---Advertisement---

Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ 1.50ಲಕ್ಷ ರೂಪಾಯಿ ನೆರವು? 

karnatakasuddi.com

By: Karnataka Suddi

On: Monday, October 27, 2025 2:55 PM

Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ 1.50ಲಕ್ಷ ರೂಪಾಯಿ ನೆರವು? 
Google News
Follow Us
---Advertisement---

Table of Contents

Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ಕನ್ಯ ವಿದ್ಯಾರ್ಥಿ ವೇತನ : 1.50 ಲಕ್ಷ ರೂಪಾಯಿ ನೆರವು ಪಡೆಯಲು ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

Kotak mahindra Kanya Scholarship 2025-26 : ಭಾರತದಲ್ಲಿ ಹೆಸರುವಾಸಿ ಆಗಿರುವ ಕೋಟಕ್ ಮಹಿಂದ್ರ ಗ್ರೂಪ್ ಕಂಪನಿಯು ರಾಷ್ಟ್ರದ  ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ವಾರ್ಷಿಕ ಒಂದುವರೆ ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದ್ದಾರೆ. ಇದರ ಉದ್ದೇಶವೇನೆಂದರೆ ಭಾರತದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿನಿಯರು ತಮ್ಮ ಮೂಲಸೌಕರ್ಯ ಕೊರತೆಯಿಂದಾಗಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬಾರದೆಂದು ಭಾರತದಲ್ಲಿಯೇ ಹೆಸರುವಾಸಿ ಆಗಿರುವ ಕೋಟಕ್ ಮಹಿಂದ್ರ ಗ್ರೂಪ್ ಕನ್ಯಾ ವಿದ್ಯಾರ್ಥಿವೇತನವನ್ನು ಪ್ರಾರಂಭಿಸುತ್ತಾರೆ. ಈ ಯೋಜನೆಯಡಿಯಲ್ಲಿ ಕೇವಲ ಭಾರತದ ಮಹಿಳಾ ವಿದ್ಯಾರ್ಥಿಗಳಾಗಿರಬೇಕು ಹಾಗೂ ಅವರು ಹಿಂದುಳಿದ ವರ್ಗಕ್ಕೆ ಸೇರಿರಬೇಕು. ಈ ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನವನ್ನು ಸಂಕ್ಷಿಪ್ತವಾಗಿ ಅನುಸರಿಸಿ.

ಈ ಲೇಖನದಲ್ಲಿ ಮಹೇಂದ್ರ ಕೋಟಕ್ ಗ್ರೂಪ್ ಕನ್ಯಾ ವಿದ್ಯಾರ್ಥಿವೇತನದ ಪ್ರಮುಖ ಮುಖ್ಯ ವಿಷಯಗಳು ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸರಿಯಾಗಿ ವಿವರಿಸಲಾಗಿದೆ ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿನಿಯರು  ಈ ಲೇಖನವನ್ನು ಸರಿಯಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿವೇತನದ ಉದ್ದೇಶವೇನು? 

ಕೋಟಕ್ ಮಹೀಂದ್ರಾ ಗ್ರೂಪ್ ಕನ್ಯಾ ವಿದ್ಯಾರ್ಥಿವೇತನವು ಒಂದು (CSR) ಅಂದರೆ   ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಯಾಗಿದೆ. ಮತ್ತು ಕೋತಗ್ ಶಿಕ್ಷಣ ಪ್ರತಿಷ್ಠಾನ ಮತ್ತು ಬಡ್ಡಿ4ಸ್ಟಡಿ (Buddy4Study)  ಸಂಸ್ಥೆಯು ಸಂಯೋಗದಿಂದ ನಡೆಸುತ್ತದೆ. ಈ ಯೋಜನೆಯು ಬಹು ಮುಖ್ಯ ಉದ್ದೇಶವೇನೆಂದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳಾ ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ನೀಡಲು, ಮತ್ತು ದೇಶದ ಹಿಂದುಳಿದ ಹೆಣ್ಣು ಮಕ್ಕಳ ಆರ್ಥಿಕ ಸ್ಥಿತಿಯನ್ನು ಉನ್ನತಗೊಳಿಸುವುದು ಮತ್ತು ಬಹುಮುಖ್ಯವಾಗಿ ದೇಶದ ಅಭಿವೃದ್ಧಿಗೆ ಈ ವಿದ್ಯಾರ್ಥಿ ವೇತನ ಯೋಜನೆಯು ಬಹಳ ಮುಖ್ಯವಾಗಿದೆ. ವರ್ಷಕ್ಕೆ 1.5 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಲು ಕೋಟಕ್ ಮಹೀಂದ್ರಾ ಗ್ರೂಪ್ ಮುಂದಾಗಿದ್ದಾರೆ. ವಿದ್ಯಾರ್ಥಿನಿಯರು ಇಂಜಿನಿಯರಿಂಗ್, ವೈದ್ಯಕೀಯ, ನ್ಯಾಯಶಾಸ್ತ್ರ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಕನಸನ್ನು ನನಸು ಮಾಡಲು ಈ ಯೋಜನೆ ಸಹಾಯ ಮಾಡುತ್ತದೆ. ವಿದ್ಯಾರ್ಥಿವೇತನದ ಪ್ರಮುಖ ವಿಷಯ ಕೆಳಗ ನೀಡಲಾಗಿದೆ. 

Kotak mahindra Kanya Scholarship More Information  : ಕೋಟಕ್ ಮಹೀಂದ್ರಾ ಗ್ರೂಪ್ ವಿದ್ಯಾರ್ಥಿವೇತನದ ಮುಖ್ಯ ವಿವರಗಳು 

ಕೋಟಕ್ ಮಹೀಂದ್ರಾ ಗ್ರೂಪ್ ಕನ್ಯ ವಿದ್ಯಾರ್ಥಿವೇತನವು ವಿದ್ಯಾರ್ಥಿನಿಯರಿಗೆ ವರ್ಷಕ್ಕೆ ಒಂದುವರೆ ಲಕ್ಷ ರೂಪಾಯಿ ವಿದ್ಯಾರ್ಥಿವೇತನ ನೀಡುವುದರ ಮೂಲಕ ಹಿಂದುಳಿದ ಬಡ ವಿದ್ಯಾರ್ಥಿನಿಯರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2025 ರವರೆಗೆ ಮಾತ್ರ ಕಾಲಾವಕಾಶ ನೀಡುತ್ತಿದ್ದಾರೆ. ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿನಿಯರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

Kotak mahindra Kanya Scholarship Eligibility Criteria – ಕೋಟಕ್ ಮಹಿಂದ್ರಾ ಗ್ರೂಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ.

Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್  ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳು ವಿದ್ಯಾರ್ಥಿನಿಯರು ಹೊಂದಿರಬೇಕು.ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿನಿಯರು ಭಾರತದ ಭಯಂ ನಿವಾಸಿ ಆಗಿರಬೇಕು. ಮತ್ತು ಬಹುಮುಖ್ಯವಾಗಿ ಈ ವಿದ್ಯಾರ್ಥಿ ವೇತನ ಯೋಜನೆಯು ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದೆ.

ಶೈಕ್ಷಣಿಕ ಅರ್ಹತೆ: ವಿದ್ಯಾರ್ಥಿನಿಯರು 12ನೇ ತರಗತಿಯಲ್ಲಿ ಕನಿಷ್ಠ 75 ಪರ್ಸೆಂಟ್ ಅಂಕ ಗಳಿಸಿರಬೇಕು. ಹಾಗೂ ಯಾವುದೇ ಮಾನ್ಯತೆ  ಪಡೆದ ಶಿಕ್ಷಣ ಮಂಡಳಿಯಿಂದ 12ನೇ ತರಗತಿ ಪೂರೈಸಿರಬೇಕು. 

ಕುಟುಂಬದ ಆದಾಯ : ಅರ್ಜಿದಾರರ ಕುಟುಂಬದ ವಾರ್ಷಿಕ ಒಟ್ಟು ಆದಾಯ 6 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ಅರ್ಜಿದಾರರು 2025 26 ಶೈಕ್ಷಣಿಕ ವರ್ಷದಲ್ಲಿ ಕೆಳಗೆ ನೀಡಿರುವ ವೃತ್ತಿಪರ ಪದವಿ ಕೋರ್ಸ್ ಅನ್ನು ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು.

