Karnataka Free Laptop scheme : ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡಲು ಮುಂದಾಗಿದ್ದಾರೆ. ಲ್ಯಾಪ್‌ಟಾಪ್ ಬೇಕಾದರೆ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.
Karnataka Free Laptop scheme 2025 : ಡಿಜಿಟಲ್ ಯುಗದಲ್ಲಿ ಉನ್ನತ ಶಿಕ್ಷಣ ಪಡೆಯುವ ಪ್ರತಿ ವಿದ್ಯಾರ್ಥಿಗಳಿಗೆ ಉತ್ತಮವಾದ ಲ್ಯಾಪ್‌ಟಾಪ್ ಬೇಕಾಗುತ್ತದೆ. ಮಕ್ಕಳಿಗೆ ಆನ್ಲೈನ್ ತರಗತಿಗಳು, ರಿಸರ್ಚ್ ವರ್ಕ್ ಮತ್ತು ಪ್ರಾಜೆಕ್ಟ್ ವರ್ಕಿಂಗ್ ಇಂತಹ ಕೆಲಸ ಮಾಡಲು ಲ್ಯಾಪ್‌ಟಾಪ್ ಬಹು ಮುಖ್ಯಪಾತ್ರ ವಹಿಸುತ್ತದೆ. ಇದನ್ನು ಅರಿತುಕೊಂಡ ಕರ್ನಾಟಕ ರಾಜ್ಯ ಸರ್ಕಾರವು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಲ್ಯಾಪ್‌ಟಾಪ್ ನೀಡಲು ಮುಂದಾಗಿದ್ದಾರೆ. ಲ್ಯಾಪ್‌ಟಾಪ್ ಗೆ ಅರ್ಜಿ ಸಲ್ಲಿಸಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಏಕೆಂದರೆ ಇದರಲ್ಲಿ ಅರ್ಜಿ ಸಲ್ಲಿಸಲು ಅರ್ಹತೆ, ಕೊನೆಯ ದಿನಾಂಕ, ಮತ್ತು ಯಾರು ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
Also Read :- Rajiv Gandhi Housing Scheme : ಮನೆ ಕಟ್ಟಲು ₹1.75 ಲಕ್ಷ–₹2.5 ಲಕ್ಷದ ವರೆಗೂ ಸಹಾಯಧನ ! .
ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಹತೆಗಳು ?
Karnataka Free Laptop scheme : ಉಚಿತ ಲ್ಯಾಪ್‌ಟಾಪ್ ಪಡೆಯಲು ವಿದ್ಯಾರ್ಥಿಗಳು ಕೆಳಗೆ ನೀಡಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು.
ಅರ್ಜಿದಾರರ ತಂದೆ ಅಥವಾ ತಾಯಿ ಪರಿಶಿಷ್ಟ ಜಾತಿಗೆ ಸೇರಿರಬೇಕು ಅಥವಾ ತಂದೆ ತಾಯಿಯು ಪೌರಕಾರ್ಮಿಕರು ಆಗಿರಬೇಕು.
ವಿದ್ಯಾರ್ಥಿಗಳು ಈ ಕೆಳಗಿನ ಪಟ್ಟಿಯಲ್ಲಿ ನೀಡಿರುವ ಯಾವುದೇ ಒಂದರಲ್ಲಿ ಶಿಕ್ಷಣ ಕೋರ್ಸ್ ವ್ಯಾಸಾಂಗ ಮಾಡುತ್ತಿರಬೇಕು
- ಸ್ನಾತಕ ಪದವಿ ಕೋರ್ಸ್‌ಗಳು : B.Com, B.Sc, BBM, B.A, B.E/B.Tech, MBBS/BDS, B.Pharma, ಇತರೆ.
- ಸ್ನಾತಕೋತ್ತರ ಪದವಿ ಕೋರ್ಸ್‌ಗಳು : M.Com, M.Sc, MA, M.Tech, MBA, MCA, MSW, ಇತರೆ..
- ಇತರೆ ಡಿಪ್ಲೋಮಾ ಅಥವಾ ವೃತ್ತಿಪರ ಪದವಿ ಕೋರ್ಸ್ ಗಳಿಗೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 6 2025ರ ವರೆಗೆ ಮಾತ್ರ ಅವಕಾಶವನ್ನು ನೀಡಿದ್ದಾರೆ. ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಕೊನೆ ದಿನಾಂಕದವರೆಗೂ ಕಾಯದೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸುವ ವಿಧಾನ ?
ಈ ಯೋಜನೆಗೆ ಆಫ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ನೀಡಲಾಗಿದೆ ಅದನ್ನು ಅನುಸರಿಸಿ.
- ಅರ್ಜಿ ಪತ್ರವನ್ನು ನೀವೇ ಸ್ವತಹ ಬರ್ತಿ ಮಾಡಿ. ಅರ್ಜಿಯಲ್ಲಿ ನಿಮ್ಮ ಅಗತ್ಯ ವಿವರಗಳನ್ನು ಬರೆಯಿರಿ. ಉದಾಹರಣೆಗೆ :- ನಿಮ್ಮ ಹೆಸರು, ನಿಮ್ಮ ವಿಳಾಸ, ನಿಮ್ಮ ತಂದೆ ತಾಯಿಯ ಕೆಲಸ, ಇತ್ಯಾದಿ.
- ನಂತರ ದಾಖಲೆಗಳನ್ನು ನಿಮ್ಮ ಅರ್ಜಿಯೊಂದಿಗೆ ಸೇರಿಸಿ. ಅಗತ್ಯ ದಾಖಲೆಗಳ ಪಟ್ಟಿ ಕೆಲಗೆ ಲೇಖನದಲ್ಲಿ ನೀಡಲಾಗಿದೆ.
- ಅರ್ಜಿ ಭರ್ತಿ ಮತ್ತು ದಾಖಲೆಗಳನ್ನು ಸೇರಿಸಿ. ಸಂಪೂರ್ಣಗೊಂಡ ನಂತರ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಮುಖಾಂತರ ನಿಮ್ಮ ಅರ್ಜಿಯನ್ನು ಕಳುಹಿಸಿ.
ಅರ್ಜಿ ಸಲ್ಲಿಸುವ ವಿಳಾಸ
- ಜಿಲ್ಲಾ ವ್ಯವಸ್ಥಾಪಕರು,
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ,
- ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ,
- ನಂ. SA1, ಜಿಲ್ಲಾಡಳಿತ ಭವನ,
- ಚಿಕ್ಕಬಳ್ಳಾಪುರ – 562101.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ?
ಅರ್ಜಿ ಸಲ್ಲಿಸುವಾಗ ತಪ್ಪದೇ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಜೆರಾಕ್ಸ್ ಪ್ರತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು.
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ತಂದೆ ತಾಯಿಯ ಆಧಾರ ಕಾರ್ಡ್
- ವಿದ್ಯಾರ್ಥಿಯ ನಾಲ್ಕು ಪಾಸ್ಪೋರ್ಟ್ ಸೈಜ್ ಫೋಟೋ
- ತಂದೆ/ತಾಯಿಯ ಸಫಾಯಿ ಕರ್ಮಚಾರಿ ಗುರುತಿನ ಚೀಟಿ (Safai Karmachari ID Card) ಪ್ರತಿ.
- ಪೋಷಕರು ಕನಿಷ್ಠ 5 ವರ್ಷಗಳ ಸೇವೆ ಪೂರೈಸಿರುವುದರ ಪ್ರಮಾಣಪತ್ರ (Service Certificate) ಸಂಬಂಧಿತ ಇಲಾಖೆಯಿಂದ.
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ ಪತ್ರ
- ಕಾಲೇಜಿನ ಶೈಕ್ಷಣಿಕ ಪುರಾವೆ ಮತ್ತು ಫೀಸ್ ರಶೀದಿ
- ಇತ್ತೀಚಿನ ಶೈಕ್ಷಣಿಕ ಅಂಕಪಟ್ಟಿ ಅಥವಾ ಮಾರ್ಕ್ಸ್ ಕಾರ್ಡ್
- ಕಾಲೇಜಿನ ಐಡಿ ಕಾರ್ಡ್ ಪ್ರತಿ
- ಅರ್ಜಿ ಸಲ್ಲಿಸುವಾಗ ಇವೆಲ್ಲ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು.
ಸಂಪರ್ಕ ಮಾಹಿತಿ ಮತ್ತು ಸಹಾಯ
Karnataka Free Laptop scheme : ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಪ್ರಶ್ನೆ ಅಥವಾ ಅರ್ಜಿ ಸಲ್ಲಿಸಲು ಗೊತ್ತಾಗಲಿಲ್ಲ ಎಂದರೆ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಭೇಟಿ ನೀಡುವುದರ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
- ದೂರವಾಣಿ ಸಂಖ್ಯೆ : 08156-277026 ( 10 Am to 4 30PM ಕಚೇರಿ ಸಮಯದಲ್ಲಿ ಮಾತ್ರ)
- ಇ-ಮೇಲ್ ವಿಳಾಸ : dm_chikkaballapur8@yahoo.com
Also Read :- NWKRTC Recruitment 2025 : ಕೇಂದ್ರ ಸಾರಿಗೆ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Karnataka Free Laptop scheme : ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡಲು ಮುಂದಾಗಿದ್ದಾರೆ. ಉಚಿತ ಲ್ಯಾಪ್‌ಟಾಪ್ ಬೇಕಾದರೆ ಆದಷ್ಟು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಯೋಜನೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 6 /2025 ರವರೆಗೆ ಮಾತ್ರ ಅವಕಾಶವಿದೆ. ಅರ್ಜಿ ಸಲ್ಲಿಸುವಾಗ ಯಾವುದಾದರೂ ಸಮಸ್ಯೆ ಅಥವಾ ಪ್ರಶ್ನೆ ಎದುರಾದರೆ ಮೇಲೆ ನೀಡಿರುವ ಸಹಾಯ ಸಂಪರ್ಕ ದೂರವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ.

















