PMAY Loan 2026: ₹2.67 ಲಕ್ಷ ಸಬ್ಸಿಡಿ ಗೃಹ ಸಾಲ – ಅರ್ಹತೆ, EMI ಲಾಭ, ಅರ್ಜಿ ವಿಧಾನ ಸಂಪೂರ್ಣ ಮಾಹಿತಿ!

karnatakasuddi.com

By: Karnataka Suddi

On: Thursday, March 5, 2026 8:50 PM

PMAY Loan 2026: ₹2.67 ಲಕ್ಷ ಸಬ್ಸಿಡಿ ಗೃಹ ಸಾಲ – ಅರ್ಹತೆ, EMI ಲಾಭ, ಅರ್ಜಿ ವಿಧಾನ ಸಂಪೂರ್ಣ ಮಾಹಿತಿ!
PMAY Loan 2026 ಅಡಿಯಲ್ಲಿ ಗೃಹ ಸಾಲದ ಮೇಲೆ ₹2.67 ಲಕ್ಷವರೆಗೆ ಸಬ್ಸಿಡಿ ಸಿಗುತ್ತದೆ. ಅರ್ಹತೆ, EMI ಲಾಭ, ಅಗತ್ಯ ದಾಖಲೆಗಳು ಮತ್ತು ಅರ್ಜಿ ವಿಧಾನವನ್ನು ಇಲ್ಲಿ ತಿಳಿಯಿರಿ.

ನಮಸ್ತೆ ಸ್ನೇಹಿತರೆ ನೀವೇನಾದರೂ ಸ್ವಂತ ಮನೆ ನಿರ್ಮಿಸಲು ಬಯಸುತ್ತಿದ್ದೀರಾ? ಸ್ವಂತ ಮನೆ ನಿರ್ಮಿಸಲು ಹಣಕಾಸಿನ ತೊಂದರೆ ಆಗುತ್ತಿದೆಯಾ?. ಹಾಗಾದರೆ ಚಿಂತಿಸಬೇಡಿ. ನಿಮ್ಮ ಕಷ್ಟಕ್ಕೆ ಭಾರತ ಸರ್ಕಾರವು ನೆರವಾಗುತ್ತಿದೆ. ಭಾರತ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮ್ಮ ಮನೆ ನಿರ್ಮಿಸಲು ಸರ್ಕಾರವೇ ನಿಮಗೆ ಗೃಹ ಸಾಲ ನೀಡುತ್ತಾರೆ. ನಿಮಗೆ ಒಟ್ಟು ಮನೆ ನಿರ್ಮಿಸಲು ಗರಿಷ್ಠ ₹2.67 ಲಕ್ಷದವರೆಗೂ ಸಹಾಯಧನ ಲಭ್ಯವಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.

ಯೋಜನೆಯ ಉದ್ದೇಶವೇನೆಂದರೆ ಮಧ್ಯಮ ವರ್ಗದ ಕುಟುಂಬಗಳಿಗೆ ಕಡಿಮೆ EMI ಮೂಲಕ ಮನೆ ನಿರ್ಮಾಣ ಅಥವಾ ಖರೀದಿ ಮಾಡಲು ಸಹಾಯ ಮಾಡುವುದಾಗಿದೆ.

PMAY Loan 2026 ಎಂದರೇನು ?

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಈ ಯೋಜನೆ ಕೇಂದ್ರ ಸರ್ಕಾರ ಆರಂಭಿಸಿದ ವಸತಿ ಯೋಜನೆಯಾಗಿದೆ. ಇದರ ಉದ್ದೇಶ ಮಧ್ಯಮ ವರ್ಗದ ಜನರಿಗೆ ತಮ್ಮ ಸ್ವಂತ ಮನೆ ನಿರ್ಮಿಸಲು ಸಬ್ಸಿಡಿ ಮೂಲಕ ಸಹಾಯ ಮಾಡುವುದು. ಹಾಗೂ ಈ ಯೋಜನೆಯಲ್ಲಿ CLSS (Credit Linked Subsidy Scheme) ಅಡಿಯಲ್ಲಿ ಗೃಹ ಸಾಲದ ಬಡ್ಡಿಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. ನಿಮ್ಮ ಸಬ್ಸಿಡಿ ಮೊತ್ತವು ನೇರವಾಗಿ ನಿಮ್ಮ ಗೃಹ ಸಾಲದ ಖಾತೆಗೆ ಜಮಾ ಆಗುತ್ತದೆ.

PMAY Loan 2026 ಪ್ರಮುಖ ಲಾಭಗಳು ?

ಈ ಯೋಜನೆ ಮೂಲಕ ಮನೆ ಖರೀದಿ ಅಥವಾ ಮನೆ ನಿರ್ಮಾಣ ಮಾಡುವವರಿಗೆ ಹಲವಾರು ಲಾಭಗಳಿವೆ.

  • ಮನೆ ನಿರ್ಮಿಸಲು ಸುಮಾರು ₹2.67 ಲಕ್ಷ ಸಬ್ಸಿಡಿ ಸಿಗುತ್ತದೆ.
  • EMI ಪ್ರತಿ ತಿಂಗಳು ಕೇವಲ 2000 ಇಂದ 3000 ರೂಪಾಯಿವರೆಗೆ ಕಡಿಮೆಯಾಗಬಹುದು
  • 20 ವರ್ಷಗಳವರೆಗೆ ಗೃಹ ಸಾಲದ ಅವಧಿ ಇದೆ
  • ಮಹಿಳೆಯರಿಗೆ ಸಹ-ಮಾಲೀಕತ್ವದ ಆದ್ಯತೆ

PMAY Loan 2026 ಅರ್ಹತೆ ?

ಗೃಹ ಸಾಲವು ನಿಮ್ಮ ಕುಟುಂಬದ ವಾರ್ಷಿಕ ಆದಾಯದ ಆಧಾರದ ಮೇಲೆ ನಿರ್ಧಾರವಾಗುತ್ತದೆ.

1. EWS (Economically Weaker Section)

  • ವಾರ್ಷಿಕ ಆದಾಯ: ₹3 ಲಕ್ಷಕ್ಕಿಂತ ಕಡಿಮೆ
  • ಬಡ್ಡಿ ಸಬ್ಸಿಡಿ: 6.5%
  • ಸಾಲ ಮಿತಿ: ₹6 ಲಕ್ಷ
  • ಗರಿಷ್ಠ ಸಬ್ಸಿಡಿ: ₹2.67 ಲಕ್ಷ

2. LIG (Low Income Group)

  • ವಾರ್ಷಿಕ ಆದಾಯ: ₹3 ಲಕ್ಷ – ₹6 ಲಕ್ಷ
  • ಬಡ್ಡಿ ಸಬ್ಸಿಡಿ: 6.5%
  • ಸಾಲ ಮಿತಿ: ₹6 ಲಕ್ಷ

3. MIG-I (Middle Income Group-1)

  • ವಾರ್ಷಿಕ ಆದಾಯ: ₹6 ಲಕ್ಷ – ₹12 ಲಕ್ಷ
  • ಬಡ್ಡಿ ಸಬ್ಸಿಡಿ: 4%
  • ಸಾಲ ಮಿತಿ: ₹9 ಲಕ್ಷ
  • ಗರಿಷ್ಠ ಸಬ್ಸಿಡಿ: ₹2.35 ಲಕ್ಷ

4. MIG-II

  • ವಾರ್ಷಿಕ ಆದಾಯ: ₹12 ಲಕ್ಷ – ₹18 ಲಕ್ಷ
  • ಬಡ್ಡಿ ಸಬ್ಸಿಡಿ: 3%
  • ಸಾಲ ಮಿತಿ: ₹12 ಲಕ್ಷ
  • ಗರಿಷ್ಠ ಸಬ್ಸಿಡಿ: ₹2.67 ಲಕ್ಷ

PMAY Loan ಸಬ್ಸಿಡಿ ಹೇಗೆ ಲೆಕ್ಕ ಹಾಕುವುದು ?

ಉದಾಹರಣೆ: ಒಬ್ಬರು ₹6 ಲಕ್ಷ ಗೃಹ ಸಾಲ ಪಡೆದರೆ ಮತ್ತು ಅವರು EWS ವರ್ಗಕ್ಕೆ ಸೇರಿದ್ದರೆ,

  • ಬಡ್ಡಿ ಸಬ್ಸಿಡಿ: 6.5%
  • ಒಟ್ಟು ಉಳಿತಾಯ: ಸುಮಾರು ₹2.67 ಲಕ್ಷ

ಈ ಸಬ್ಸಿಡಿ ಮೊತ್ತ ಸಾಲದ ಮೂಲ ಮೊತ್ತದಿಂದ ಕಡಿತವಾಗುತ್ತದೆ, ಇದರಿಂದ EMI ಕಡಿಮೆಯಾಗುತ್ತದೆ

PMAY Loan 2026 ಅರ್ಜಿ ಹೇಗೆ ಸಲ್ಲಿಸುವುದು ?

ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಬಹಳ ಸುಲಭವಾಗಿದೆ. ಅರ್ಜಿ ಸಲ್ಲಿಸಲು ಕೆಳಗಿನ ಲೇಖನವನ್ನು ಅನುಸರಿಸಿ.

  • ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಗೆ ಭೇಟಿ ನೀಡಿ.
  • ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
  • ಆಧಾರ್ ದೃಢೀಕರಣ ಮಾಡಿ.
  • ಆದಾಯ ಮತ್ತು ಸಾಲದ ವಿವರ ಸಲ್ಲಿಸಿ.
  • ಬ್ಯಾಂಕ್ ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತದೆ. ನಂತರ ನಿಮ್ಮ ಅರ್ಜಿಯನ್ನು ಕೇಂದ್ರದ ಏಜೆನ್ಸಿಗೆ ಕಳಿಸಲಾಗುತ್ತದೆ.
  • ಸಾಮಾನ್ಯವಾಗಿ 15 ರಿಂದ 30 ದಿನಗಳ ಬೇಕಾಗಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕೆಳಗೆ ನೀಡಿರುವ ಪ್ರಸಿದ್ಧ ಬ್ಯಾಂಕ್ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

  • State Bank of India
  • HDFC Bank
  • ICICI Bank
  • Bank of Baroda
  • Punjab National Bank
  • Canara Bank

PMAY Loan ಗೆ ಅಗತ್ಯವಾಗಿ ಬೇಕಾಗುವ ದಾಖಲೆಗಳು ?

ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಸಲ್ಲಿಸುವಾಗ ಕೆಳಗಿನ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ.

  • ಅರ್ಜಿದಾರರ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಖಾತೆ ವಿವರ
  • ಮನೆ ಇಲ್ಲ ಎಂಬ ಸ್ವಯಂ ಘೋಷಣೆ ಅರ್ಜಿ
  • ಜಾಗದ ದಾಖಲೆಗಳು

PMAY Loan 2026 : ಸ್ವಂತ ಮನೆ ಖರೀದಿ ಮಾಡಲು ಅಥವಾ ಕಟ್ಟಿಸಲು ಯೋಚಿಸುತ್ತಿದ್ದೀರಾ. ಹಾಗಾದರೆ ಆದಷ್ಟು ಬೇಗ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ. ಈ ಯೋಜನೆ ಮೂಲಕ ನಿಮಗೆ ಮನೆ ನಿರ್ಮಿಸಲು ಸುಮಾರು ₹2.67 ಲಕ್ಷದವರಗೂ ಸಬ್ಸಿಡಿ ದೊರಕುವುದು ಅದು ಕಡಿಮೆ EMI ಬಡ್ಡಿ ದರದಲ್ಲಿ. ಈ ಯೋಜನೆಯ ಕೊನೆಯ ದಿನಾಂಕ ಸರ್ಕಾರ ಇನ್ನು ಆದರೆ ಇದು ಕೇವಲ ಸ್ವಲ್ಪ ದಿನದವರೆಗೂ ಮಾತ್ರ ಈ ಯೋಜನೆ ಇರುತ್ತದೆ. ಈ ಮಾಹಿತಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದೇ ರೀತಿಯ ಸರ್ಕಾರಿ ಯೋಜನೆ ಮತ್ತು ಸರ್ಕಾರಿ ಉದ್ಯೋಗದ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡಿ.

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment