಡುತ್ತಾರೆ.

Also Read :-    Labor Card Gift 2025 : ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಗಿಫ್ಟ್ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ 

ಅರ್ಜಿ ಸಲ್ಲಿಸುವ ವಿಧಾನ – How to apply 

NWKRTC Recruitment 2025 : ಈ ಹುದ್ದೆಗೆ ಅರ್ಜಿಗಳನ್ನು ಕೇವಲ ಆನ್ಲೈನ್ ಮುಖಾಂತರವೇ KEA ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಂಪೂರ್ಣ ಮಾದರಿ ಕೆಳಗೆ ಲೇಖನದಲ್ಲಿ ನೀಡಲಾಗಿದೆ.

  1. ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಇಲ್ಲಿ ನೀಡಿರುವ https://cetonline.karnataka.gov.in/kea/ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. 
  2. ವೆಬ್ಸೈಟ್ ಓಪನ್ ಆದ ನಂತರ “NWKRTC ದರ್ಜೆ-2 ಅಧಿಕಾರಿ ನೇಮಕಾತಿ 2025” ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.  
  3. ನೋಂದಣಿ ಮಾಡಿ : ನೀವೇನಾದರೂ ಹೊಸ ಬಳಕೆದಾರರಾದರೆ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿ ಲಾಗಿನ್ ಮಾಡಿಕೊಳ್ಳಿ. 
  4. ಲಾಗಿನ್ ಮಾಡಿ : ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿ ಲಾಗಿನ್ ಮಾಡಿಕೊಳ್ಳಿ. 
  5. ಅರ್ಜಿ ಭರ್ತಿ ಮಾಡಿ : ನಿಮ್ಮ ಮುಂದೆ ಒಂದು ಅರ್ಜಿ ಫಾರಂ ಓಪನ್ ಆಗುತ್ತದೆ ಅದರ ಮೇಲೆ ನಿಮ್ಮ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿಕೊಳ್ಳಿ. ಉದಾಹರಣೆಗೆ ನಿಮ್ಮ ಹೆಸರು, ನಿಮ್ಮ ವಿಳಾಸ, ನಿಮ್ಮ ಶೈಕ್ಷಣಿಕ ಅರ್ಹತೆ, ಇತ್ಯಾದಿ..
  6. ದಾಖಲೆಗಳನ್ನು ಅಪ್ಲೋಡ್ ಮಾಡಿ : ಅಲ್ಲಿ ನೀಡಿರುವ ಎಲ್ಲಾ ದಾಖಲೆಗಳನ್ನು ನೀವು ಸ್ಕ್ಯಾನ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು. ಉದಾಹರಣೆಗೆ  (JPEG) ಹಾಗೂ (PNG). ದಾಖಲೆಗಳ ಪಟ್ಟಿ ಕೆಳಗೆ ಲೇಖನದಲ್ಲಿ ನೀಡಲಾಗಿದೆ. 
  7. ಶುಲ್ಕ ಪಾವತಿಸಿ : ಅರ್ಜಿ ಫಾರಂ ಬರ್ತಿ ಮಾಡಿದ ನಂತರ ಆನ್ಲೈನ್ ಮುಖಾಂತರ ನಿಮ್ಮ ಅರ್ಜಿ ಶುಲ್ಕವನ್ನು ಪಾವತಿಸಿ. 
  8. ಅರ್ಜಿಯನ್ನು ಸಲ್ಲಿಸಿ : ನಿಮ್ಮ ಅರ್ಜಿ ಫಾರಂ ಮೇಲೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಿದ ನಂತರ ನಿಮ್ಮ ಶುಲ್ಕ ಸಲ್ಲಿಸಿದ ಪ್ರಿಂಟ್ ಔಟ್ ಹಾಗೂ ಅರ್ಜಿ ಸಲ್ಲಿಸಿದ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಒಂದು ವೇಳೆ ನಿಮಗೆ ಸ್ವತಹ ಅರ್ಜಿ ಸಲ್ಲಿಸಲು ಬಾರದಿದ್ದರೆ ದಯವಿಟ್ಟು ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ.

ಗಮನಿಸಿ : ನೀವು ಒಂದೊಂದು ಕಿತ್ತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ, ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಹಾಗೂ ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕು. 

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ?- Required documents for application

NWKRTC Recruitment 2025 : ಈ ಹುದ್ದೆಗೆ ಅರ್ಜಿ ಸಲ್ಲಿಸಲು  ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಕೇಳಲಾಗುತ್ತದೆ.

  • ಅಭ್ಯರ್ಥಿಯ ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ಶೈಕ್ಷಣಿಕ ಪ್ರಮಾಣ ಪತ್ರ 
  • ಜಾತಿ ಪರಮಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಅನುಭವ ಪ್ರಮಾಣ ಪತ್ರ ಅಗತ್ಯವಿದ್ದರೆ ಮಾತ್ರ. 
  • ನಿಮ್ಮ 4 ಪಾಸ್ಪೋರ್ಟ್ ಸೈಜ್ ಫೋಟೋ. 

ಅರ್ಜಿ ಸಲ್ಲಿಸಲು ಸಲಹೆಗಳು – Tips for applying 

NWKRTC Recruitment 2025 : ನೀವೇನಾದ್ರೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗೆ ನೀಡಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಅರ್ಜಿಯನ್ನು ಸಲ್ಲಿಸಿ. 

  • KEA ವೆಬ್ಸೈಟ್ನಲ್ಲಿ ಪ್ರಕಟವಾದ ಅತಿಸೀಚನೆಯಲ್ಲಿ ಪ್ರತಿ ಹುದ್ದೆಗೆ ಸಂಬಂಧಿಸಿದ ಪರೀಕ್ಷೆ ಸಿಲೆಬಸ್ ನೀಡಲಾಗಿದೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದು ನಿಮಗೆ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ 
  • ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ. 
  • ತಪ್ಪು ಉತ್ತರಗಳಿಗೆ ಅಂಕ ಕಡಿತವಾಗುತ್ತದೆ ಎಂಬುದನ್ನು ಮರೆಯಬೇಡಿ. ನಿಮ್ಮ ಒಂದು ತಪ್ಪು ಉತ್ತರಕ್ಕೆ ಒಂದಕ್ಕೆ ನಾಲ್ಕರಷ್ಟು ಅಂಕ ಕಡಿತಗೊಳಿಸಲಾಗುತ್ತದೆ. 
  • ದಾಖಲೆಗಳನ್ನು ಸಲ್ಲಿಸುವ ವೇಳೆ ನಿಮ್ಮ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಮುಖಾಂತರ ಸಲ್ಲಿಸಬೇಕು. ಡೈರೆಕ್ಟ್ ಫೋಟೋ ಕಾಫಿ ಮುಖಾಂತರ ಕಳಿಸಿದ್ದಾರೆ ನಿಮ್ಮ ಅರ್ಜಿ ರದ್ದಾಗುತ್ತದೆ. 
  • ಅರ್ಜಿಯನ್ನು ಡಿಸೆಂಬರ್ 10/ 2025 ಒಳಗೆ ಅರ್ಜಿಯನ್ನು ಸಲ್ಲಿಸಿ. ಒಂದು ವೇಳೆ ಕೊನೆಯ ದಿನಾಂಕವನ್ನು ನೀಡಿದರೆ ನಿಮ್ಮ ಅರ್ಜಿ ಪರಿಗಣಿಸುವುದಿಲ್ಲ.
  • ಈ ಹುದ್ದೆಯ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

Also Read :-    Canara Bank personal loan 2025 : ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!   

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ? – Last date for application

NWKRTC Recruitment 2025 : ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಡಿಸೆಂಬರ್ 2025 ರ ಒಳಗೆ ಮಾತ್ರ ಅವಕಾಶವನ್ನು ನೀಡಿದ್ದಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯದೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

NWKRTC Recruitment 2025 : NWKRTC ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಯಲ್ಲಿ ದರ್ಜೆ ಎರಡು ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಕನಸನ್ನು ನೀವು ಹೊಂದಿದ್ದರೆ ಈ ಹುದ್ದೆ ಕೇವಲ ನಿಮಗಾಗಿ. ಏಕೆಂದರೆ ಅದೆಷ್ಟೋ ಅಭ್ಯರ್ಥಿಗಳ ಕನಸಾಗಿರುತ್ತದೆ. ಈ ಹುದ್ದೆಯ ಮಾಸಿಕ ಸಂಬಳವೂ ₹ 42600 /- ರೂಪಾಯಿ ಮಾಚಿಕ ಸಂಬಳವಿರುತ್ತದೆ ಹಾಗೂ ಸರ್ಕಾರಿ ಉದ್ಯೋಗಕ್ಕೆ ಸಿಗುವ ಎಲ್ಲಾ ಸೌಲಭ್ಯವು ಕೂಡ ಈ ನೇಮಕಾತಿಯಲ್ಲಿ ನಿಮಗೆ ಲಭ್ಯವಿರುತ್ತದೆ. ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಡಿಸೆಂಬರ್ 2025 ರವರೆಗೆ ಮಾತ್ರ ಅವಕಾಶವನ್ನು ನೀಡುತ್ತಿದ್ದಾರೆ. ಅರ್ಜಿ ಪ್ರಕ್ರಿಯೆಯು ಕೇವಲ ಆನ್ಲೈನ್ ಮುಖಾಂತರವೇ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಮೇಲೆ ನೀಡಿರುವ ಎಲ್ಲಾ ಮಾಹಿತಿಯನ್ನು ಓದಿ ಅರ್ಜಿಯನ್ನು ಸುಲಭವಾಗಿ ತಾವೇ ಸಲ್ಲಿಸಬಹುದು. 

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment