NCBS Recruitment 2026 : ಬೆಂಗಳೂರಿನಲ್ಲಿ ಡಿಗ್ರಿ ಆದವರಿಗೆ ಆಡಳಿತ ಸಹಾಯಕ ಹುದ್ದೆ. ಅರ್ಜಿ ಶುಲ್ಕ ಇಲ್ಲ, 50 ವರ್ಷದವರೆಗೂ ಅವಕಾಶ. ಕೊನೆಯ ದಿನ 10 ಜನವರಿ 2026.
ಬೆಂಗಳೂರು ನಗರದಲ್ಲೇ ಒಂದು ಪ್ರತಿಷ್ಠಿತ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ವೈಟ್ ಕಾಲರ್ ಕೆಲಸ (Office Job) ಮಾಡುವ ಕನಸು ನಿಮ್ಮದಾ? ಹಾಗಾದರೆ ಈ ಸುದ್ದಿ ನಿಮ್ಮಿಗಾಗಿ.ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS) ಈ ಸಂಸ್ಥೆ ಇದೀಗ (Administrative Assistant) ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತಿದ್ದಾರೆ. ಈ ಹುದ್ದೆಯ ವಿಶೇಷವೇನೆಂದರೆ ಈ ನೇಮಕಾತಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ ಮತ್ತು 50 ವರ್ಷದವರೆಗಿನ ಅಭ್ಯರ್ಥಿಗಳನ್ನು ಕೂಡ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಹತೆ ಮತ್ತು ಮುಖ್ಯ ದಿನಾಂಕಗಳು, ಮತ್ತಷ್ಟು ಮುಖ್ಯ ಮಾಹಿತಿ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.
NCBS Recruitment – ಪ್ರಮುಖ ಮಾಹಿತಿ
| ವಿವರ | ಮಾಹಿತಿ |
| ಸಂಸ್ಥೆಯ ಹೆಸರು | ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS) |
| ಹುದ್ದೆ | ಆಡಳಿತ ಸಹಾಯಕ (Administrative Assistant) |
| ಕೆಲಸದ ಸ್ಥಳ | ಬೆಂಗಳೂರು, ಕರ್ನಾಟಕ |
| ವಿದ್ಯಾರ್ಹತೆ | ಯಾವುದೇ ಪದವಿ (Any Degree) |
| ಅರ್ಜಿ ಶುಲ್ಕ | ಇಲ್ಲ (Free Application) |
| ಅರ್ಜಿ ಸಲ್ಲಿಸಲು ಕೊನೆಯ ದಿನ | 10 ಜನವರಿ 2026 |
ಯಾರು ಅರ್ಜಿ ಸಲ್ಲಿಸಬಹುದು ?
ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ಪದವಿ ಪೂರ್ಣಗೊಳಿಸಿರಬೇಕು. (BA, B.Com, B.Sc, BBA, BCA ಸೇರಿದಂತೆ ಎಲ್ಲಾ ಡಿಗ್ರಿಗಳಿಗೆ ಅವಕಾಶ ಇದೆ)
ವಯೋಮಿತಿ
ಈ ನಿಮಗತಿಯಲ್ಲಿ ನಿಮಗೆ ಕನಿಷ್ಠ 21 ರಿಂದ 50 ವರ್ಷದ ಒಳಗಿನ ಅಭ್ಯರ್ಥಿಯು ಸಹ ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ
ಈ ಹುದ್ದೆಯಲ್ಲಿ ಅಭ್ಯರ್ಥಿಗಳಿಗೆ 21,700 ರಿಂದ 25,500 ರವರೆಗೆ ಮೂಲವೇತನ ಸಿಗುತ್ತದೆ ಹಾಗೂ ಸರ್ಕಾರಿ ನೌಕರರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಹ ಈ ನೇಮಕಾತಿಯಲ್ಲಿ ಸಿಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?
NCBS ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ಒಳಗೊಂಡಿದೆ. ಮೊದಲನೆಯದು ಲಿಖಿತ ಪರೀಕ್ಷೆ ಹಾಗೂ ಎರಡನೆಯದು ಸಂದರ್ಶನ.
- ಲಿಖಿತ ಪರೀಕ್ಷೆ (MCQ) : ಈ ಹಂತದಲ್ಲಿ ಅಭ್ಯರ್ಥಿಗ ಸಾಮಾನ್ಯ ಜ್ಞಾನ, ಇಂಗ್ಲಿಷ್, ಕಂಪ್ಯೂಟರ್ ಪರೀಕ್ಷೆ, ಟೈಪಿಂಗ್ ಟೆಸ್ಟ್, ಮತ್ತು ಇತರೆ ಸ್ಕಿಲ್ ಪರೀಕ್ಷೆ ನಡೆಸುತ್ತಾರೆ.
- ಸಂದರ್ಶನ : ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಕರೆಯುತ್ತಾರೆ ಇದರಲ್ಲಿ ಅಭ್ಯರ್ಥಿಯ ದಾಖಲೆ ಪರಿಶೀಲನೆ ಮತ್ತು ಸಂದರ್ಶನ ನಡೆಸುತ್ತಾರೆ.
ಅರ್ಜಿ ಶುಲ್ಕವೆಷ್ಟು ?
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ. ಇದು ಸಂಪೂರ್ಣ ಎಲ್ಲರಿಗೂ ಸಹ ಉಚಿತವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply)
ಈ ನೇಮಕಾತಿಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಕೆಳಗಿನ ಲೇಖನದಲ್ಲಿದೆ.
- NCBS ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – www.ncbs.res.in
- ‘Careers / Job Openings’ ವಿಭಾಗ ಆರಿಸಿಕೊಳ್ಳಿ
- Administrative Assistant Recruitment 2026 ಅಧಿಸೂಚನೆ ಕ್ಲಿಕ್ ಮಾಡಿ
- ಸಂಪೂರ್ಣ ಅಧಿಸೂಚನೆ ಓದಿ
- Apply Online ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
- ಅರ್ಜಿ ಸಲ್ಲಿಸಿದ ನಂತರ ಫಾರ್ಮ್ ಪ್ರಿಂಟ್ ತೆಗೆದುಕೊಳ್ಳಿ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ?
ಈ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜನವರಿ 10 /2026 ರಂದು ಅರ್ಜಿ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಿ.
ಈಗಷ್ಟೇ ಪದವಿ ಮುಗಿಸಿ ಬೆಂಗಳೂರು ನಗರದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಆಸೆ ಇದ್ದರೆ ಆದಷ್ಟು ಬೇಗ ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿ. ಈ ನೇಮಕಾತಿ ಪ್ರಕ್ರಿಯೆಯು ಜನವರಿ 10/2026 ಈ ದಿನಾಂಕದಂದು ಮುಕ್ತಾಯಗೊಳ್ಳುತ್ತದೆ. ಅರ್ಜಿ ಸಲ್ಲಿಸುವ ಲಿಂಕ್ ಕೆಳಗೆ ನೀಡಲಾಗಿದೆ.
ಅಧಿಕೃತ ವೆಬ್‌ಸೈಟ್ ಲಿಂಕ್ : Click Here
(FAQ)
- NCBS ಗೆ ಅರ್ಜಿ ಶುಲ್ಕ ಇದೆಯೇ?
- ಇಲ್ಲ. NCBS ಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಅಭ್ಯರ್ಥಿಗಳು ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಯಾವ ವಿದ್ಯಾರ್ಹತೆ ಇದ್ದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು?
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Any Degree) ಪೂರ್ಣಗೊಳಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
- NCBS ಆಡಳಿತ ಸಹಾಯಕ ಹುದ್ದೆಗೆ ವಯೋಮಿತಿ ಎಷ್ಟು?
- ಈ ನೇಮಕಾತಿಗೆ ಗರಿಷ್ಠ 50 ವರ್ಷದವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದು ಹಿರಿಯ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
- NCBS ಗೆ ಕೆಲಸದ ಸ್ಥಳ ಎಲ್ಲಿ?
- ಆಡಳಿತ ಸಹಾಯಕ ಹುದ್ದೆಯ ಕೆಲಸದ ಸ್ಥಳ ಬೆಂಗಳೂರು, ಕರ್ನಾಟಕ ಆಗಿರುತ್ತದೆ.
- NCBS ಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?
- NCBS ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ 10 ಜನವರಿ 2026 ಆಗಿದೆ.

















