NHAI Recruitment 2026 : ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ! 

karnatakasuddi.com

By: Karnataka Suddi

On: Tuesday, December 23, 2025 3:24 PM

NHAI Recruitment 2026 : ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ! 
| Follow Us |

NHAI Recruitment 2026 : 30 ಮ್ಯಾನೇಜರ್ (Technical) ಹುದ್ದೆಗಳಿಗಾಗಿ ಅರ್ಜಿ ಆಹ್ವಾನ. ವೇತನ ₹67,700–2,08,700. ಅರ್ಜಿ ದಿನಾಂಕ 21-01-2026. ಇದೀಗ ಅರ್ಜಿ ಸಲ್ಲಿಸಿ!

NHAI Recruitment 2026 : ನಮಸ್ತೆ ಸ್ನೇಹಿತರೆ, ನೀವು ಸಿವಿಲ್ ಇಂಜಿನಿಯರಿಂಗ್ ಪದವಿದ್ದಾರರೇ ? ಅಥವಾ ಸರ್ಕಾರದ ಪ್ರತಿಷ್ಟ ಸಂಸ್ಥೆಯಲ್ಲಿ ಕೆಲಸ ಮಾಡುವ ಆಸೆ ಇದ್ದರೆ ನಿಮಗಾಗಿಯೇ ಸರ್ಕಾರ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಿದ್ದಾರೆ. ಈ ಹುದ್ದೆ ಪಡೆಯಲು ನೀವು ಸಿವಿಲ್ ಇಂಜಿನಿಯರಿಂಗ್ ಪದವಿ ಹೊಂದಿರಬೇಕು. ಹಾಗೂ ಈ ಸಂಸ್ಥೆಯಲ್ಲಿ ಒಟ್ಟು 30 ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

ಈ ಲೇಖನದಲ್ಲಿ NHAI Recruitment 2026 ಹುದ್ದೆಯ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ವೇತನ, ಮತ್ತು ಮುಖ್ಯ ದಿನಾಂಕಗಳನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲೇಖನವನ್ನು ಸರಿಯಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

NHAI ಮ್ಯಾನೇಜರ್ ಹುದ್ದೆಗಳ ವಿವರಗಳು

ಹುದ್ದೆಯ ಹೆಸರುಮ್ಯಾನೇಜರ್ (Technical)
ಹುದ್ದೆಗಳ ಸಂಖ್ಯೆ30
ವಯೋಮಿತಿಗರಿಷ್ಠ 56 ವರ್ಷ
ಶೈಕ್ಷಣಿಕ ಅರ್ಹತೆಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ (BE/B.Tech) ಪದವಿ
ಮಾಸಿಕ ಸಂಬಳ₹67,700 – ₹2,08,700
ಕೆಲಸದ ಸ್ಥಳಭಾರತದಾದ್ಯಾಂತ (All India)
ಅರ್ಜಿ ಶುಲ್ಕಉಚಿತ (No Fee)

ಅರ್ಜಿ ಸಲ್ಲಿಸುವ ವಿಧಾನ 

NHAI ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಲೇಖನವನ್ನು ಸರಿಯಾಗಿ ಅನುಸರಿಸಿ 

  • ಮೊದಲು ಅಧಿಕೃತ ವೆಬ್ಸೈಟ್ಗೆ https://nhai.gov.in/ ಭೇಟಿ ನೀಡಿ 
  • ಹೊಸ ಬಳಕೆದಾರರಾದರೆ ನಿಮ್ಮ ಇಮೇಲ್ ಮತ್ತು ಮೊಬೈಲ್ ನಂಬರ್ ಬಳಸಿ ಲಾಗಿನ್ ಮಾಡಿಕೊಳ್ಳಿ.
  • ನಂತರ ಲಿ ಮ್ಯಾನೇಜರ್ (Technical) ಅಧಿಸೂಚನೆ ಕ್ಲಿಕ್ ಮಾಡಿ
  • ನಂತರ ಆನ್ಲೈನಲ್ಲಿ ನಿಮ್ಮ ವೈಯಕ್ತಿಕ ವಿವರಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ. 
  • ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ 
  • ಅಪ್ಲೋಡ್ ಮಾಡಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ ಮತ್ತು ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಿ. 
  • ವಿಳಾಸ:
    DGM (HR/Admn)-III A,
    National Highways Authority of India,
    Plot No. G5- & 6, Sector-10, Dwarka,
    New Delhi-110075.

ಗಮನಿಸಿ: ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ ಹಾರ್ಡ್ ಕಾಪಿಯನ್ನು ಸಮಯಕ್ಕೆ ಕಳುಹಿಸಬೇಕು.

ಅಗತ್ಯ ದಾಖಲೆಗಳ ?

ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಅಗತ್ಯವಾಗಿ ಬೇಕಾಗುತ್ತದೆ. 

  • ಅರ್ಜಿದಾರರ ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ಅಭ್ಯರ್ಥಿಯ ಪದವಿ ಪ್ರಮಾಣ ಪತ್ರ 
  • ಶೈಕ್ಷಣಿಕ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ 
  • (Experience Certificate) ಹಳೆಯ ಉದ್ಯೋಗದ ಅನುಭವ ಪ್ರಮಾಣ ಪತ್ರ ಅಗತ್ಯವಿದ್ದರೆ. 
  • ರಜೀಮ್ ಅಥವಾ ಸಿವಿ 
  • ಜಾತಿ ಪ್ರಮಾಣ ಪತ್ರ , ಎಲ್ಲಾ ದಾಖಲೆಗಳನ್ನು PDF / JPG / PNG ಫಾರ್ಮ್ಯಾಟ್‌ನಲ್ಲಿ ಸಿದ್ಧಪಡಿಸಿ.

ಆಯ್ಕೆ ವಿಧಾನ 

ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಒಟ್ಟು ಎರಡು ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. 

  • ಲಿಖಿತ ಪರೀಕ್ಷೆ (Written Test) : ಈ ಹಂತಗಳಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಮತ್ತು ಸಿವಿಲ್ ಇಂಜಿನಿಯರಿಂಗ್ ಸಂಬಂಧ ಪ್ರಶ್ನೆಗಳನ್ನು ಕೇಳಲಾಗುತ್ತದೆ. 
  • ಸಂದರ್ಶನ (Interview) : ಈ ಹಂತದಲ್ಲಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಇದರಲ್ಲಿ ಅಭ್ಯರ್ಥಿಯ ಸಾಮರ್ಥ್ಯ ಮತ್ತು ದಾಖಲೆ ಪರಿಶೀಲನೆ ನಡೆಸುತ್ತಾರೆ. 

ವಯೋಮಿತಿ 

NHAI ಮ್ಯಾನೇಜರ್ ಹುದ್ದೆಗೆ ವಯೋಮಿತಿಯು NAHI ಸಂಸ್ಥೆಯು ಸೂಚಿಸಿಲ್ಲ ಆದರೆ ಗರಿಷ್ಠ ವಯೋಮಿತಿ 56 ವಯಸ್ಸಿನ ನಡುವೆ ಇರಬೇಕು. ಕನಿಷ್ಠ ನೋಡಲು ಈ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಪರಿಶೀಲಿಸಬಹುದು.

ಮುಖ್ಯ ದಿನಾಂಕಗಳು 

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಹಾಗೂ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/1/2026 ರಂದು ಮುಕ್ತಾಯಗೊಳ್ಳುತ್ತದೆ. ಹಾಗೂ ಹಾರ್ಡ್ ಕಾಪಿ ತಲುಪಿಸಲು ಕೊನೆಯ ದಿನ 20-02-2026. ಮಾತ್ರ ಅವಕಾಶವಿದೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

ವೇತನ ಶ್ರೇಣಿ 

NHAI ಮ್ಯಾನೇಜರ್ ಹುದ್ದೆ 67,700 ರಿಂದ 2,08,700 ರೂಪಾಯಿಗಳ ಮಧ್ಯೆ ವೇತನ ಪಡೆಯುತ್ತಾರೆ. ಇದರ ಜೊತೆಯಲ್ಲಿ ಕೇಂದ್ರ ಸರ್ಕಾರದ ಇತರೆ ಲಾಭಗಳು ಕೂಡ ಇರುತ್ತದೆ.

NHAI Recruitment 2026 : ನೀವೇನಾದ್ರೂ ಸಿವಿಲ್ ಇಂಜಿನಿಯರಿಂಗ್ ವೃತ್ತಿಯಲ್ಲಿ ಮುಂದುವರೆಯುವ ಕನಸು ಕಾಣುತ್ತಿದ್ದರೆ ಅಥವಾ ಸರ್ಕಾರದ ಉನ್ನತ ಹುದ್ದೆಗೆ ಹೋಗುವ ಆಸೆ ನಿಮಗಿದ್ದರೆ ಆದಷ್ಟು ಬೇಗ ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯಲ್ಲಿ ಒಟ್ಟು ಖಾಲಿ ಇರುವ 30 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕತಿಯ ಇನ್ನು ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಿ. ಅರ್ಜಿ ಅದು ಸೂಚನೆ ಹಾಗೂ ಅಪ್ಲೈ ಮಾಡುವ ಲಿಂಕ್ ಕೆಳಗೆ ನೀಡಲಾಗಿದೆ. 

ಹುದ್ದೆಗೆ ಸಂಬಂಧಿಸಿದ ಪ್ರಮುಖ ಲಿಂಕ್‌ಗಳು 

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment