Bele Parihara Amount 2026 : 2025-26 ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ ಆಗಿದೆ. ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Bele Parihara Amount 2026 : 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆ, ಮತ್ತು ಪ್ರಕೃತಿ ವಿಕೋಪದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ಬೆಳೆಗೆ ಭಾರಿ ಹಾನಿ ಉಂಟಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಒಟ್ಟಾಗಿ ಸೇರಿ ಬೆಳೆ ಹಾನಿ ಪರಿಹಾರ (Bele Parihara Yojane) ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (Bele Vime Yojane) ಅಡಿಯಲ್ಲಿ ರೈತರಿಗೆ ಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಸರ್ಕಾರ ಘೋಷಿಸಿದ್ದಾರೆ.
Also Read :- UIDAI Recruitment 2026 : ಬೆಂಗಳೂರು ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ! – ವೇತನ ₹2,15,900,
Bele Parihara Amount 2026 : ಆದರೆ ಅನೇಕ ರೈತರಿಗೆ ಪರಿಹಾರದ ಹಣ ಜಮಾ ಆಗಿದೆಯೇ ಎಂದು ನೋಡಲು ಬರುವುದಿಲ್ಲ. ಇದಕ್ಕಾಗಿ ನಾವು ಈ ಲೇಖನದಲ್ಲಿ ನಿಮ್ಮ ಬೆಳೆ ಪರಿಹಾರದ ಹಣ ಹೇಗೆ ನೋಡುವುದು ಮತ್ತು ಸ್ಟೇಟಸ್ ಚೆಕ್ ಮಾಡುವುದು, ಅರ್ಜಿ ಸಲ್ಲಿಸು ವಿಧಾನ, ಮುಂತಾದ ಮುಖ್ಯ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ.
ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ – ವ್ಯತ್ಯಾಸ ಏನು?
Bele Hani Parihara (ಬೆಳೆ ಹಾನಿ ಪರಿಹಾರ ಯೋಜನೆ)
- ಇದು ಸರ್ಕಾರದ ಪರಿಹಾರ ಯೋಜನೆ
- NDRF / SDRF ಮಾರ್ಗಸೂಚಿಗಳನ್ವಯ ಪರಿಹಾರ
- ಬೆಳೆ ಹಾನಿಯಾದ ನಂತರ ಗ್ರಾಮ ಲೆಕ್ಕಾಧಿಕಾರಿ / ಕಂದಾಯ ಇಲಾಖೆ ಮೂಲಕ ಅರ್ಜಿ
- ಯಾವುದೇ ಪ್ರಿಮಿಯಂ ಪಾವತಿ ಅಗತ್ಯವಿಲ್ಲ
- ಹಾನಿ ಪ್ರಮಾಣದ ಆಧಾರದಲ್ಲಿ ಹಣ ಜಮಾ
Bele Vime Yojane (ಬೆಳೆ ವಿಮೆ ಯೋಜನೆ)
- ರೈತರು ಪ್ರಿಮಿಯಂ ಪಾವತಿ ಮಾಡಿ ವಿಮೆ ಮಾಡಿಸಬೇಕು
- ಹಂಗಾಮಿನ ಆರಂಭದಲ್ಲೇ ವಿಮೆ ಕಡ್ಡಾಯ
- ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ವಿಮಾ ಕಂಪನಿಯಿಂದ ಪರಿಹಾರ
- ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ಜಾರಿಗೆ
Bele Parihara Amount – ಪ್ರತಿ 2.5 ಎಕರೆಗೆ ಎಷ್ಟು ಪರಿಹಾರ?
2025-26ನೇ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿರುವ ಬೆಳೆ ಹಾನಿ ಪರಿಹಾರದ ಮೊತ್ತ:
- ಮಳೆಯಾಶ್ರಿತ ಬೆಳೆಗಳಿಗೆ – ₹17,000
- ನೀರಾವರಿ ಬೆಳೆಗಳಿಗೆ – ₹25,500
- ಬಹುವಾರ್ಷಿಕ ಬೆಳೆಗಳಿಗೆ – ₹25,500
ಈ ಮೊತ್ತವನ್ನು 2.5 ಎಕರೆ ಆಧಾರದಲ್ಲಿ ಲೆಕ್ಕ ಹಾಕಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
Bele Parihara – ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ವಿಧಾನ ?
- ಮೊದಲಿಗೆ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿ.
- ಬೆಳೆ ಹಾನಿಯಾದ ಜಮೀನಿನ ಫೋಟೋ
- RTC, ಆಧಾರ್, ಬ್ಯಾಂಕ್ ವಿವರಗಳು.
- ಅಲ್ಲಿಯೇ ಅರ್ಜಿ ಫಾರಂ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
- ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ DBT ಮೂಲಕ ನಿಮ್ಮ ಹಣ ವರ್ಗಾವಣೆ ಮಾಡಲಾಗುತ್ತದೆ.
Bele Vime – ಬೆಳೆ ವಿಮೆ ಮಾಡಿಸೋದು ಹೇಗೆ?
- ಮೊದಲು ನಿಮ್ಮ ಹತ್ತಿರದ ಗ್ರಾಮವನ್/ ಬ್ಯಾಂಕ್/ CSC ಕೇಂದ್ರಕ್ಕೆ ಭೇಟಿ ನೀಡಿ.
- ಪ್ರತಿ ಹಂಗಾಮಿನ ಆರಂಭದಲ್ಲಿ (ಮುಂಗಾರು – ಜೂನ್/ಜುಲೈ)
- ನಿಗದಿತ ಪ್ರಿಮಿಯಂ ಪಾವತಿ
- ಬೆಳೆ ವಿಮೆ ನೋಂದಣಿ ಕಡ್ಡಾಯ!
ಮೊಬೈಲ್‌ನಲ್ಲೇ ಬೆಳೆ ಪರಿಹಾರದ ಹಣ ಚೆಕ್ ಮಾಡುವ ವಿಧಾನ ? – Crop Loss Status
- ಕಂದಾಯ ಇಲಾಖೆಯ ಅಧಿಕೃತ Parihara ಪೋರ್ಟಲ್ ಗೆ ಭೇಟಿ
- ವರ್ಷ, ಹಂಗಾಮು, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ
- “ವರದಿ ಪಡೆಯಿರಿ” ಕ್ಲಿಕ್ ಮಾಡಿ
- ನಿಮ್ಮ ಹಳ್ಳಿಯಲ್ಲಿ ಯಾರಿಗೆ ಹಣ ಜಮಾ ಆಗಿದೆ ಎಂಬ ಪಟ್ಟಿ ಕಾಣುತ್ತದೆ
ಬೆಳೆ ವಿಮೆ ಹಣ ಚೆಕ್ ಮಾಡುವ ವಿಧಾನ ? – Crop Insurance Status
- Samrakshane ಪೋರ್ಟಲ್ ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ವರ್ಷ ಮತ್ತು ಹಂಗಾಮು ಆಯ್ಕೆ ಮಾಡಿ
- Farmers → Check Status ಕ್ಲಿಕ್
- ಮೊಬೈಲ್ ನಂಬರ್ ನಮೂದಿಸಿ
- ಅರ್ಜಿ ಸ್ಥಿತಿ ಮತ್ತು UTR ವಿವರ ನೋಡಿ
Also Read :- Cow Farming Subsidy 2026 : ಹಸು ಸಾಕಾಣಿಕೆಗೆ ಸರ್ಕಾರಿ ಸಬ್ಸಿಡಿ | ವರ್ಷಕ್ಕೆ ₹21,500 ಆದಾಯ
ಮುಖ್ಯ ಸೂಚನೆ : ಪರಿಹಾರದ ಹಣ ಹಂತ ಹಂತವಾಗಿ ರೈತರ ಖಾತೆಗೆ ಜಮಾಡಲಾಗುತ್ತದೆ. ಸರ್ಕಾರ ಘೋಷಿಸಿದಂತೆ ಬೆಳೆ ಪರಿಹಾರ ಹಣವು ಸ್ವಲ್ಪ ವಿಳಂಬವಾಗುವ ಸಾಧ್ಯತೆ. ಬಹು ಮುಖ್ಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
Bele Parihara Amount 2026 : 2025-26ನೇ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಹಣ ಈಗಾಗಲೇ ಅನೇಕ ರೈತರಿಗೆ ಜಮಾ ಆಗುತ್ತಿದೆ. ಇನ್ನು ಕೂಡ ಜಮಾ ಆಗದ ರೈತರು ಮೇಲ್ಕಂಡ ವಿವರಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
FAQ
1. ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಒಂದೇನಾ?
ಉತ್ತರ: ಇಲ್ಲ. ಬೆಳೆ ಹಾನಿ ಪರಿಹಾರವು ಸರ್ಕಾರ ನೀಡುವ ಸಹಾಯಧನವಾಗಿದ್ದು, ಬೆಳೆ ವಿಮೆ ಯೋಜನೆಗೆ ರೈತರು ಪ್ರಿಮಿಯಂ ಪಾವತಿ ಮಾಡಿ ನೋಂದಣಿ ಮಾಡಿಸಬೇಕು.
2. 2025-26 ಬೆಳೆ ಹಾನಿ ಪರಿಹಾರದ ಹಣ ಎಷ್ಟು ನೀಡಲಾಗುತ್ತಿದೆ?
ಉತ್ತರ:
- ಮಳೆಯಾಶ್ರಿತ ಬೆಳೆ – ₹17,000
- ನೀರಾವರಿ ಬೆಳೆ – ₹25,500
- ಬಹುವಾರ್ಷಿಕ ಬೆಳೆ – ₹25,500 (ಪ್ರತಿ 2.5 ಎಕರೆ)
3. ಬೆಳೆ ಪರಿಹಾರದ ಹಣ ಖಾತೆಗೆ ಜಮಾ ಆಗಿದೆಯೇ ಎಂದು ಹೇಗೆ ಚೆಕ್ ಮಾಡುವುದು?
ಉತ್ತರ: ರೈತರು ಕಂದಾಯ ಇಲಾಖೆಯ ಅಧಿಕೃತ Parihara ಪೋರ್ಟಲ್ ಮೂಲಕ ಮೊಬೈಲ್‌ನಲ್ಲೇ ತಮ್ಮ ಗ್ರಾಮವಾರು ಬೆಳೆ ಪರಿಹಾರದ ವಿವರವನ್ನು ಪರಿಶೀಲಿಸಬಹುದು.
















