---Advertisement---

BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮ ನಲ್ಲಿ ಸುಪ್ರವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ . 

karnatakasuddi.com

By: Karnataka Suddi

On: Tuesday, November 11, 2025 4:15 PM

BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮ ನಲ್ಲಿ ಸುಪ್ರವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ . 
Google News
Follow Us
---Advertisement---

Table of Contents

BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮ ಸುಪ್ರವೈಸರ್ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಕೆಳಗಿನ ಲೇಖನದಲ್ಲಿ ಇದೆ. ಅರ್ಜಿದಾರರು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ. 

BMRCL Recruitment 2025 : ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಮತ್ತು ನವೀನ ತಂತ್ರಜ್ಞಾನ ಕೇಂದ್ರ ಎಂದು ಹೆಸರುವಾಸಿಯಾಗಿದೆ. ಈ ನಗರದ ಮೆಟ್ರೋ ಮಾರ್ಗ ಬೆಂಗಳೂರು ನಗರದ ಜೀವನಾಡಿಯಾಗಿ ರೂಪಗೊಂಡಿದೆ. ಏಕೆಂದರೆ ಬೆಂಗಳೂರು ಮೆಟ್ರೋ ಲಕ್ಷಾಂತರ ಪ್ರಯಾಣಿಕರ ಪ್ರಯಾಣವನ್ನು ಸುರಕ್ಷಿತವಾಗಿ ತಲುಪಿಸುವ ಒಂದು ಉತ್ತಮ ಸಾಧನವಾಗಿದೆ. ಈಗ ಬೆಂಗಳೂರು ಮೆಟ್ರೋ ನಿಗಮ ಕಡೆಯಿಂದ ಖಾಲಿ ಇರುವ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಹೊರಡಿಸಿದ್ದಾರೆ. ಹಾಗೆ ಈ ಹುದ್ದೆಗೆ ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ ಸುಮಾರು ₹50,000 ಸಾವಿರ ರೂಪಾಯಿ ಸಂಬಳ ನೀಡುವುದರ ಮೂಲಕ ಮತ್ತು ಉನ್ನತ ಸರ್ಕಾರಿ ಸೌಲಭ್ಯಗಳ ಒದಗಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ಲೇಖನವನ್ನು ಅರ್ಜಿಯನ್ನು ಸಲ್ಲಿಸಿ. 

Also Read :-  Labor Card Gift 2025 : ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಗಿಫ್ಟ್ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.  

BMRCL ನೇಮಕಾತಿ ಸಂಕ್ಷಿಪ್ತ ವಿವರ – More Information about BMRCL Requirement

ವಿಷಯವಿವರ
ಸಂಸ್ಥೆಬೆಂಗಳೂರು ಮೆಟ್ರೋ ರೈಲು ನಿಗಮ (BMRCL)
ಹುದ್ದೆಯ ಹೆಸರುಸುಪರ್ವೈಸರ್ (ಆಪರೇಷನ್ ಸೇಫ್ಟಿ)
ಒಟ್ಟು ಹುದ್ದೆಗಳು04
ಮಾಸಿಕ ಸಂಬಳಸುಮಾರು ₹50,000/-
ಕೆಲಸದ ಸ್ಥಳಬೆಂಗಳೂರು – ಕರ್ನಾಟಕ
ಅರ್ಜಿ ವಿಧಾನಆನ್‌ಲೈನ್ ಮತ್ತು ಆಫ್‌ಲೈನ್
ಆನ್‌ಲೈನ್ ಅರ್ಜಿ ಕೊನೆಯ ದಿನಾಂಕನವೆಂಬರ್ 17, 2025
ಹಾರ್ಡ್ ಕಾಪಿ ಕಳುಹಿಸಲು ಕೊನೆಯ ದಿನಾಂಕನವೆಂಬರ್ 20, 2025

BMRCL ಸೂಪರ್ವೈಸರ್ ಹುದ್ದೆ ಕರ್ತವ್ಯಗಳು – BMRCL Supervisor Position Duties

BMRCL Recruitment 2025 : ಮೆಟ್ರೋ ರೈಲು ವ್ಯವಸ್ಥೆಯಲ್ಲಿ ಸುರಕ್ಷಿತ ಎಂಬುದು ಅತ್ಯಂತ ಬಹಳ ಮುಖ್ಯವಾಗಿದೆ. ಒಂದು ಸಣ್ಣ ತಪ್ಪು ಆದರೆ ದೊಡ್ಡ ಅಪಘಾತಕ್ಕೆ ಕಾರಣಾಗಬಹುದು. ಈ ಸಂದರ್ಭದಲ್ಲಿ ಸೂಪರ್ ಅವರ ಪಾತ್ರ ಬಹಳ ಮುಖ್ಯವಾಗಿದೆ. ಇವರು ಮೆಟ್ರೋ ಕಾರ್ಯಾಚರಣೆಯ ಎಲ್ಲಾ ಹಂತಗಳಲ್ಲಿ ಸುರಕ್ಷಿತ ನಿಗಮಗಳ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. Sops ಮತ್ತು ಪ್ರೋಟೋಕಾಲ್ಗಳನ್ನು ಕಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಹಾಗೂ ರೈಲು ಚಾಲಕ ತರಬೇತಿ, ಫ್ಲಾಟ್ ಫಾರಂ ಸುರಕ್ಷತೆ, ಗೇಟ್ ನಿರ್ವಹಣೆ, ಮತ್ತು ಅಗತ್ಯ ಕೆಲಸಗಳನ್ನು ಇವರಿಗೆ ಟ್ರೈನಿಂಗ್ ಮೂಲಕ ಹೇಳಿಕೊಡಲಾಗುತ್ತದೆ. ಇಲ್ಲಿ ನೀಡಿರುವ ಎಲ್ಲಾ ಕೆಲಸಗಳನ್ನು ಸೂಪರ್ವೈಸರ್ ಮಾಡಬೇಕಾಗುತ್ತದೆ. 

Also Read :-   SBI Platinum Jubilee Asha Scholarship :  9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ₹15,000 ವಿದ್ಯಾರ್ಥಿವೇತನ ಸೌಲಭ್ಯ !  

ಈ ಹುದ್ದೆಗೆ ನಿಮ್ಮ ಆಯ್ಕೆ ಹೇಗೆ ನಡಿಯುತ್ತದೆ ?- BMRCL selection Process 

BMRCL Recruitment 2025 : ಈ ನೇಮಕಾತಿ ಪ್ರಕ್ರಿಯೆಗೆ ಅಭ್ಯರ್ಥಿಗಳನ್ನು ಎರಡು ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ ಮೊದಲನೆಯದು ಲಿಖಿತಾ ಪರೀಕ್ಷೆ ಹಾಗೂ ಎರಡನೆಯದು ಸಂದರ್ಶನದ ಪರೀಕ್ಷೆ. 

  • ಲಿಖಿತ ಪರೀಕ್ಷೆ : ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ತಾಂತ್ರಿಕ ಜ್ಞಾನ, ಸಾಮಾನ್ಯ ಜ್ಞಾನ, ರೈಲ್ವೆ ಸಂಬಂಧಿತ ಪ್ರಶ್ನೆಗಳು, ಇತ್ಯಾದಿ ಪ್ರಶ್ನೆಗಳು ಇರುತ್ತದೆ..
  • ಸಂದರ್ಶನ : ಈ ಹಂತದಲ್ಲಿ ಲಿಖಿತಾ ಪರೀಕ್ಷೆಯಲ್ಲಿ ಉತ್ತರನಾದ ಅಭ್ಯರ್ಥಿಗಳನ್ನು ಮುಖಾಮುಖಿಯಾಗಿ ಸಂದರ್ಶನಕ್ಕೆ ಆಹ್ವಾನಿಸುತ್ತಾರೆ. ಇದರಲ್ಲಿ ನಿಮ್ಮ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಾರೆ ಹಾಗೂ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. 

ಗಮನಿಸಿ : ಅಂತಿಮ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಸಂಯೋಜಿತ ಮೌಲ್ಯಾಂಕನದ ಆಧಾರದ ಮೇಲೆ ನಡೆಯುತ್ತದೆ.

Also Read :- Canara Bank personal loan 2025 : ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ? – Who is eligible to apply for this position?

BMRCL Recruitment 2025 : ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿರಬೇಕು. 

  • ಶೈಕ್ಷಣಿಕ ಅರ್ಹತೆ : BMRCL ನಿಗಮ ಪ್ರಕಾರ ಸಾಮಾನ್ಯವಾಗಿ ಇಂಜಿನಿಯರಿಂಗ್ ಎಂಜಿನಿಯರಿಂಗ್ ಸಂಬಂಧಿತ ಪದವಿ (ಬಿ.ಇ/ಬಿ.ಟೆಕ್) ಅಥವಾ ಡಿಪ್ಲೊಮಾ ಹೊಂದಿದವರಿಗೆ ಆದ್ಯತೆ ಇರುತ್ತದೆ. ನಿರ್ದಿಷ್ಟವಾಗಿ ಸಿವಿಲ್, ಮೆಕಾನಿಕಲ್, ಇಲೆಕ್ಟ್ರಿಕಲ್ ಅಥವಾ ಸಂಬಂಧಿತ ಶಾಖೆಗಳಲ್ಲಿ ಪದವಿ/ಡಿಪ್ಲೊಮಾ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನಮೂದಿಸಿರುವ ನಿಖರವಾದ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬೇಕು. 
  • ಅನುಭವ : ಈ ಹುದ್ದೆಗೆ ಅನುಭವ  ಅಗತ್ಯವಾಗಿರುತ್ತದೆ. ಮೆಟ್ರೋ ರೈಲು ಅಥವಾ ಭಾರತೀಯ ರೈಲ್ವೆಯ ಕಾರ್ಯಾಚರಣ ವಿಭಾಗದಲ್ಲಿ ಸುರಕ್ಷತೆ ಅಥವಾ ಕಾರ್ಯಚರಣ ನಿರ್ವಹಣೆ ಸಂಬಂಧಿತ ಕ್ಷೇತ್ರಗಳಲ್ಲಿ ನೇರ ಅನುಭವ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 
  • ವಯಸ್ಸು : ಈ ಹುದ್ದೆಗೆ ಅರ್ಜಿ ಸಲ್ಲಿಸಲು 25 ರಿಂದ ಗರಿಷ್ಠ 60 ವಯಸ್ಸಿನ ಒಳಗೆ ಇರುವವರು ಅರ್ಜಿಯನ್ನು ಸಲ್ಲಿಸಬಹುದು. SC/ ST/ OBC ಅಭ್ಯರ್ಥಿಗಳಿಗೆ ಸರ್ಕಾರದಿಂದ ವಯಸ್ಸಿನ ರಿಯಾಯಿತಿಯು ಕೂಡ ಇದೆ. ವಯಸ್ಸಿನ ರಿಯಾಯಿತಿ ನೋಡುವುದಾದರೆ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು.
BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮ ನಲ್ಲಿ ಸುಪ್ರವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ . 

ಅರ್ಜಿ ಸಲ್ಲಿಸುವ ವಿಧಾನ – How to apply 

BMRCL Recruitment 2025 : ಬೆಂಗಳೂರು ಮೆಟ್ರೋ ನಿಗಮ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಅನುಸರಿಸಿ. ಏಕೆಂದರೆ ಇದರಲ್ಲಿ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ನೀಡಲಾಗಿದೆ. 

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸರ್ಕಾರ ಎರಡು ರೀತಿಯಲ್ಲಿ ಅವಕಾಶವನ್ನು ನೀಡಿದ್ದಾರೆ. ಮೊದಲನೆಯದು ನೀವೇ ಸ್ವತಃ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಎರಡನೆಯದು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಸಾಟಿಗೆ ಭೇಟಿ ನೀಡಿ ಅರ್ಜಿಯನ್ನು ಆಫ್ಲೈನ್ ಮುಖಾಂತರ ಸಲ್ಲಿಸಬಹುದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ? -How to apply online ?

  1. ಮೊದಲು ಇಲ್ಲಿ ನೀಡಿರುವ ಲಿಂಕ್ ಮೇಲೆ https://bmrc.co.in/  ಕ್ಲಿಕ್ ಮಾಡಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. 
  2. ನಂತರ ಕೆರಿಯರ್ ಮೇಲೆ ಕ್ಲಿಕ್ ಮಾಡಿ .ಹೋಮ್ ಪೇಜ್ನಲ್ಲಿ ‘ಕೆರಿಯರ್ಸ್’ (Careers) ಅಥವಾ ‘ನೇಮಕಾತಿ’ (Recruitment) ಎನ್ನುವ ವಿಭಾಗವನ್ನು ಕ್ಲಿಕ್ ಮಾಡಿ. 
  3. ನಂತರ “ಸುಪರ್ವೈಸರ್ (ಆಪರೇಷನ್ ಸೇಫ್ಟಿ)” ಹುದ್ದೆಯ ಅಧಿಸೂಚನೆಯನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ
  4.  ಆನ್ಲೈನ್ ಫಾರ್ಮ್ ಬರ್ತಿ ಮಾಡಿ : ಅಧಿಸೂಚನೆಯನ್ನು ಓದಿದ ನಂತರ ನಿಮ್ಮ ಮುಂದೆ ಅರ್ಜಿ ಫಾರಂ ಓಪನ್ ಆಗುವುದು ಅದನ್ನು ನಿಮ್ಮ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ .ಉದಾಹರಣೆ :- ನಿಮ್ಮ ಹೆಸರು, ತಂದೆಯ ಹೆಸರು, ಖಯಂ ವಿಳಾಸ, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ, ಶೈಕ್ಷಣಿಕ ಮಾಹಿತಿ, ಇತ್ಯಾದಿ..
  5. ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ : ಫಾರಂ ಜೊತೆಗೆ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು. ಉದಾಹರಣೆ :- ನೀವೇ ಸ್ವತಃ ಅಪ್ಲೋಡ್ ಮಾಡುವುದಾದರೆ ನಿಮ್ಮ ದಾಖಲೆಗಳನ್ನು ಪಿಡಿಎಫ್ ಮುಖಾಂತರ ಮಾಡಿಕೊಳ್ಳಬೇಕಾಗುತ್ತದೆ. ಅಗತ್ಯ ದಾಖಲೆಗಳ ಪಟ್ಟಿ ಕೆಳಗೆ ಲೇಖನದಲ್ಲಿ ನೀಡಲಾಗಿದೆ ಅದನ್ನು ಅನುಸರಿಸಿ. 
  6. ಅರ್ಜಿ ಸಲ್ಲಿಸಿ : ನಿಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಒಂದು ಸಲ ಸರಿಯಾಗಿ ಪರಿಶೀಲನೆ ಮಾಡಿ. ನಂತರ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ. ಎಲ್ಲವೂ ಸರಿಯಾಗಿದ್ದರೆ  ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಿಮ್ಮ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಯಶಸ್ವಿಯಾಗುವುದು.  ಅರ್ಜಿ ಸಲ್ಲಿಕೆಯಾದ ನಂತರ ನೀವು ನೀಡಿರುವ ಇಮೇಲ್ ಐಡಿಗೆ ಅಪ್ಲಿಕೇಶನ್ ಕಾಪಿ ಬರುವುದು ಅದನ್ನು  (Print Out / Application Copy)  ತಪ್ಪದೆ ಪ್ರಿಂಟ್ ಔಟ್ ಮಾಡಿಕೊಳ್ಳಿ. 

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ? -How to apply offline 

BMRCL Recruitment 2025 : ಈ ಹುದ್ದೆಗೆ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗಿನ ಲೇಖನವನ್ನು ಅನುಸರಿಸಿ. 

  1. ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ : ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ ಹಾಗೂ ಅದರ ಮೇಲೆ ನಿಮ್ಮ ಸಹಿ ಮಾಡಿಕೊಳ್ಳಿ. 
  2. ನಿಮ್ಮ ಎಲ್ಲ ಶೈಕ್ಷಣಿಕ ಪ್ರಮಾಣ ಪತ್ರಗಳು, ವಯಸ್ಸಿನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಹಾಗೂ ನಿಮ್ಮ ಎಲ್ಲಾ ದಾಖಲೆ ಮೇಲು “ ಸ್ವಯಂ ದೃಢೀಕೃತ ”ಇಂದು ಬರೆದು ಸಹಿ ಮಾಡಬೇಕು ಇದು ಅಗತ್ಯವೂ ಹೌದು.
  3. ಇವೆಲ್ಲ ದಾಖಲೆಗಳನ್ನು ನಿಮ್ಮ ಅರ್ಜಿ ಫಾರಂ ಜೊತೆಗೆ ಸೇರಿಸಿ ಪಿನ್ ಮಾಡಿಕೊಳ್ಳಿ. 
  4. ನಂತರ ಅರ್ಜಿಯ ಕವರ್ ಮೇಲೆ ಕೆಳಗಿನ ವಿಳಾಸವನ್ನು ಬರೆಯಬೇಕು

To,

The General Manager (HR) i/c,

Bangalore Metro Rail Corporation Limited,

III Floor, BMTC Complex,

K.H. Road, Shanthinagar,

Bengaluru – 560027

  1. ಅರ್ಜಿ ಕಳಿಸುವ ವಿಧಾನ : ನಿಮ್ಮ ಅರ್ಜಿ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ನಲ್ಲಿ ಕಳಿಸಬಹುದು ಹಾಗೂ ಯಾವುದೇ ಕೊರಿಯರ್ ಸೇವೆಯ ಮೂಲಕ ಕಳಿಸಬಹುದಾಗಿದೆ. 
  2. ಅರ್ಜಿ ಕಲಿಸಲು ಕೊನೆಯ ದಿನಾಂಕ : ನಿಮ್ಮ ಅರ್ಜಿ ಕಳಿಸುವುದಕ್ಕೆ ನವೆಂಬರ್ 20/2025 ರಂದು ಸಂಜೆ 5:00ಗೆ ಮುನ್ನ ಅರ್ಜಿಯನ್ನು ಕಳಿಸಬೇಕು. ಒಂದು ವೇಳೆ ತಡವಾದರೆ ನಿಮ್ಮ ಅರ್ಜಿ ಪರಿಗಣಿಸುವುದಿಲ್ಲ. 

ಈ ಹುದ್ದೆಯಿಂದ ಅಭ್ಯರ್ಥಿಗಳಿಗೆ ಏನು ಲಾಭ ? – What are the benefits for candidates from this position

BMRCL Recruitment 2025 : ಮೆಟ್ರೋ ಹುದ್ದೆ ಕೆಲಸವು ನಗರದ ಲಕ್ಷಾಂತರ ಪ್ರಜೆಗಳ ದಿನನಿತ್ಯ ಪ್ರಯಾಣದ ಒಂದು ಭಾಗವಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಮೆಟ್ರೋ ಸಿಬ್ಬಂದಿಯರು ಜಾಗರೂಕತೆಯಿಂದ ಕೆಲಸ ಮಾಡಬೇಕು. ಇದು ಬರೀ ಉದ್ಯೋಗವಲ್ಲ ಇದು ಒಂದು ಸೇವೆಯಾಗಿದೆ. ಬಹು ಮುಖ್ಯವಾಗಿ BMRCL ಇದು ಒಂದು ಉನ್ನತ ಸರ್ಕಾರಿ ಉದ್ಯೋಗ ವಾಗಿದೆ. ಈ ಹುದ್ದೆಯಲ್ಲಿ ಉದ್ಯೋಗದ ಸ್ಥಿರತೆ ಮತ್ತು ಭದ್ರತೆಯು ಹೆಚ್ಚು ಉದಾಹರಣೆ , ಆಕರ್ಷಕ 50,000 ವೇತನ, DA,HRA, ವೈದ್ಯಕೀಯ ಪ್ರಯೋಜನಗಳು, ಪಿಂಚಣಿ ಯೋಜನೆ, ಇನ್ನು ಹಲವಾರು ಯೋಜನೆಗಳು ಈ ಹುದ್ದೆಯಲ್ಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಕೆಳಗಿನ ಲೇಖನದಲ್ಲಿದೆ. 

Also Read :- Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ 1.50ಲಕ್ಷ ರೂಪಾಯಿ ನೆರವು? 

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ? -What is the last date to apply

BMRCL Recruitment 2025 : BMRCL ಹುದ್ದೆಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ ನವೆಂಬರ್ 17 / 2025 ರಂದು. ಹಾರ್ಟ್ ಕಾಪಿ ಕಳುಹಿಸಲು ಕೊನೆಯ ದಿನಾಂಕ ನವೆಂಬರ್ 20 / 2025

BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮದ ಸುಪ್ರವೈಸರ್ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಆಸಕ್ತ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಏಕೆಂದರೆ ತಿಂಗಳಿಗೆ ₹50,000 ಸಾವಿರ ರೂಪಾಯಿ ಸಂಬಳ, ಸರ್ಕಾರದಿಂದ ಹಲವು ಉಪಯೋಗವಾಗುವ ಸೌಲಭ್ಯ, ಉದ್ಯೋಗದ ಭದ್ರತೆ ಎಲ್ಲವೂ ಕೂಡ ಈ ಹುದ್ದೆಯಲ್ಲಿ ಇರುವುದು. ಈ ಚಾನ್ಸ್ ಮಿಸ್ ಮಾಡ್ಕೋಬೇಡಿ. ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು (ನವೆಂಬರ್ 17 ಮತ್ತು 20, 2025) ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ ಒಂದು ವೇಳೆ ಕಡವಾದರೆ ನಿಮ್ಮ ಅರ್ಜಿಯನ್ನು ಪರಿಗಣಿಸುವುದಿಲ್ಲವೆಂದು ಸರ್ಕಾರವು ಆದೇಶ ನೀಡಿದ್ದಾರೆ. 

ಗಮನಿಸಿ : ಅರ್ಜಿ ಸಲ್ಲಿಸುವ ಮುನ್ನ, BMRCL ಅಧಿಕೃತ ವೆಬ್ಸೈಟ್ನಲ್ಲಿ ಹೋಗಿ ನಿಮ್ಮ ಹುದ್ದೆಯ ಅಧಿಸೂಚನೆಯನ್ನು  (Employment Notification/Advertisement) ಕಡ್ಡಾಯವಾಗಿ ಸಂಪೂರ್ಣ ಓದಿಕೊಳ್ಳಿ. ನಂತರ ಅಂತಿಮವಾಗಿ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ  https://bmrc.co.in/ 

ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆ, ಉದ್ಯೋಗದ ಮಾಹಿತಿ, ಕೃಷಿ ಸುದ್ದಿ,  ಹಾಗೂ ವಿದ್ಯಾರ್ಥಿ ವೇತನ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡುತ್ತಾ ಇರಿ. ಇದರಲ್ಲಿ ನಾವು ನಿಖರವಾದ ಮಾಹಿತಿಯೊಂದಿಗೆ ನಿಮ್ಮ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಎಂದಿಗೂ ಸಿದ್ದರಾಗಿರುತ್ತೇವೆ. 

karnataka Suddi

For Feedback - feedback@example.com

Join WhatsApp

Join Now

Join Telegram

Join Now

Leave a Comment