  • ಎಂಜಿನಿಯರಿಂಗ್ (BE/B.Tech)
  • ವೈದ್ಯಕೀಯ (MBBS)
  • ಇಂಟಿಗ್ರೇಟೆಡ್ ಲಾ (ILB – 5 ವರ್ಷಗಳು)
  • ಇಂಟಿಗ್ರೇಟೆಡ್ ಬಿಎಸ್-ಎಮ್ಎಸ್ / ಬಿಎಸ್-ರಿಸರ್ಚ್
  • IISc (ಬೆಂಗಳೂರು), IISER ಮುಂತಾದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಕೋರ್ಸ್ಗಳು.
  • ಇತರೆ ವೃತ್ತಿಪರ ಕೋರ್ಸ್ಗಳು (ವಿನ್ಯಾಸ, ವಾಸ್ತುಶಿಲ್ಪ, ಇತ್ಯಾದಿ).

ಪ್ರವೇಶ ಪಡೆದ ಕಾಲೇಜು/ವಿಶ್ವವಿದ್ಯಾಲಯವು NIRF/NAAC ಮುಂತಾದ ಸಂಸ್ಥೆಗಳಿಂದ ಮಾನ್ಯತೆ ಪಡೆದಿರಬೇಕು.

Kotak mahindra Kanya Scholarship Required Documents – ಅರ್ಜಿ ಸಲ್ಲಿಸಲು ಅಗತ್ಯವಾಗಿ ಬೇಕಾಗುವ ದಾಖಲೆಗಳು 

ವಿದ್ಯಾರ್ಥಿನಿಯರು ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಕ್ಯಾನ್ ಕಾಫಿ ಮಾಡಿ ಅಪ್ಲೋಡ್ ಮಾಡಿಕೊಳ್ಳಬೇಕು . ಉದಾಹರಣೆ :- PDF/ JPEG 

  • ವಿದ್ಯಾರ್ಥಿನಿಯ ಆಧಾರ್ ಕಾರ್ಡ್ 
  • 12ನೇ ತರಗತಿಯ ಅಂಕಪಟ್ಟಿ 
  • ಕುಟುಂಬದ ಆದಾಯ ಪ್ರಮಾಣ ಪತ್ರ 
  • ವಿದ್ಯಾರ್ಥಿನಿಯ ಜಾತಿ ಪ್ರಮಾಣ ಪತ್ರ 
  • ಕಾಲೇಜಿನ ಪ್ರವೇಶ ಪತ್ರ 
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ 
  • ಇತ್ತೀಚಿನ ನಾಲ್ಕು ಪಾಸ್ಪೋರ್ಟ್ ಸೈಜ್ ಫೋಟೋ 
  • ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ. 

ಇದಿಷ್ಟು ದಾಖಲೆಗಳನ್ನು ಅಗತ್ಯವಾಗಿ ಅರ್ಜಿ ಸಲ್ಲಿಸುವಾಗ ಕೇಳಲಾಗುತ್ತದೆ.

Kotak mahindra Kanya Scholarship Application Processವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? 

ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿನಿಯರು ಕೆಳಗಿನ ಲೇಖನವನ್ನು ಸರಿಯಾಗಿ ಅನುಸರಿಸಿ. ಹಾಗೂ ಅರ್ಜಿ ಪ್ರಕ್ರಿಯೆಯು ಕೇವಲ ಆನ್ಲೈನ್ ಮಾತ್ರ ಇರುತ್ತದೆ. ಯಾವುದು ರೀತಿಯ ಆಫ್ಲೈನ್ ಅರ್ಜಿ ಇರುವುದಿಲ್ಲ. ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಸ್ವತಃ ನೀವೇ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ನೀವೇ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಬಹಳ ಸುಲಭವಾಗಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ (buddy4study.com/application/kotak-scholarship) ಅಥವಾ ನಿಮ್ಮ ಗೂಗಲ್ ಗೆ ಹೋಗಿ ಕೋತಕ್ ಮಹಿಂದ್ರ ಸ್ಕಾಲರ್ಶಿಪ್ 2025-26ಎಂದು ಸರ್ಚ್ ಮಾಡಿಕೊಳ್ಳಿ.

ನೊಂದಾಯಿಸಿಕೊಳ್ಳಿ: ವೆಬ್ಸೈಟ್ ಓಪನ್ ಆದ ನಂತರ Apply Now ಇದರ ಮೇಲೆ ಕ್ಲಿಕ್ ಮಾಡಿ. ನಂತರ create an account ಅಥವಾ register ಆಯ್ಕೆಯನ್ನು ಆರಿಸಿಕೊಳ್ಳಿ. ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುವುದು ಅದನ್ನು ಓಟಿಪಿ ಬಳಸಿ ರಿಜಿಸ್ಟರ್ ಮಾಡಿಕೊಳ್ಳಿ.

ಲಾಗಿನ್ ಮಾಡಿಕೊಳ್ಳಿ ಮತ್ತು ಅರ್ಜಿ ಫಾರಂ ಸಲ್ಲಿಸಿ: ಲಾಗಿನ್ ಮಾಡಿದ ನಂತರ ಅಜಿ ಫಾರಂ ಓಪನ್ ಆಗುವುದು. ಅದರಲ್ಲಿ ನೀವು ನಿಮ್ಮ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ ಉದಾಹರಣೆಗೆ ನಿಮ್ಮ ಹೆಸರು, ತಂದೆ ತಾಯಿ ಹೆಸರು, ವಿಳಾಸ, ನಿಮ್ಮ ಶೈಕ್ಷಣಿಕ ಮಾಹಿತಿ, ಬ್ಯಾಂಕ್ ಖಾತೆ ವಿವರ ಇತ್ಯಾದಿ..

ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ: ನಿಮ್ಮ ಅಗತ್ಯ ವಿವರಗಳನ್ನು ಸಲ್ಲಿಸಿದ ನಂತರ ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಮೂಲಕ ಅಪ್ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳ ಪಟ್ಟಿ ಮೇಲೆಯೇ ನೀಡಲಾಗಿದೆ.

ಅರ್ಜಿ ಸಲ್ಲಿಸಿ : ನಿಮ್ಮ ಎಲ್ಲಾ  ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ ನಂತರ ಅರ್ಜಿ ಫಾರಂ ಮೇಲೆ Submit ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಿಮ್ಮ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಯಶಸ್ವಿಯಾಗುವುದು. ಹಾಗೂ ನಿಮ್ಮ ಅರ್ಜಿ ಸಲ್ಲಿಕೆ ಆದ ನಂತರ ನೀವು ಮುಂಚೆ ನೀಡಿರುವ ಇಮೇಲ್ ಐಡಿಗೆ ಅರ್ಜಿ ಕನ್ಫರ್ಮೇಶನ್ ಬರುವುದು. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – Last Date for Scholarship Application 

ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ  ಶುರುವಾಗಿದೆ. ಹಾಗೂ ಕೊನೆಯ ದಿನಾಂಕ 31 ಅಕ್ಟೋಬರ್ 2025 ಮಾತ್ರ ಅವಕಾಶವಿದೆ ಅರ್ಜಿ ಸಲ್ಲಿಸುವಂತಹ ಮಹಿಳಾ ವಿದ್ಯಾರ್ಥಿನಿಯರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

ವಿದ್ಯಾರ್ಥಿನಿಯರ ಗಮನಕ್ಕೆ : ನಿಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬರುವುದಿಲ್ಲವೆಂದರೆ ದಯವಿಟ್ಟು ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಿ. 

ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಪರ್ಕ ಮಾಹಿತಿ – Kotak mahindra Kanya Scholarship Contact Information

ನಿಮಗೆ ಯಾವುದೇ ರೀತಿಯ ಪ್ರಶ್ನೆ ಅಥವಾ ತಾಂತ್ರಿಕ ಸಮಸ್ಯೆಗಳಿದ್ದರೆ ಕೆಳಗಿ ನೀಡಿರುವ ಸಂಪರ್ಕ ವಿವರಗಳನ್ನು ನೀಡಲಾಗಿದೆ ಅವರನ್ನು ಸಂಪರ್ಕಿಸಬಹುದು. 

Kotak mahindra Kanya Scholarship : ಕೋಟಕ್ ಮಹೀಂದ್ರಾ ಗ್ರೂಪ್ ಈ ವಿದ್ಯಾರ್ಥಿವೇತನವು ಕೇವಲ ಹಣಕಾಸಿನ ಸಹಾಯ ಮಾಡುವ ಯೋಜನೆ ಅಲ್ಲ ಭಾರತದ ಅನೇಕ ಹಿಂದುಳಿದ ವರ್ಗದ ಮಹಿಳಾ ವಿದ್ಯಾರ್ಥಿನಿಯರ ಕನಸನ್ನು ನನಸು ಮಾಡುವ ಸಾಧನವಾಗಿದೆ. ಏಕೆಂದರೆ ವರ್ಷಕ್ಕೆ ಒಂದುವರೆ ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನೀಡಲು ಕೋಟಕ್ ಮಹೀಂದ್ರಾ ಗ್ರೂಪ್ ಅವರು ಮುಂದಾಗಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿನಿಯು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31 ರವರೆಗೆ ಮಾತ್ರ ವಿಸ್ತರಿಸಲಾಗಿದೆ. ಒಂದು ವೇಳೆ ಅರ್ಜಿ ಸಲ್ಲಿಸಲು ತಡವಾದರೆ . ಈ ಅವಕಾಶವನ್ನು ಕವಿತಪ್ಪಿ ಹೋಗುತ್ತದೆ. ದಯವಿಟ್ಟು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಬೇಗ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸುವ ಲಿಂಕನ್ನು ಮೇಲೆ ನೀಡಲಾಗಿದೆ.

ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆ, ಉದ್ಯೋಗದ ಮಾಹಿತಿ, ಕೃಷಿ ಸುದ್ದಿ,  ಹಾಗೂ ವಿದ್ಯಾರ್ಥಿ ವೇತನ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡುತ್ತಾ ಇರಿ. ಇದರಲ್ಲಿ ನಾವು ನಿಖರವಾದ ಮಾಹಿತಿಯೊಂದಿಗೆ ನಿಮ್ಮ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಎಂದಿಗೂ ಸಿದ್ದರಾಗಿರುತ್ತೇವೆ. 

FAQ: ಕೋಟಕ್ ಮಹಿಂದ್ರ ವಿದ್ಯಾರ್ಥಿ ವೇತನದ ಬಗ್ಗೆ ಸಾಮಾನ್ಯವಾಗಿ ಕೇಳುವ ಹೆಚ್ಚಿನ ಪ್ರಶ್ನೆಗಳು?

  1. ವಿದ್ಯಾರ್ಥಿನಿಯು 12ನೇ ತರಗತಿಯಲ್ಲಿ 74% ಅಂಕ ಪಡೆದರೆ. ಅವಳು ಅರ್ಜಿ ಸಲ್ಲಿಸಲು ಅರ್ಹಳೆ ?
    1. ಇಲ್ಲ ಈ ವಿದ್ಯಾರ್ಥಿವೇತನಕ್ಕೆ ಕನಿಷ್ಠ 75% ಅಂಕ ಖಂಡಿತವಾಗಿ ತೆಗೆದಿರಬೇಕು. 
  1. ನನ್ನ ಕುಟುಂಬದ ವಾರ್ಷಿಕ ಆದಾಯವು 6, ಲಕ್ಷ 10,000 ಸಾವಿರ ಇದೆ. ನಾನು ಯೋಜನೆಗೆ ಅರ್ಜಿ ಸಲ್ಲಿಸಬಹುದಾ ?
    1. ಇಲ್ಲ ಕುಟುಂಬದ ಒಟ್ಟು ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು.
  1. ಈ ಕೋಟಕ್ ಮಹಿಂದ್ರಾ ವಿದ್ಯಾರ್ಥಿವೇತನದಿಂದ ವಿದ್ಯಾರ್ಥಿವೇತನದಿಂದ ಎಷ್ಟು ಹಣ ಬರುತ್ತದೆ ?
    1. ಕೋಟಕ್ ಮಹಿಂದ್ರಾ ವಿದ್ಯಾರ್ಥಿವೇತನದಿಂದ ಪ್ರತಿ ವಿದ್ಯಾರ್ಥಿನಿಗೂ ವರ್ಷಕ್ಕೆ 1.50 ಲಕ್ಷ ರೂಪಾಯಿ ಬರುತ್ತದೆ.
  1. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವುದಾದರೂ ಶುಲ್ಕವಿದೆಯೇ ?
    1. ಇಲ್ಲ ಸ್ನೇಹಿತರೆ ಈ ವಿದ್ಯಾರ್ಥಿವೇತನಕ್ಕೆ ಯಾವುದೇ ರೀತಿಯ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ. 
  1. ಡಿಪ್ಲೋಮೋ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಈ ಕೋಟಕ್ ಮಹೀಂದ್ರಾ ವಿದ್ಯಾರ್ಥಿವೇತನ ಕೆ ಅರ್ಜಿ ಸಲ್ಲಿಸಲು ಬರುವುದೇ ?
    1. ಇಲ್ಲ ಈ ಯೋಜನೆಯಲ್ಲಿ ಮೇಲೆ ನೀಡಿರುವ ವೃತ್ತಿಪರ ಪದವಿ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮಾತ್ರ ಈ ವಿದ್ಯಾರ್ಥಿ ವೇತನವು ಬರುವುದು. 
  1. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯ ಪ್ರಕ್ರಿಯೆ ಹೇಗಿರುತ್ತದೆ?
    1. ಸಾಮಾನ್ಯವಾಗಿ ಆಯ್ಕೆ ಪ್ರಕ್ರಿಯೆಯು ದಾಖಲೆ ಪರಿಚಲನೆ, ಹಾಗೂ ಅವರ ಅಂಕದ. ಯೋಗ್ಯತೆ ಆಧಾರದ ಮೇಲೆ ನಡೆಸುತ್ತಾರೆ. 
  1. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು?
    1. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31 2025ರ ಹೊರಗೆ ಮಾತ್ರ ಅವಕಾಶವನ್ನು ನೀಡುತ್ತಿದ್ದಾರೆ. ಒಂದು ವೇಳೆ ಅರ್ಜಿ ಸಲ್ಲಿಸಿಲ್ಲ ಎಂದರೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 
  1. ಹೆಚ್ಚಿನ ಮಾಹಿತಿಗಾಗಿ ಈ ವಿದ್ಯಾರ್ಥಿ ವೇತನದ ಹೆಲ್ಪ್ಲೈನ್ ಸಂಖ್ಯೆ ದೊರಕುವುದೇ ?
    1. ಹೌದು ಸ್ನೇಹಿತರೆ, ನೀವು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು ಅಧಿಕೃತ ಹೆಲ್ಪ್ಲೈನ್ ಸಂಖ್ಯೆ 011-430-92248 (Ext: 262) ಅಥವಾ ಇ-ಮೇಲ್ kotakscholarship@buddy4study.com ಮೂಲಕ ಸಂಪರ್ಕಿಸಬಹುದು.
  1. ಈ ವಿದ್ಯಾರ್ಥಿ ವೇತನಕ್ಕೆ ಬೇಕಾಗುವ ಅಗತ್ಯ ದಾಖಲೆಗಳೇನು ?
    1. ವಿದ್ಯಾರ್ಥಿನಿಯ ಆಧಾರ್ ಕಾರ್ಡ್, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, 4 ಪಾಸ್ಪೋರ್ಟ್ ಸೈಜ್ ಫೋಟೋ, ಶೈಕ್ಷಣಿಕ ವಿವರ ಇತ್ಯಾದಿ. ಮೇಲೆ ಮುಂಚೇನೆ ನೀಡಲಾಗಿದೆ. 

karnataka Suddi

For Feedback - feedback@example.com

Join WhatsApp

Join Now

Join Telegram

Join Now

Leave a Comment