Labour Card Scholarship 2026 : ಕೆಲಸದ ವೇಳೆ ಮೃತಪಟ್ಟ ಲೇಬರ್ ಕಾರ್ಡ್ ಹೊಂದಿದ್ದ ಕಟ್ಟಡ ಕಾರ್ಮಿಕರ ಮಕ್ಕಳಿಗೆ 2025-26ರಿಂದ ಪಿಜಿ ವರೆಗೆ ಉಚಿತ ಶಿಕ್ಷಣ ಸಹಾಯಧನ. ಯಾರು ಅರ್ಜಿ ಹಾಕಬಹುದು? ಬೇಕಾಗುವ ದಾಖಲೆಗಳು, ಸೇವಾ ಸಿಂಧು ಅರ್ಜಿ ವಿಧಾನ ಮತ್ತು ಮುಖ್ಯ ನಿಯಮಗಳು ಇಲ್ಲಿ ತಿಳಿಯಿರಿ.
| ವಿವರ | ಮಾಹಿತಿ |
|---|---|
| ಯೋಜನೆ ಜಾರಿ | 2026–27 ಶೈಕ್ಷಣಿಕ ಸಾಲು |
| ಫಲಾನುಭವಿಗಳು | ಕೆಲಸದ ವೇಳೆ ಮೃತಪಟ್ಟ ಲೇಬರ್ ಕಾರ್ಡ್ ಕಾರ್ಮಿಕರ ಮಕ್ಕಳು |
| ಶಿಕ್ಷಣ ಮಿತಿ | PG ವರೆಗೆ |
| ಮಕ್ಕಳ ಸಂಖ್ಯೆ | ಗರಿಷ್ಠ 2 ಮಂದಿ |
| ಅರ್ಜಿ ವಿಧಾನ | ಸೇವಾ ಸಿಂಧು / ಗ್ರಾಮ ಒನ್ / ಸೈಬರ್ ಸೆಂಟರ್ |
Labour Card Scholarship 2026 : ಕರ್ನಾಟಕ ರಾಜ್ಯ ಸರ್ಕಾರವು ಕಾರ್ಮಿಕರ ಮಕ್ಕಳಿಗೆ ಉಚಿತ ಸಹಾಯಧನವನ್ನು ಘೋಷಿಸಿದ್ದಾರೆ. ಕೆಲಸ ಮಾಡುವ ವೇಳೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಮುಂದುವರೆಸಲು ಸರ್ಕಾರದಿಂದ ವಿಶೇಷ ಶೈಕ್ಷಣಿಕ ಸಹಾಯಧನವನ್ನು ಘೋಷಣೆ ಮಾಡಲಾಗಿದೆ. 2026-27ನೆಯ ಶೈಕ್ಷಣಿಕ ಸಾಲಿನ ಈ ಯೋಜನೆಗೆ ಜಾರಿ ಬರುತ್ತಿದೆ. ಈ ಯೋಜನೆ ಸ್ನಾತಕೋತ್ತರ ( PG) ವರೆಗೆ ಶಿಕ್ಷಣ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ.
ಈ ಲೇಖನದಲ್ಲಿ ಈ ಯೋಜನೆಯ ಅರ್ಹತೆ, ನಿಯಮಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬೇಕಾಗುವ ಅಗತ್ಯ ದಾಖಲೆಗಳನ್ನು ಸಂಪೂರ್ಣ ಮಾಹಿತಿ ನೀಡಲಾಗಿದೆ ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
ಯೋಜನೆಯ ಮುಖ್ಯಾಂಶಗಳು:
- 2026–27ನೇ ಶೈಕ್ಷಣಿಕ ಸಾಲಿನಿಂದ ಜಾರಿ
- ಸ್ನಾತಕೋತ್ತರ (PG) ವರೆಗೆ ಶಿಕ್ಷಣ ವೆಚ್ಚ ಭರಣೆ
- ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಸೌಲಭ್ಯ
- ಸೇವಾ ಸಿಂಧು (Seva Sindhu) ಮತ್ತು ಗ್ರಾಮ ಒನ್ (Grama One) ಮೂಲಕ ಅರ್ಜಿ
ಏನಿದು ಹೊಸ ನಿಯಮ ?
Labour Card Scholarship 2026 : ಈ ಹಿಂದೆ ನೋಂದಾಯಿತ ಕಟ್ಟಡ ಕಾರ್ಮಿಕರು ಕುಣಿತ ಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರದಿಂದ ಪಿಂಚಣಿ ಮಾತ್ರ ಸಿಗುತ್ತಿತ್ತು. ಆದರೆ ಇದೀಗ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ವೆಚ್ಚವನ್ನು ಹೆಚ್ಚು ಇರುವುದರಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರವೇ ಮಕ್ಕಳಿಗೆ ಸ್ಕಾಲರ್ಶಿಪ್ ಮೂಲಕ ಸಹಾಯ ಮಾಡುತ್ತಿದೆ.
ಯಾರು ಅರ್ಜಿ ಸಲ್ಲಿಸಬಹುದು ?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಹೊಂದಿರಬೇಕು.
- ಮೃತ ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತವಾಗಿರಬೇಕು.
- ಮಾನ್ಯ ಲೇಬರ್ ಕಾರ್ಡ್ (Labour Card) ಹೊಂದಿರಬೇಕು. ಇದು ಕಡ್ಡಾಯವಾಗಿದೆ.
- ಅಪಘಾತಕ್ಕೆ ಸಂಬಂಧಿಸಿದ ಪೊಲೀಸ್ ಎಫ್‌ಐಆರ್ (FIR) ಅಥವಾ ಅಧಿಕೃತ ವರದಿ ಕಡ್ಡಾಯ.
- ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಲಭ್ಯ.
ಶಿಕ್ಷಣ ಮಿತಿ
ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಯಾದರೆ ಅರ್ಜಿ ಸಲ್ಲಿಸಲು ಅರ್ಹರು. ಮತ್ತು ಮುಖ್ಯವಾಗಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಓದುತ್ತಿರಬೇಕು.
ಅರ್ಜಿ ಸಲ್ಲಿಸುವ ವಿಧಾನ ?
ಈ ಯೋಜನೆಗೆ ಅರ್ಜಿ ಎರಡು ರೀತಿಯಲ್ಲಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ. ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಲು ಕೆಳಗಿನ ಲೇಖನವನ್ನು ಅನುಸರಿಸಿ.
ಆನ್ಲೈನ್ ಮೂಲಕ :
- ಮೊದಲು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ.
- ನಂತರ ನಿಮ್ಮ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಹಾಗೂ OTP ಬಳಸಿ ಲಾಗಿನ್ ಮಾಡಿಕೊಳ್ಳಿ.
- ನಂತರ Labour card scholarship 2026-27 ಇದನ್ನು ಆರಿಸಿಕೊಳ್ಳಿ.
- ನಂತರ ಒಂದು ಅರ್ಜಿ ಫಾರಂ ಓಪನ್ ಆಗುತ್ತದೆ. ಅರ್ಜಿಯ ಮೇಲೆ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳೊಂದಿಗೆ ಭರ್ತಿ ಮಾಡಿ.
- ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ.
- ಕೊನೆಯದಾಗಿ ಅರ್ಜಿ ಸಲ್ಲಿಸಿ.
ಆಫ್ಲೈನ್ ಮೂಲಕ :
ನಿಮಗೆ ಒಂದು ವೇಳೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಾರದಿದ್ದರೆ. ನೀವು ನಿಮ್ಮ ಹತ್ತಿರದ ಗ್ರಾಮ, ಸೈಬರ್ ಸೆಂಟರ್, ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವೇಳೆ ಕೆಳಗೆ ಲೇಖನದಲ್ಲಿ ನೀಡಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ. ಈ ಯೋಜನೆಯ ಇನ್ನೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಾರ್ಮಿಕ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.
ಅಗತ್ಯ ದಾಖಲೆಗಳು ?
ಅರ್ಜಿ ಸಲ್ಲಿಸುವ ವೇಳೆ ಈ ಕೆಳಗಿನ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಕೊಡಬೇಕಾಗುತ್ತದೆ.
- ಮೃತ ಕಾರ್ಮಿಕರ ಲೇಬರ್ ಕಾರ್ಡ್
- ಮರಣ ಪ್ರಮಾಣ ಪತ್ರ
- ಪೊಲೀಸ್ FIR ಅಥವಾ ಅಪಘಾತ ವರದಿ
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಶಾಲೆ/ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರ
- ಹಿಂದಿನ ವರ್ಷದ ಅಂಕಪಟ್ಟಿಗಳು
- ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್
- ಹಾಗೂ ವಿದ್ಯಾರ್ಥಿಯ ಕಾಲೇಜ್ ಅಥವಾ ಶಾಲೆಯ ಐಡಿ ಕಾರ್ಡ್.
Labour Card Scholarship 2026 : ರಾಜ್ಯ ಸರ್ಕಾರದ ಈ ಯೋಜನೆಯಿಂದ ಮೃತಪಟ್ಟ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಮಹತ್ವವಾದ ನೆರವು ಸಿಗುತ್ತದೆ. ಮೃತಪಟ್ಟ ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸರ್ಕಾರದಿಂದ ಸಹಾಯಧನವನ್ನು ಘೋಷಿಸಿದ್ದಾರೆ. ಆದಷ್ಟು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಇದೇ ರೀತಿಯ ಉಪಯುಕ್ತ ಸರ್ಕಾರಿ ಯೋಜನೆಯ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡಿ.
















