PM Vidyalaxmi Scheme 2026 :  PM ವಿದ್ಯಾಲಕ್ಷ್ಮಿ ಯೋಜನೆ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ ₹10 ಲಕ್ಷ ಶಿಕ್ಷಣ ಸಾಲ, ಕಡಿಮೆ ಬಡ್ಡಿ ದರದಲ್ಲಿ.

By: Dhanya.C Poojari

On: Monday, January 26, 2026 2:41 PM

PM Vidyalaxmi Scheme :  PM ವಿದ್ಯಾಲಕ್ಷ್ಮಿ ಯೋಜನೆ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ ₹10 ಲಕ್ಷ ಶಿಕ್ಷಣ ಸಾಲ, ಕಡಿಮೆ ಬಡ್ಡಿ ದರದಲ್ಲಿ.
---Advertisement---

PM Vidyalaxmi Scheme : ಬಡ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನವಿಲ್ಲದೆ ₹10 ಲಕ್ಷದವರೆಗೆ ಶಿಕ್ಷಣ ಸಾಲ, 3% ಬಡ್ಡಿ ರಿಯಾಯಿತಿ. ಸಂಪೂರ್ಣ ಮಾಹಿತಿ .

PM Vidyalaxmi Scheme : ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ , ನೀವೇನಾದರೂ ಡಾಕ್ಟರ್, ಇಂಜಿನಿಯರ್, ಮ್ಯಾನೇಜ್ಮೆಂಟ್ ಅಥವಾ ಇತರೆ ಉನ್ನತ ವಿದ್ಯಾಭ್ಯಾಸ ಮಾಡುವ ಕನಸು ಇದ್ದರೆ ಆದಷ್ಟು ಬೇಗ ಪ್ರಧಾನ್ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ (PM Vidyalaxmi Scheme) ಅರ್ಜಿಯನ್ನು ಸಲ್ಲಿಸಿ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಸುಮಾರು ₹10 ಲಕ್ಷದವರೆಗೂ ಶಿಕ್ಷಣ ಸಾಲ ಬಹಳ ಕಡಿಮೆ ಬಡ್ಡಿ ದರದಲ್ಲಿ ದೊರಕುವುದು. ಈ ಯೋಜನೆಯ ಮತ್ತೊಂದು ಉಪಯೋಗವೇನೆಂದರೆ ಶಿಕ್ಷಣ ಸಾಲ ಪಡೆಯಲು  ಯಾವುದೇ ರೀತಿಯ ಅಡಮಾನ (mortgage) ಅಂದರೆ ಆಸ್ತಿಯ ಭದ್ರತೆ ಅಗತ್ಯವಿರುವುದಿಲ್ಲ. ಯೋಜನೆಗೆ ಅರ್ಜಿ ಸಲ್ಲಿಸಲು ಈ ಲೇಖನವನ್ನು ಸರಿಯಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

ವಿದ್ಯಾಲಕ್ಷ್ಮಿ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು

  • ಯಾವುದೇ ಅಡಮಾನ ಅಗತ್ಯವಿಲ್ಲ
    ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಆಸ್ತಿ ದಾಖಲೆಗಳನ್ನು ಬ್ಯಾಂಕ್‌ಗೆ ನೀಡುವ ಅಗತ್ಯವಿಲ್ಲ.
  • ₹10 ಲಕ್ಷದವರೆಗೆ ಶಿಕ್ಷಣ ಸಾಲ
    ವಿದ್ಯಾರ್ಥಿಗಳು ತಮ್ಮ ಕೋರ್ಸ್ ಫೀಸ್, ಹಾಸ್ಟೆಲ್, ಪುಸ್ತಕಗಳು ಸೇರಿದಂತೆ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಸಾಲ ಪಡೆಯಬಹುದು.
  •  3% ಬಡ್ಡಿ ರಿಯಾಯಿತಿ
    ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇದ್ದರೆ, ಸಾಲದ ಮೇಲಿನ ಬಡ್ಡಿಯಲ್ಲಿ ಶೇ.3 ರಷ್ಟು ರಿಯಾಯಿತಿ ಸಿಗುತ್ತದೆ.
  • ಪೂರ್ಣ ಬಡ್ಡಿ ಮನ್ನಾ ಸೌಲಭ್ಯ
    ಒಂದು ವೇಳೆ ಕುಟುಂಬದ ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇದ್ದರೆ, ಸರ್ಕಾರವೇ ಸಂಪೂರ್ಣ ಬಡ್ಡಿಯನ್ನು ಭರಿಸುತ್ತದೆ.
  • ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ
    ದೇಶದಾದ್ಯಂತ ಗುರುತಿಸಲ್ಪಟ್ಟ 860+ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.

ಅರ್ಹತೆ 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಅರ್ಹತೆಯನ್ನು ಹೊಂದಿರಬೇಕು 

  • ಅರ್ಜಿದಾರರು ಭಾರತದ ಪ್ರಜೆ ಆಗಿರಬೇಕು 
  • ಮಾನ್ಯತೆ ಪಡೆದ ಉನ್ನತ ಶಿಕ್ಷಣ ಮೆಟ್ರಿಕ್ ಆಧಾರದ ಮೇಲೆ ಪ್ರವೇಶ ಪಡೆದಿರಬೇಕು 
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು 
  • ಇದುಕು ಮುಂಚೆ ಇತರೆ ಯಾವುದೇ ಸರ್ಕಾರಿ ಶಿಕ್ಷಣ ಸಬ್ಸಿಡಿ ಅಥವಾ ಸ್ಕಾಲರ್‌ಶಿಪ್ ಪಡೆದುಕೊಂಡಿರಬಾರದು 

ಅಗತ್ಯ ದಾಖಲೆಗಳು 

  • ಅರ್ಜಿದಾರರ ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ಆದಾಯ ಪ್ರಮಾಣ ಪತ್ರ 
  • ಜಾತಿ ಪ್ರಮಾಣ ಪತ್ರ 
  • ಫೀಸ್ ವಿವರ ಪತ್ರ 
  • ಬ್ಯಾಂಕ್ ಪಾಸ್ ಬುಕ್ 
  • 4 ಪಾಸ್ಪೋರ್ಟ್ ಸೈಜ್ ಫೋಟೋ 
  • ಶೈಕ್ಷಣಿಕ ಪ್ರಮಾಣ ಪತ್ರ 

ಯೋಜನೆ ಅರ್ಜಿ ಹೇಗೆ ಸಲ್ಲಿಸುವುದು ? 

ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಲೇಖನವನ್ನು ಸರಿಯಾಗಿ ಅನುಸರಿಸಿ.

  • ಮೊದಲು ಅಧಿಕೃತ ವೆಬ್‌ಸೈಟ್ pmvidyalaxmi.co.in ಗೆ ಭೇಟಿ ನೀಡಿ
  • “Student Registration” ಆಯ್ಕೆಮಾಡಿ. ಹೊಸದಾಗಿ ಲೋಗಿನ್ ಮಾಡಿಕೊಳ್ಳಿ. 
  • ಲಾಗಿನ್ ಆದ ನಂತರ “Apply for Education Loan” ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಕೇಳುವ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. 
  • ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳ ಪಟ್ಟಿ ಮೇಲೆ ನೀಡಲಾಗಿದೆ. 
  • ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. 

ಗಮನಿಸಿ : ಅರ್ಜಿ ಸಲ್ಲಿಸಲು ನಿಮಗೆ ಸ್ವತಹ ಬರದಿದ್ದರೆ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಎಲ್ಲವೂ ಕೂಡ ತೆಗೆದುಕೊಂಡು ಹೋಗಿ.

PM Vidyalaxmi Scheme : ಯಾರೆಲ್ಲ ಡಾಕ್ಟರ್, ಇಂಜಿನಿಯರ್, ಮ್ಯಾನೇಜ್ಮೆಂಟ್, ಅಥವಾ ಇತರೆ ಉನ್ನತ ವಿದ್ಯಾಭ್ಯಾಸ ಮಾಡಲು ಆಸೆ ನಿಮಗಿದ್ದರೆ, ನಿಮಗೆ ಹಣಕಾಸಿನ ತೊಂದರೆ ಎದುರಾದರೆ, ತಡ ಮಾಡದೆ ಈ ಕೇಂದ್ರ ಸರ್ಕಾರ ಯೋಜನೆಯದ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಕೊನೆಯ ದಿನಾಂಕ ಸೂಚಿಸಿಲ್ಲ. ಆದರೆ ಈ ಯೋಜನೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

FAQ – ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ 

ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ಎಂದರೇನು?

ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ (PM Vidyalaxmi Scheme) ಕೇಂದ್ರ ಸರ್ಕಾರದ ಶಿಕ್ಷಣ ಸಾಲ ಯೋಜನೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನವಿಲ್ಲದೆ ₹10 ಲಕ್ಷದವರೆಗೆ ಶಿಕ್ಷಣ ಸಾಲ ನೀಡುತ್ತದೆ.

ವಿದ್ಯಾಲಕ್ಷ್ಮಿ ಯೋಜನೆಯಡಿ ಗರಿಷ್ಠ ಎಷ್ಟು ಸಾಲ ಸಿಗುತ್ತದೆ?

ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ₹10 ಲಕ್ಷದವರೆಗೆ ಶಿಕ್ಷಣ ಸಾಲ ಪಡೆಯುವ ಅವಕಾಶವಿದೆ.

ಈ ಯೋಜನೆಗೆ ಬಡ್ಡಿ ರಿಯಾಯಿತಿ ಇದೆಯೇ?

ಹೌದು.

  • ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇದ್ದರೆ 3% ಬಡ್ಡಿ ರಿಯಾಯಿತಿ
  • ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಪೂರ್ಣ ಬಡ್ಡಿ ಮನ್ನಾ ಸೌಲಭ್ಯ ಲಭ್ಯವಿದೆ.
Share

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ರಾಜ್ಯ ಸುದ್ದಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment