Chief Minister Raitha Vidya Nidhi ಯೋಜನೆ ರೈತರ ಮಕ್ಕಳಿಗೆ ₹ 11,000 ವರೆಗೆ ಸ್ಕಾಲರ್ಶಿಪ್ ಸೌಲಭ್ಯ.

karnatakasuddi.com

By: Karnataka Suddi

On: Monday, December 1, 2025 1:41 PM

Chief Minister Raitha Vidya Nidhi ಯೋಜನೆ ರೈತರ ಮಕ್ಕಳಿಗೆ ₹ 11,000 ವರೆಗೆ ಸ್ಕಾಲರ್ಶಿಪ್ ಸೌಲಭ್ಯ.
| Follow Us |

Chief Minister Raitha Vidya Nidhi : ರೈತರ ಮಕ್ಕಳಿಗೆ ₹11,000 ರವರೆಗೆ ಸ್ಕಾಲರ್‌ಶಿಪ್. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Chief Minister Raitha Vidya Nidhi : ಕರ್ನಾಟಕ ರಾಜ್ಯದ ರೈತರಿಗೆ ಇಂದು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದಾರೆ. ರೈತರ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ರೈತರ ಮಕ್ಕಳಿಗೆ ಸುಮಾರು ₹11,000 ರೂಪಾಯಿ ಸ್ಕಾಲರ್ಶಿಪ್ ನೀಡಲು ಮುಂದಾಗಿದ್ದಾರೆ. (CM Raita Vidyanidhi )ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮುಖ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. 

Also Read :- Karnataka Free Laptop scheme : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಯಾರಿಗೆ ಸ್ಕಾಲರ್ಶಿಪ್ ಸಿಗಲಿದೆ ?

8ನೇ ತರಗತಿಯಿಂದ ಪದವಿ ಮತ್ತು ಸ್ನಾತಕೋತರ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಯೋಜನೆ ಬರುವುದು ಮತ್ತು ವಿದ್ಯಾರ್ಥಿಗಳು ತಂದೆ ಅಥವಾ ತಾಯಿ ರೈತರು ಆಗಿರಬೇಕು. ಈ ಸ್ಕಾಲರ್ಶಿಪ್ ಮತ್ತು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ಜಮವಾಗುತ್ತದೆ. ಅರ್ಜಿ ಸಲ್ಲಿಸುವವರು ಒಂದು ವೇಳೆ ಹುಡುಗಿಯರಾಗಿದ್ದರೆ ಅವರಿಗೆ ಹೆಚ್ಚಿನ ಮೊತ್ತದ ಸಹಾಯಧನ ದೊರೆಯುತ್ತದೆ. ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ ಮುಖಾಂತರವೇ ಇರುತ್ತದೆ.

ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಎಷ್ಟು ಬರುತ್ತದೆ ?

ವಿದ್ಯಾರ್ಥಿಯು ಓದುತ್ತಿರುವ ತರಗತಿ ಮತ್ತು ಲಿಂಗದ ಆಧಾರದ ಮೇಲೆ ಸ್ಕಾಲರ್ಶಿಪ್ ಸಹಾಯಧನದ ಮೊತ್ತವು ನಿರ್ಧಾರವಾಗುತ್ತದೆ. 

ತರಗತಿ/ವಿದ್ಯಾಸಂಕೀರ್ಣಹುಡುಗರಿಗೆ (ವಾರ್ಷಿಕ)ಹುಡುಗಿಯರಿಗೆ (ವಾರ್ಷಿಕ)
8ನೇ ರಿಂದ 10ನೇ ತರಗತಿ (ಹೈಸ್ಕೂಲ್)₹2,000₹2,500
ಪಿಯುಸಿ / ಐಟಿಐ / ಡಿಪ್ಲೊಮಾ₹2,500₹3,000
ಪದವಿ (ಬಿ.ಎ., ಬಿ.ಕಾಮ್., ಬಿ.ಎಸ್ಸಿ.)₹5,000₹5,500
ವೃತ್ತಿಪರ ಕೋರ್ಸ್ (ಎಂಜಿನಿಯರಿಂಗ್/ವೈದ್ಯಕೀಯ/ಸ್ನಾತಕೋತ್ತರ)₹10,000₹11,000

ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ?

Chief Minister Raitha Vidya Nidhi : ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಅರ್ಹತೆಗಳನ್ನು ವಿದ್ಯಾರ್ಥಿಗಳು ಪೂರೈಸಬೇಕು. 

  • ವಿದ್ಯಾರ್ಥಿಯ ತಂದೆ ಅಥವಾ ತಾಯಿ ಹೆಸರಿನಲ್ಲಿ ತಮ್ಮ ಸ್ವಂತ ಕೃಷಿ ಜಮೀನು ಇರಬೇಕು ಅದು ಪಹಣಿ ದಾಖಲೆ ಆಗಿರಬೇಕು. ರೈತ ಕಾರ್ಮಿಕರ ಮಕ್ಕಳು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 
  • ವಿದ್ಯಾರ್ಥಿಯು 8ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ವ್ಯಾಸಂಗ ಮಾಡುತ್ತಿರಬೇಕು
  • ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು 
  • ವಿದ್ಯಾರ್ಥಿಯ ವಯಸ್ಸಿನ ಮೇಲೆ ನಿರ್ಬಂಧ ವಿಲ್ಲ ಮತ್ತು ಶೈಕ್ಷಣಿಕ ಮಾರ್ಕ್ಸ್ ಆಧಾರದ ಮೇಲೆ ವಿದ್ಯಾರ್ಥಿಯ ಸಹಾಯಧನ ಪರಿಗಣಿಸುವುದಿಲ್ಲ. 

Also Read :- Rajiv Gandhi Housing Scheme : ಮನೆ ಕಟ್ಟಲು ₹1.75 ಲಕ್ಷ–₹2.5 ಲಕ್ಷದ ವರೆಗೂ ಸಹಾಯಧನ ! .

ಅರ್ಜಿ ಹೇಗೆ ಸಲ್ಲಿಸುವುದು ?

Chief Minister Raitha Vidya Nidhi :  ಈ ಯೋಜನೆಗೆ ಕೇವಲ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕು. ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ ಬಳಸಿ ತುಂಬಾ ಸುಲಭವಾಗಿ ತಮ್ಮ ಅರ್ಜಿಯನ್ನು ತಾವೇ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೆಳಗಿನ ಲೇಖನವನ್ನು ಅನುಸರಿಸಿ 

  • ಮೊದಲು ಇಲ್ಲಿ ನೀಡಿರುವ ಲಿಂಕ್ https://ssp.postmatric.karnataka.gov.in/ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ನಿಮ್ಮ ಮೊಬೈಲ್ ಸಂಖ್ಯೆ ಓಟಿಪಿ ಬಳಸಿ ಲಾಗಿನ್ ಮಾಡಿ .
  • ಸ್ಕಾಲರ್ಶಿಪ್ ಅರ್ಜಿ ವಿಭಾಗಕ್ಕೆ ಹೋಗಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಇದನ್ನು ಆಯ್ಕೆ ಮಾಡಿ. ನಂತರ ಅರ್ಜಿ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ಅಗತ್ಯ ವಿವರಗಳನ್ನು ಬಳಸಿ ಭರ್ತಿ ಮಾಡಿ. 
  • ಅರ್ಜಿ ಫಾರಂ ನಲ್ಲಿ ಎಂದು “Weaving/Farmer ID” ಕಾಣಿಸುತ್ತದೆ ಅದನ್ನು ನಿಮ್ಮ ತಂದೆ ಅಥವಾ ತಾಯಿಯ FID ಸಂಖ್ಯೆಯನ್ನು ಬರೆಯಿರಿ. ರೈತರ ಐಡಿ ಇಲ್ಲವೆಂದರೆ ಅಗತ್ಯ ದಾಖಲೆಗಳ ಸಹಾಯದಿಂದ ರೈತರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬಹುದು.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ. ದಾಖಲೆಗಳ ಪಟ್ಟಿ ಕೆಳಗೆ ಲೇಖನದಲ್ಲಿ ನೀಡಲಾಗಿದೆ. 
  • ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ. 

ಅಗತ್ಯ ದಾಖಲೆಗಳು ? 

Chief Minister Raitha Vidya Nidhi : ಅರ್ಜಿ ಸಲ್ಲಿಸುವಾಗ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳು ಅಗತ್ಯವಾಗಿ ಕೇಳಲಾಗುತ್ತದೆ. 

  • ವಿದ್ಯಾರ್ಥಿಯ ಆಧಾರ್ ಕಾರ್ಡ್ 
  • ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ 
  • ಪೋಷಕರ ಪಾನ್ ಕಾರ್ಡ್ 
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ 
  • ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ 
  • ರೈತರ ಐಡಿ FID ಅಥವಾ ಜಮೀನಿನ ದಾಖಲೆಗಳು RTC/ಪಹಣಿ 
  • ಕುಟುಂಬದ ಆದಾಯ ಪ್ರಮಾಣ ಪತ್ರ 
  • ಜಾತಿ ಪ್ರಮಾಣ ಪತ್ರ 
  • ನಿವಾಸ ಪ್ರಮಾಣ ಪತ್ರ 
  • ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ 3 
  •  ಮೊಬೈಲ್ ನಂಬರ್ 
  • ರೇಷನ್ ಕಾರ್ಡ್

ಗಮನಿಸಿ :- ಇವೆಲ್ಲ ದಾಖಲೆಗಳನ್ನು ಸಾಫ್ಟ್ ಕಾಪಿ ಮುಖಾಂತರ SSP ಸ್ಕಾಲರ್ಶಿಪ್ ವೆಬ್ಸೈಟ್ಗೆ ನಿಮ್ಮ ದಾಖಲೆಗಳನ್ನು ಸಲ್ಲಿಸಬೇಕು. ಸಾಫ್ಟ್ ಕಾಪಿ ಎಂದರೆ PNG ಅಥವಾ JPEG. ಒಂದು ವೇಳೆ ವಿದ್ಯಾರ್ಥಿಗಳಿಗೆ ತಾವೇ ಸ್ವತಹ ಅರ್ಜಿ ಸಲ್ಲಿಸಲು ಬರುವುದಿಲ್ಲವೆಂದರೆ ದಯವಿಟ್ಟು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಅರ್ಜಿಯನ್ನು ಸುಲಭವಾಗಿ ಸಲ್ಲಿಸಿ. 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ? 

Chief Minister Raitha Vidya Nidhi : ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸರ್ಕಾರ ಅಧಿಕೃತವಾಗಿ ಇನ್ನು ಸೂಚಿಸಿಲ್ಲ. ಆದರೆ ಈ ಯೋಜನೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

Also Read :- NWKRTC Recruitment 2025 : ಕೇಂದ್ರ ಸಾರಿಗೆ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Chief Minister Raitha Vidya Nidhi : ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯು ಕರ್ನಾಟಕ ಸರ್ಕಾರದ ರೈತರ ಹಿತದೃಷ್ಟಿಯಿಂದ ಮತ್ತು ರೈತರ ಮಕ್ಕಳ ಉನ್ನತ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಪ್ರಾರಂಭಿಸಿದ್ದಾರೆ. ಈ ಯೋಜನೆಯಿಂದ ರೈತರ ಮಕ್ಕಳಿಗೆ ಸುಮಾರು ₹11,000 ಸಾವಿರವರೆಗಿನ ವಿದ್ಯಾರ್ಥಿವೇತನ ಸಿಗುತ್ತದೆ. ಈ ಚಾನ್ಸ್ ಮಿಸ್ ಮಾಡ್ಕೋಬೇಡಿ. ಈ ವಿದ್ಯಾರ್ಥಿ ವೇತನದ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಿ. ಈ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್ ಕೆಳಗೆ ನೀಡಲಾಗಿದೆ. 

ಅರ್ಜಿ ಸಲ್ಲಿಸುವ ಲಿಂಕ್ :

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment