IOCL Recruitment 2025 : IOCL ಸಂಸ್ಥೆಯಲ್ಲಿ ಖಾಲಿ ಇರುವ 2776 ಹುದ್ದೆಗಳಿಗೆ ಅರ್ಜಿ ಆಹ್ವಾನ!

karnatakasuddi.com

By: Karnataka Suddi

On: Friday, December 5, 2025 2:46 PM

IOCL Recruitment 2025 : IOCL ಸಂಸ್ಥೆಯಲ್ಲಿ ಖಾಲಿ ಇರುವ 2776 ಹುದ್ದೆಗಳಿಗೆ ಅರ್ಜಿ ಆಹ್ವಾನ!
| Follow Us |

IOCL Recruitment 2025 : 2756 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ! 

IOCL Recruitment 2025 : ದೇಶದ ಪ್ರಮುಖ ತೈಲ ಕಂಪನಿಗಳಲ್ಲಿ “ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ” IOCL ಇದು ಕೂಡ ಒಂದು. ಈ ಕಂಪನಿಯು ದೇಶದ ಶಕ್ತಿ ಮತ್ತು ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೀಗ ಈ ಸಂಸ್ಥೆಯು ಖಾಲಿ ಇರುವ 2756 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಬಹುದು. 

Also Read :-  Chief Minister Raitha Vidya Nidhi ಯೋಜನೆ ರೈತರ ಮಕ್ಕಳಿಗೆ ₹ 11,000 ವರೆಗೆ ಸ್ಕಾಲರ್ಶಿಪ್ ಸೌಲಭ್ಯ.

IOCL Recruitment 2025 : ಖಾಲಿ ಇರುವ ಹುದ್ದೆಗಳು ಮತ್ತು ಶಿಕ್ಷಣ ಅರ್ಹತೆಗಳು ?

IOCL Recruitment 2025 ನೇ ಸಾಲಿನ ನೇಮಕಾತಿಯಲ್ಲಿ ವಿವಿಧ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉದಾಹರಣೆ 12ನೇ ತರಗತಿ, ITI , ಡಿಪ್ಲೋಮೋ, ಅಥವಾ ಪದವಿ ಅರ್ಜಿಯನ್ನು ಸಲ್ಲಿಸಬಹುದು. 

1. ಟ್ರೇಡ್ ಅಪ್ರೆಂಟಿಸ್ – ಅಟೆಂಡೆಂಟ್ ಆಪರೇಟರ್:

  • ಅರ್ಹತೆ: B.Sc (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಅಥವಾ ಇಂಡಸ್ಟ್ರಿಯಲ್ ಕೆಮಿಸ್ಟ್ರಿ).
  • ಪ್ರಾಮುಖ್ಯತೆ: ರಿಫೈನರಿ ಆಪರೇಷನ್ಸ್ ನಲ್ಲಿ ಪ್ರಾಯೋಗಿಕ ತರಬೇತಿ ಪಡೆಯುವ ಅವಕಾಶ.

2. ಟೆಕ್ನಿಷಿಯನ್ ಅಪ್ರೆಂಟಿಸ್:

  • ಅರ್ಹತೆ: ಎಂಜಿನಿಯರಿಂಗ್ ಡಿಪ್ಲೊಮಾ (ಯಾಂತ್ರಿಕ, ವಿದ್ಯುತ್, ರಾಸಾಯನಿಕ, ಇನ್ಸ್ಟ್ರುಮೆಂಟೇಶನ್, ಎಲೆಕ್ಟ್ರಾನಿಕ್ಸ್).
  • ಪ್ರಾಮುಖ್ಯತೆ: ತಾಂತ್ರಿಕ ನಿರ್ವಹಣೆ ಮತ್ತು ಉಪಕರಣಗಳ ಬಗ್ಗೆ ನೇರ ತರಬೇತಿ.

3. ಟ್ರೇಡ್ ಅಪ್ರೆಂಟಿಸ್ (ITI):

  • ಅರ್ಹತೆ: 10ನೇ ತರಗತಿ + 2 ವರ್ಷದ ITI (ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ಮೆಷಿನಿಸ್ಟ್ ಮುಂತಾದವು).
  • ಪ್ರಾಮುಖ್ಯತೆ: ನಿರ್ದಿಷ್ಟ ಕಸಬು ನೈಪುಣ್ಯತೆಯನ್ನು ಕೈಗಾರಿಕಾ ವಾತಾವರಣದಲ್ಲಿ ಹಂಚಿಕೊಳ್ಳುವುದು.

4. ಗ್ರ್ಯಾಜುಯೇಟ್ ಅಪ್ರೆಂಟಿಸ್:

  • ಅರ್ಹತೆ: B.A / B.Com / B.Sc (ಸಂಬಂಧಿತ ವಿಷಯಗಳಲ್ಲಿ).
  • ಪ್ರಾಮುಖ್ಯತೆ: ಆಡಳಿತಾತ್ಮಕ ಮತ್ತು ಸಹಾಯಕ ಕಾರ್ಯಗಳಲ್ಲಿ ಅನುಭವ.
ರಿಫೈನರಿ  ಹುದ್ದೆಗಳು : 
  • ಪಾನಿಪಟ್ ರಿಫೈನರಿ & ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್: 707 ಹುದ್ದೆಗಳು (ಗರಿಷ್ಠ ಸಂಖ್ಯೆ)
  • ಗುಜರಾತ್ ರಿಫೈನರಿ: 583 ಹುದ್ದೆಗಳು
  • ಪರದೀಪ್ ರಿಫೈನರಿ: 413 ಹುದ್ದೆಗಳು
  • ಬರೌನಿ ರಿಫೈನರಿ: 313 ಹುದ್ದೆಗಳು
  • ಹಾಲ್ಡಿಯಾ ರಿಫೈನರಿ: 216 ಹುದ್ದೆಗಳು
  • ಮಥುರಾ ರಿಫೈನರಿ: 189 ಹುದ್ದೆಗಳು
  • ಬೋಂಗೈಗಾಂವ್ ರಿಫೈನರಿ: 142 ಹುದ್ದೆಗಳು
  • ಡಿಗ್ಬೋಯ್ ರಿಫೈನರಿ: 112 ಹುದ್ದೆಗಳು
  • ಗುವಾಹಾಟಿ ರಿಫೈನರಿ: 82 ಹುದ್ದೆಗಳು

ವಯೋಮಿತಿ ?

ಈ ಹುದ್ದೆಗೆ ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಾದರೆ 18ರಿಂದ 24 ವರ್ಷದ ಒಳಗಿರಬೇಕು. ಈ ಹುದ್ದೆಯಲ್ಲಿ ವಯಸ್ಸಿನ ಸಡಿಲಿಕ್ಕೆ ಕೂಡ ಇರುತ್ತದೆ. 

  • OBC (NCL): 18–27 ವರ್ಷ (3 ವರ್ಷ ರಿಯಾಯಿತಿ)
  • SC/ST: 18–29 ವರ್ಷ (5 ವರ್ಷ ರಿಯಾಯಿತಿ)
  • PwBD (ಸಾಮಾನ್ಯ): 18–34 ವರ್ಷ (10 ವರ್ಷ ರಿಯಾಯಿತಿ)

ಆಯ್ಕೆ ಪ್ರಕ್ರಿಯೆ ?

ಈ ಹುದ್ದೆಯಲ್ಲಿ ಒಟ್ಟು ನಾಲ್ಕು ರೀತಿಯ ಆಯ್ಕೆ ಪ್ರಕ್ರಿಯೆಯು ಇರುತ್ತದೆ. 

  1. ಲಿಖಿತ ಪರೀಕ್ಷೆ : ಇದರಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಗಣಿತ, ಇಂಗ್ಲಿಷ್ ಮತ್ತು ತಾಂತ್ರಿಕ ವಿಷಯಗಳ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ 
  2. ಸ್ಕಿಲ್ಸ್ ಪರೀಕ್ಷೆ : ಈ ಪರೀಕ್ಷೆಯಲ್ಲಿ ನಿಮ್ಮ ಸ್ಕಿಲ್ಸ್ ಪರೀಕ್ಷೆ ಮಾಡಲಾಗುತ್ತದೆ. 
  3. ದಾಖಲೆ ಪರಿಶೀಲನೆ : ಈ ಹಂತದಲ್ಲಿ ನೀವು ನೀಡಿರುವ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸುತ್ತಾರೆ. 
  4. ವೈದ್ಯಕೀಯ ಪರೀಕ್ಷೆ : ಕೊನೆಯ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆ ಮಾಡುತ್ತಾರೆ. ಏಕೆಂದರೆ ಅಭ್ಯರ್ಥಿಯು ಕೈಗಾರಿಕಾ ವಲಯದಲ್ಲಿ ಕೆಲಸ ಮಾಡಲು ಯೋಗ್ಯರಿದ್ದಾರೆ ಎಂದು ಪರಿಶೀಲನೆ ಮಾಡುತ್ತಾರೆ. 

Also Read :- Karnataka Free Laptop scheme : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

IOCL Recruitment 2025 : IOCL ಸಂಸ್ಥೆಯಲ್ಲಿ ಖಾಲಿ ಇರುವ 2776 ಹುದ್ದೆಗಳಿಗೆ ಅರ್ಜಿ ಆಹ್ವಾನ!

IOCL ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ? 

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇವಲ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ಸುಲಭವಾಗಿ ನಿಮ್ಮ ಸ್ಮಾರ್ಟ್ಫೋನ್ ಬಳಸಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮಾಹಿತಿಯನ್ನು ಕೆಳಗೆ ಲೇಖನದಲ್ಲಿ ನೀಡಲಾಗಿದೆ. 

  • ಮೊದಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಈ  www.iocl.com  ಲಿಂಕ್ ಮೇಲೆ ಕ್ಲಿಕ್ ಮಾಡಿ .
  • ನಂತರ ಹೋಂ ಪೇಜ್ ನಲ್ಲಿ ಕೆರಿಯರ್ ಅಥವಾ ರಿಕ್ವಯರ್ಮೆಂಟ್ ಇದನ್ನು ಆಯ್ಕೆ ಮಾಡಿಕೊಳ್ಳಿ 
  • ಆಯ್ಕೆ ಮಾಡಿದ ನಂತರ “Latest Apprentice Recruitment 2025” ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಅಧಿಸೂಚನೆ PDF ಡೌನ್ಲೋಡ್ ಮಾಡಿಕೊಳ್ಳಿ.
  • ಅರ್ಜಿ ಸಲ್ಲಿಸಲು ಬಯಸುವ ರೆಫೆನರಿ ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ಪಾಣಿಪತ್ ಅಥವಾ ಗುಜರಾತ್, ಇತ್ಯಾದಿ.. ರಫೆನೈರೆಯು ನೀವು ಡೌನ್ಲೋಡ್ ಮಾಡಿರುವ ಪಿಡಿಎಫ್ ನಲ್ಲಿ ಇರುತ್ತದೆ. 
  • ರಿಜಿಸ್ಟ್ರೇಷನ್ ಮಾಡಿ : ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿ ಹೊಸದಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ. 
  • ಲಾಗಿನ್ ಮಾಡಿ : ರಿಜಿಸ್ಟ್ರೇಷನ್ ಪೂರ್ಣಗೊಂಡ ನಂತರ ಲಾಗಿನ್ ಮಾಡಿ. ನಿಮ್ಮ ಮುಂದೆ ಒಂದು ಅರ್ಜಿ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ಎಲ್ಲಾ ವಿವರಗಳೊಂದಿಗೆ ಭರ್ತಿ ಮಾಡಿ.
  • ದಾಖಲೆ ಅಪ್ಲೋಡ್ ಮಾಡಿ : ಅಲ್ಲಿ ಕೇಳುವ ಎಲ್ಲಾ ಅಗತ್ಯ ದಾಖಲೆಗಳನ್ನು ಪಿಡಿಎಫ್ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳ ಪಟ್ಟಿ ಕೆಳಗೆ ಲೇಖನದಲ್ಲಿ ನೀಡಲಾಗಿದೆ. 
  • ಸಬ್ಮಿಟ್ ಮಾಡಿ : ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಅರ್ಜಿಯನ್ನು ಪರಿಶೀಲಿಸಿ. ಎಲ್ಲವೂ ಸರಿ ಇದ್ದರೆ ನಿಮ್ಮ ಅರ್ಜಿಯನ್ನು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. 
  • ಅರ್ಜಿ ಸಲ್ಲಿಸಿದ ನಂತರ ಅರ್ಜಿ ಫಾರ್ಮಿನ ಪ್ರಿಂಟ್ ಔಟ್ ತೆಗೆದುಕೊಳ್ಳಿ 

ಗಮನಿಸಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವೆಷ್ಟು ಅಂತ ಅಧಿಕೃತವಾಗಿ ಸೂಚಿಸಿಲ್ಲ. ಅರ್ಜಿ ಸಲ್ಲಿಸುವಾಗ ಶುಲ್ಕ ಅನ್ವಯಿಸಿದರೆ ಮಾತ್ರ ಪಾವತಿಸಿ. 

ಅಗತ್ಯ ದಾಖಲೆಗಳು ?

ಅರ್ಜಿ ಸಲ್ಲಿಸುವಾಗ ಇಲ್ಲಿ ನೀಡಿರುವ ಎಲ್ಲಾ ದಾಖಲೆಗಳನ್ನು ನೀವು ಪಿಡಿಎಫ್ ಅಥವಾ JPEG ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು. ಅಗತ್ಯ ದಾಖಲೆಗಳ ಪಟ್ಟಿ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ.

  • 3 ಪಾಸ್ ಪೋರ್ಟ್ ಸೈಜ್ ಫೋಟೋ 
  • 10ನೇ ತರಗತಿಯ ಮಾರ್ಕ್ಸ್ ಶೀಟ್ 
  • 12ನೇ ತರಗತಿಯ ಅಂಕಪಟ್ಟಿ 
  • ಐಟಿಐ / ಡಿಪ್ಲೋಮೋ / ಪದವಿ ಪ್ರಮಾಣ ಪತ್ರ 
  • ಜಾತಿ ಪರಮಣ ಪತ್ರ 
  • ಕಾಲೇಜಿನ ಪುರಾವೆ ಅಗತ್ಯವಿದ್ದರೆ. 
  • ನಿಮ್ಮ ಆಧಾರ್ ಕಾರ್ಡ್ 
  • ನಿಮ್ಮ ಪಾನ್ ಕಾರ್ಡ್ 

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?

  • ಅರ್ಜಿ ಪ್ರಾರಂಭ: 28 ನವೆಂಬರ್ 2025
  • ಅರ್ಜಿ ಕೊನೆಯ ದಿನ: 18 ಡಿಸೆಂಬರ್ 2025

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 18 ಡಿಸೆಂಬರ್ 2025 ರ ವರೆಗೆ ಮಾತ್ರ ಅವಕಾಶವಿದೆ. ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ತಡ ಮಾಡದೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

ಅರ್ಜಿ ಸಲ್ಲಿಸುವ ಲಿಂಕ್ 

  • ಅಧಿಕೃತ ವೆಬ್ಸೈಟ್: https://www.iocl.com
  • ಅಧಿಸೂಚನೆ PDF: ಸೈಟ್ನಲ್ಲಿಯೇ ‘ಕ್ಯಾರಿಯರ್ಸ್’ ವಿಭಾಗದಲ್ಲಿ ದೊರೆಯುತ್ತದೆ.

IOCL Recruitment 2025 : ಭಾರತದಲ್ಲಿ ಹೆಸರುವಾಸಿ ತೈಲ ತಯಾರಿಸುವ ಕಂಪನಿಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಕೂಡ ಒಂದು. ಈ ಸಂಸ್ಥೆಯು ಖಾಲಿ ಇರುವ ಸುಮಾರು 2756 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 18 2025ರ ಒಳಗೆ ಅರ್ಜಿಯನ್ನು ಸಲ್ಲಿಸಿ. ಈ ನೇಮಕತಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment