PM Kisan 22ನೇ ಕಂತು ಮಾರ್ಚ್ 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರೈತರು ₹2,000 ಪಡೆಯಲು e-KYC, Farmer ID ಮತ್ತು ಭೂಮಿ ಲಿಂಕ್ ಕಡ್ಡಾಯ. ಕಂತಿನ ದಿನಾಂಕ, ಅರ್ಹತೆ ಮತ್ತು ಸ್ಟೇಟಸ್ ಪರಿಶೀಲಿಸುವ ವಿಧಾನವನ್ನು ಕೆಳಗಿನ ಲೇಖನದಲ್ಲಿ ತಿಳಿಯಿರಿ.
ಭಾರತ ಸರ್ಕಾರದ PM Kisan ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ದೇಶದ ಸಣ್ಣ ರೈತರಿಗೆ ಪ್ರತಿ ವರ್ಷ ಸುಮಾರು ₹6000 ರೂಪಾಯಿ ಸಹಾಯಧನವನ್ನು ನೀಡುತ್ತಾ ಬರುತ್ತಿದ್ದಾರೆ. ಈ ಸಹಾಯಧನವು ಪ್ರತಿ ನಾಲ್ಕು ತಿಂಗಳಿಗೆ ₹2000 ಸಾವಿರದಂತೆ ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಇದುವರೆಗೆ ಈ ಯೋಜನೆಯ 21 ಕಂತುಗಳು ಬಿಡುಗಡೆಯಾಗಿವೆ. ಈಗ ರೈತರು 22ನೇ ಕಂತಿನ ಹಣವನ್ನು ಮಾರ್ಚ್ 2026ರಲ್ಲಿ ಪಡೆಯುವ. ಆದರೆ ಈ ಬಾರಿ ಹಣ ಪಡೆಯಲು e-KYC ಮತ್ತು Farmer ID ಅಪ್ಡೇಟ್ ಮಾಡಲು ಕಡ್ಡಾಯವಾಗಿದೆ.
ಪಿಎಂ ಕಿಸಾನ್ ಯೋಜನೆಯ ಪ್ರಮುಖ ಮಾಹಿತಿ
ಪಿಎಂ ಕಿಸಾನ್ ಯೋಜನೆಯು 2019 ರಲ್ಲಿ ಜಾರಿಗೊಂಡಿತು. ಇದರ ಉದ್ದೇಶವೇನೆಂದರೆ ದೇಶದ ಸಣ್ಣಪುಟ್ಟ ರೈತರಿಗೆ ಪ್ರತಿವರ್ಷ ₹6,000 ರೂಪಾಯಿ ಸಹಾಯಧನವನ್ನು ನೀಡುವುದರ ಮೂಲಕ ರೈತರಿಗೆ ಗೊಬ್ಬರ, ಕೃಷಿ ಸಾಧನಗಳು ಇತ್ಯಾದಿ ಖರ್ಚುಗಳಿಗೆ ಸಹಾಯವಾಗುತ್ತಿದೆ. ಸುಮಾರು 2000ರಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ಜಮ್ಮವಾಗುತ್ತದೆ.
ಪಿಎಂ ಕಿಸಾನ್22 ನೆ ಕಂತು ಯಾವಾಗ ಬರುತ್ತದೆ.
ಸರ್ಕಾರದ ಮಾಹಿತಿ ಪ್ರಕಾರ, 22ನೇ ಕಂತು ಮಾರ್ಚ್ 2026ರಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಬಾರಿ ಸುಮಾರು 11 ಕೋಟಿ ರೈತರಿಗೆ ಹಣ ಜಮಾ ಹಾಡುತ್ತೇವೆ ಎಂದು ಸರ್ಕಾರ ಹೇಳಿದ್ದಾರೆ.
ಪಿಎಂ ಕಿಸಾನ್ 22ನೇ ಕಂತು ಪಡೆಯಲು e-KYC ಮತ್ತು Farmer ID ಅಗತ್ಯವೇ ?
ಹೌದು ಸ್ನೇಹಿತರೆ, ಸರ್ಕಾರದ ಪಿಎಂ ಕಿಸಾನ್ 22ನೇ ಕಂತು ಹಣ ಪಡೆಯಲು ಹೊಸದಾಗಿ e-KYC ಹಾಗೂ Farmer ID ಮಾಡಿಸಲೇಬೇಕು ಇಲ್ಲವಾದರೆ ನಿಮಗೆ ಸಿಗಬೇಕಾದ 2,000 ಸಹಾಯಧನವನ್ನು ಜಮಾ ಮಾಡಲಾಗುವುದಿಲ್ಲ.
e-KYC ಹೇಗೆ ಮಾಡಬೇಕು ?
ಪಿಎಂ ಕಿಸಾನ್ ಯೋಜನೆಗೆ e-KYC ಮಾಡಲು ಈ ಕೆಳಗಿನ ಲೇಖನವನ್ನು ಸರಿಯಾಗಿ ಅನುಸರಿಸಿ.
- ಮೊದಲು ಸರ್ಕಾರದ PM Kisan Protal ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ನಂತರ e-KYC ಆಯ್ಕೆಮಾಡಿಕೊಳ್ಳಿ
- ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂಂದಿಸಿ
- OTP ಮೂಲಕ ದೃಢೀಕರಣ ಮಾಡಿ.
Farmer ID ಹೇಗೆ ಮಾಡಿಸಿಕೊಳ್ಳಬೇಕು
- ಮೊದಲು ಸರ್ಕಾರದ Farmer ID ಅಧಿಕೃತ ಪೋರ್ಟಲ್ ಭೇಟಿ ನೀಡಿ.
- ನಂತರ ರೈತ ನೊಂದಣಿ ಮಾಡಿ
- ನಿಮ್ಮ ಭೂಮಿ ದಾಖಲೆಗಳನ್ನು ಲಿಂಕ್ ಮಾಡಿಕೊಳ್ಳಿ
- ನಂತರ Farmer ID ಯನ್ನು ಪಡೆಯಿರಿ.
ಗಮನಿಸಿ : ನಿಮಗೆ ಸ್ವತಹ ಆನ್ಲೈನ್ ಮೂಲಕ e-KYC ಮತ್ತು Farmer ID ಮಾಡಲು ಬರದಿದ್ದರೆ. ದಯವಿಟ್ಟು ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ e-KYC / Farmer ID ಮಾಡಿಕೊಳ್ಳಿ.
ನಿಮ್ಮ PM Kisan ಸ್ಥಿತಿ ಹೇಗೆ ಪರಿಶೀಲಿಸಬೇಕು?
- ರೈತರು ತಮ್ಮ ಕಂತಿನ ಸ್ಥಿತಿಯನ್ನು ಆನ್ಲೈನ್ನಲ್ಲಿ ನೋಡಬಹುದು.
- PM Kisan Portal ಗೆ ಭೇಟಿ ನೀಡಿ
- Know Your Status ಕ್ಲಿಕ್ ಮಾಡಿಮೊಬೈಲ್ ಸಂಖ್ಯೆ ಅಥವಾ Registration ID ನಮೂದಿಸಿ
- OTP ಮೂಲಕ ಪರಿಶೀಲನೆ ಮಾಡಿ
- ಅಲ್ಲಿ e-KYC, Aadhaar Linking ಮತ್ತು Land Seeding ಸ್ಥಿತಿ ಕಾಣಿಸುತ್ತದೆ.
ಪಿಎಂ ಕಿಸಾನ್ 22ನೇ ಕಂತು ಹಣ ಪಡೆಯಲು ಅರ್ಹತೆಗಳು ?
- ರೈತರಿಗೆ 2 ಹೆಕ್ಟರ್ ಗಿಂತ ಕಡಿಮೆ ಭೂಮಿ ಹೊಂದಿರಬೇಕು.
- ರೈತರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
- ಭೂಮಿ ದಾಖಲೆಗಳು ಎಲ್ಲವೂ ಸಹ ಸರಿಯಾಗಿರಬೇಕು .
- ಭೂಮಿ ದಾಖಲೆಗಳು ಅರ್ಜಿ ಸಲ್ಲಿಸಿದ ರೈತರ ಹೆಸರಿನಲ್ಲಿ ಇರಬೇಕು.
ಯಾವ ರೈತರಿಗೆ ಪಿಎಂ ಕಿಸಾನ್ ಸಹಾಯಧನ ಸಿಗುವುದಿಲ್ಲ?
- ಆದಾಯ ತೆರಿಗೆ ಪಾವತಿಸುತ್ತಿರಬಾರದು.
- ರೈತರು ಸರ್ಕಾರಿ ನೌಕರರಾಗಿರಬಾರದು
- 10,000 ಹೆಚ್ಚು ಪಿಂಚಣಿ ಪಡೆದಿರಬಾರದು
ಸಹಾಯ ಬೇಕಾದರೆ ಸಂಪರ್ಕಿಸಿ
ರೈತರು ಸಮಸ್ಯೆ ಇದ್ದರೆ ಈ ಸಂಖ್ಯೆಗೆ ಕರೆ ಮಾಡಬಹುದು:
- PM Kisan Helpline: 155261
- Landline: 011-24300606
ರೈತರಿಗೆ ಮುಖ್ಯ ಸಲಹೆಗಳು ?
PM Kisan 22ನೇ ಕಂತು ಪಡೆಯಲು:
- e-KYC ತಕ್ಷಣ ಪೂರ್ಣಗೊಳಿಸಿ
- Farmer ID ಮಾಡಿಸಿಕೊಳ್ಳಿ
- ಭೂಮಿ ದಾಖಲೆಗಳನ್ನು ಲಿಂಕ್ ಮಾಡಿ
- PM Kisan ಪೋರ್ಟಲ್ನಲ್ಲಿ ಸ್ಥಿತಿ ಪರಿಶೀಲಿಸಿ
ಈ ಕೆಲಸಗಳನ್ನು ಪೂರ್ಣಗೊಳಿಸಿದರೆ ಮಾರ್ಚ್ 2026ರಲ್ಲಿ ₹2,000 ಹಣ ಪಡೆಯುವ ಸಾಧ್ಯತೆ ಹೆಚ್ಚು. ರೈತರು ತಡ ಮಾಡದೆ ಆದಷ್ಟು ಬೇಗ e-KYC ಮತ್ತು Farmer ID ಮಾಡಿಕೊಳ್ಳಿ ಇಲ್ಲವಾದರೆ ನಿಮಗೆ ಸಿಗಬೇಕಾದ ಪಿಎಂ ಕಿಸಾನ್ ಹಣವು ಸಿಗುವುದಿಲ್ಲ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆ ಹಾಗೂ ಕೃಷಿ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ಗ ಭೇಟಿ ನೀಡಿ.

















