Rajiv Gandhi Housing Scheme : ಮನೆ ಕಟ್ಟಲು ₹1.75 ಲಕ್ಷ–₹2.5 ಲಕ್ಷದ ವರೆಗೂ ಸಹಾಯಧನ ! 

karnatakasuddi.com

By: Karnataka Suddi

On: Wednesday, November 26, 2025 10:37 AM

Rajiv Gandhi Housing Scheme : ಮನೆ ಕಟ್ಟಲು ₹1.75 ಲಕ್ಷ–₹2.5 ಲಕ್ಷದ ವರೆಗೂ ಸಹಾಯಧನ ! 
| Follow Us |

Table of Contents

Rajiv Gandhi Housing Scheme : ಮನೆ ಕಟ್ಟಲು ₹1.75 ಲಕ್ಷ–₹2.5 ಲಕ್ಷದ ವರೆಗೂ ಸಹಾಯಧನ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಸಂಪೂರ್ಣ

Rajiv Gandhi Housing Scheme : ರಾಜ್ಯದ ಜನರಿಗೆ ಗುಡ್ ನ್ಯೂಸ್ ! ಈಗ ನಿಮ್ಮ ಸ್ವಂತ ಮನೆ ಕಟ್ಟಲು ಸರ್ಕಾರವೇ ನಿಮಗೆ ಸುಮಾರು ₹1.75 ಲಕ್ಷ–₹2.5 ಲಕ್ಷದ ವರೆಗೂ ಸಹಾಯಧನ ನೀಡಲು ಮುಂದಾಗಿದ್ದಾರೆ. ಇದರ ಮೂಲ ಉದ್ದೇಶವೇನೆಂದರೆ ಕರ್ನಾಟಕದಲ್ಲಿ ಅನೇಕ ಕುಟುಂಬಗಳಿಗೆ ಇನ್ನೂ ಕೂಡ ಸ್ವಂತ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಅವರ ಮಾಸಿಕ ಆದಾಯ ಕಡಿಮೆ ಇರುವುದು ಹಾಗೂ ಜಾಗದ ಕೊರತೆ ಮತ್ತು ಬಹುಮುಖ್ಯವಾಗಿ ಮನೆ ನಿರ್ಮಾಣಕ್ಕೆ ಆಗುವ ವೆಚ್ಚಗಳು. ಇದನ್ನು ಅರಿತುಕೊಂಡ ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (RGHCL) ಈ ಯೋಜನೆಯನ್ನು ಕೈಗೊಂಡಿದ್ದಾರೆ. ಇದರ ಮೂಲ ಉದ್ದೇಶವೇನೆಂದರೆ ಕರ್ನಾಟಕದ ಪ್ರತಿಯೊಬ್ಬರಿಗೂ ತಮ್ಮ ಸ್ವಂತ ಮನೆ ನಿರ್ಮಿಸಲು ಅವಕಾಶವನ್ನು ನೀಡುತ್ತಿದ್ದಾರೆ. 2025 26ನೆ ಸಾಲಿನ ಹೊಸ ಫಲಾನುಭಾವಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಕೊನೆಯ ದಿನಾಂಕ, ಅರ್ಹತೆ ಇನ್ನು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

Also Read :- NWKRTC Recruitment 2025 : ಕೇಂದ್ರ ಸಾರಿಗೆ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು – Who can apply for this scheme? 

Rajiv Gandhi Housing Scheme : ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವವರು ಕೆಳಗೆ ನೀಡಿರುವ ಅಂಶಗಳನ್ನು ಒಳಗೊಂಡಿರಬೇಕು.

  • ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು 
  • AAY / BPL / SC / ST / OBC / EWS ಮಾನ್ಯತೆ ಪಡೆದ ರೇಷನ್ ಕಾರ್ಡ್ ಹೊಂದಿರಬೇಕು.
  • 20×30 ಅಥವಾ 30×40 ಅಡಿ ಗಾತ್ರದ ಸ್ವಂತ ಜಾಗ ಇರಬೇಕು.
  • ಮನೆ ಪತ್ನಿ ಹೆಸರಿನಲ್ಲಿ ನೋಂದಣಿ ಮಾಡಿರಬೇಕು 
  • ಅರ್ಜಿದಾರರು ಯಾವುದೇ ರೀತಿಯ ಸರ್ಕಾರಿ ನೌಕರಿ ಅಥವಾ ಐಟಿ ವಲಯದಲ್ಲಿ ಕೆಲಸ ಮಾಡುತ್ತಿರಬಾರದು.  

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಲು ಅರ್ಹರಲ್ಲದವರು – Who is not eligible

  • ಸರ್ಕಾರಿ ನೌಕರಿ ಅಥವಾ ಐಟಿ ವಲಯದಲ್ಲಿ ಕೆಲಸ ಮಾಡುತ್ತಿರಬಾರದು 
  • ಅರ್ಜಿದಾರರು ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು 
  • ನಾಲ್ಕು ಚಕ್ರ ವಾಹನ ಮಾಲೀಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ. 

ನಿಮಗೆ ಮನೆ ನಿರ್ಮಾಣ ಮಾಡಲು ಎಷ್ಟು ಸಹಾಯಧನ ಸಿಗುತ್ತದೆ ? – How much subsidy do you get

ಪ್ರದೇಶಸಹಾಯಧನ ಮೊತ್ತ
ಗ್ರಾಮೀಣ ಪ್ರದೇಶ₹1.75 ರಿಂದ ₹2 ಲಕ್ಷ
ನಗರ/ಪುರಸಭೆ ಪ್ರದೇಶ₹2.25 ರಿಂದ ₹2.50 ಲಕ್ಷ

DBT ಪಾವತಿ ವಿಧಾನ – DBT Mode of Payment

ಹಂತಕೆಲಸ ಪೂರ್ಣಗೊಂಡ ಹಂತಪಾವತಿ ಶೇಕಡಾ
1ಪ್ಲಿಂತ್/ಭೂಮಿತಳ40%
2ಛಾವಣಿ/ರೂಫಿಂಗ್40%
3ಮನೆ ಸಂಪೂರ್ಣ20%

Rajiv Gandhi Housing Scheme : ಸ್ಥಳ ಪರಿಶೀಲನೆ, ಫೋಟೋ ದಾಖಲೆ ಹಾಗೂ ಅಧಿಕಾರಿಗಳ ದೃಢೀಕರಣದ ನಂತರವೇ ಹಣ ಬಿಡುಗಡೆಯಾಗುತ್ತದೆ.

Also Read :-  Muthoot Finance Scholarship 2025 : ಮುತ್ತುಟ್ ಫೈನಾನ್ಸ್ ಕಡೆಯಿಂದ ವಿದ್ಯಾರ್ಥಿಗಳಿಗೆ 2.40 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಯೋಜನೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು – What documents are required to apply?

  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ 
  • ರೇಷನ್ ಕಾರ್ಡ್ 
  • ಆದಾಯ ಪ್ರಮಾಣ ಪತ್ರ 
  • ಜಾಗದ RTC/ಪಹಾಣಿ, ಈ–ಸ್ವತ್ತು.
  • ಮನೆ / ಜಾಗದ ಫೋಟೋ 
  • ಬ್ಯಾಂಕ್ ಪಾಸ್ ಬುಕ್ 
  • ವೋಟರ್ ಐಡಿ 
  • ಪಾನ್ ಕಾರ್ಡ್ 
  • ಮೊಬೈಲ್ ಸಂಖ್ಯೆ 
  • 4 ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಹೇಗೆ ಸಲ್ಲಿಸುವುದು – How to apply?

Rajiv Gandhi Housing Scheme : ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ತಿಳಿಯಲು ಕೆಳಗಿನ ಲೇಖನವನ್ನು ಅನುಸರಿಸಿ. 

  • ಗ್ರಾಮ ಒನ್ / ಕರ್ನಾಟಕ ಒನ್ / ಕೇಂದ್ರಕ್ಕೆ ಭೇಟಿ ನೀಡಿ.
  • “RGHCL New Application” ಆಯ್ಕೆ ಮಾಡಿ.
  • ನಂತರ ನಿಮ್ಮ ಮುಂದೆ ಒಂದು ಅರ್ಜಿ ಫಾರಂ ಓಪನ್ ಆಗುವುದು. ಆ ಫಾರಂ ಮೇಲೆ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳೊಂದಿಗೆ ಭರ್ತಿ ಮಾಡಿ.
  •  ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ. 
  • ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಅರ್ಜಿಯ ಫಾರಂ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಫಾರಂ ಕಳುಹಿಸಿ. 
  • ಕೊನೆಯದಾಗಿ ನಿಮ್ಮ ಮೊಬೈಲ್ ನಂಬರ್ ಗೆ ಅರ್ಜಿ ಫಾರಂ ನ ರೆಫರೆನ್ಸ್ ನಂಬರ್ ಬರುತ್ತದೆ ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. 
  • ಏಕೆಂದರೆ ಈ ನಂಬರ್ ಬಳಸಿ ನಿಮ್ಮ ಅರ್ಜಿಯನ್ನು ಟ್ರ್ಯಾಕ್ ಮಾಡಬಹುದು. 

Also Read :- Loreal Scholarship 2025 : ಲೋರಿಯಲ್  1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ!. 

ಅರ್ಜಿ ಸ್ಥಿತಿ ಪರಿಶೀಲಿಸಲು – Rajiv Gandhi Housing Scheme To check application status

  • https://ashraya.karnataka.gov.in
  • “Beneficiary Information System (BIS)” ಆಯ್ಕೆ ಮಾಡಿ
  • ಜಿಲ್ಲೆ ➝ ತಾಲೂಕು ➝ ಗ್ರಾಮ/ವಾರ್ಓ ಆಯ್ಕೆ ಮಾಡಿ
  • ಫಲಾನುಭವಿ ಪಟ್ಟಿ / ಪಾವತಿ ಸ್ಥಿತಿ ಪರಿಶೀಲಿಸಿ
  • ಹೆಸರು / ರೇಷನ್ ಕಾರ್ಡ್ ನಂಬರ್ ಬಳಸಿ ಹುಡುಕಿ

ಅರ್ಜಿ ಸಲ್ಲಿಸುವವರಿಗೆ ಪ್ರಮುಖ ಸೂಚನೆಗಳು – Important instructions for applicants?

ಗಮನಿಸಿ : Rajiv Gandhi Housing Scheme ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಮಧ್ಯವರ್ತಿಗಳಿಗೆ ಹಣ ಕೊಡಬೇಡಿ ಇದು ಸಂಪೂರ್ಣ ಉಚಿತವಾಗಿದೆ. ನಿಮ್ಮ ಎಲ್ಲ ದಾಖಲೆಗಳ ವಿಳಾಸ ಒಂದೇ ಇರಲಿ. ಮನೆ ನಿರ್ಮಾಣದ ಪ್ರತಿಯೊಂದು ಹಂತದ ಫೋಟೋ ತೆಗೆದುಕೊಳ್ಳಿ. ನಿಮ್ಮ ಬ್ಯಾಂಕ್ ಖಾತೆ ಡೆಬಿಟ್ ಚಾಲ್ತಿಯಲ್ಲಿರಲಿ. ಯಾವುದೇ ಕಾರಣಕ್ಕೂ ನಿಮ್ಮ ಅರ್ಜಿಯ ಮೇಲೆ ತಪ್ಪು ಮಾಹಿತಿ ನೀಡಬೇಡಿ ಒಂದು ವೇಳೆ ನೀವು ತಪ್ಪು ಮಾಹಿತಿ ನೀಡಿದರೆ ನಿಮ್ಮ ಅರ್ಜಿ ತಿರಸ್ಕಾರ ಹಾಗೂ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. 

ಮನೆ ನಿರ್ಮಾಣದ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳು – What are the rules

Rajiv Gandhi Housing Scheme : ಅನೇಕ ಕುಟುಂಬಗಳ ಕಟ್ಟಿದ ಮನೆಗಳಿಗೆ  ಅಧಿಕಾರಿಗಳು ಸಹಾಯಧನವನ್ನು ನಿಲ್ಲಿಸುತ್ತಾರೆ ಏಕೆಂದರೆ ಇದರ ಮುಖ್ಯ ಕಾರಣ ನಿರ್ಮಾಣದ ಸಮಯದಲ್ಲಿ ಅರ್ಜಿದಾರರು ಅಧಿಕಾರಿಗಳ ತಾಂತ್ರಿಕ ನಿಯಮವನ್ನು ಪಾಲಿಸುವುದಿಲ್ಲ. ತಾಂತ್ರಿಕ ನಿಯಮಗಳ ಪಟ್ಟಿ ಕೆಳಗಿನ ನೀಡಲಾಗಿದೆ. 

  • IS Code/ BIS ಮಾನದಂಡದಂತೆ ನಿರ್ಮಾಣವಾಗಬೇಕು
  • ನೀರಿನ ವ್ಯವಸ್ಥೆ/ಪೈಪ್‌ಲೈನ್ ಸರಿಯಾದಾಗಿರಬೇಕು
  • ವಿದ್ಯುತ್ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು
  • ಪಕ್ಕದ ಜಾಗ ಅಥವಾ ಸಾರ್ವಜನಿಕ ರಸ್ತೆ ಮೇಲೆ ಅತಿಕ್ರಮಣ ಮಾಡಬಾರದು
  • ಗುಂಡಿ/ಅಳತೆಗಳು ಯೋಜನೆಯ ಪ್ರಕಾರ ಇರಬೇಕು

ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಎಲ್ಲಾ ಕಂತುಗಳ ಹಣ ನಿರ್ದಿಷ್ಟವಾಗಿ DBT ಮೂಲಕ ಬಿಡುಗಡೆ ಆಗುತ್ತದೆ.

ಸಾಮಾನ್ಯ ತಪ್ಪುಗಳು ಮತ್ತು ಪರಿಹಾರ – Common mistakes and solutions

ತಪ್ಪುಪರಿಣಾಮಪರಿಹಾರ
ರೇಷನ್ ಕಾರ್ಡ್‌ನಲ್ಲಿ ಹೆಸರು ತಪ್ಪುಅರ್ಜಿ ತಿರಸ್ಕಾರರೇಷನ್ ಅಪ್ಡೇಟ್ ಮಾಡಿಕೊಳ್ಳಿ
ಬ್ಯಾಂಕ್ DBT ಸಕ್ರಿಯವಿಲ್ಲಹಣ ತಡಖಾತೆ KYC + DBT ಸಕ್ರಿಯಗೊಳಿಸಿ
ಜಾಗ ಕಾಗನಗಳಲ್ಲಿ ವ್ಯತ್ಯಾಸಅರ್ಜಿ ನಿಲ್ಲಿಕೆRTC/ಪಹಾನಿ ಈಗಲೇ ಸರಿಪಡಿಸಿ
ಮನೆ ಫೋಟೋ ಅಪ್‌ಲೋಡ್ ಸರಿಯಿಲ್ಲಪರಿಶೀಲನೆ ಅಸಾಧ್ಯಸ್ಪಷ್ಟ ಫೋಟೋ ತೆಗೆದು ಅಪ್‌ಲೋಡ್
ಮಧ್ಯವರ್ತಿಗಳಿಗೆ ಹಣಮೋಸಸರ್ಕಾರದ ಕಚೇರಿಗೆ ಮಾತ್ರ ಸಂಪರ್ಕ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – Last date to apply for this scheme

Rajiv Gandhi Housing Scheme : ರಾಜೀವ್ ಗಾಂಧಿ ವಸತಿ ಯೋಜನೆ ಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಸರ್ಕಾರ ಕೊನೆಯ ದಿನಾಂಕವನ್ನು ಸೂಚಿಸಿಲ್ಲ. ಆದರೆ ಈ ಯೋಜನೆ ಮುಗಿಯಲು ಕೆಲವೇ ದಿನಗಳು ಮಾತ್ರ ಇವೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ತಡ ಮಾಡದೆ ಆದಷ್ಟು ಬೇಗ ನಿಮ್ಮ ಅರ್ಜಿಯನ್ನು ಸಲ್ಲಿಸಿ. 

Also Read :-    Labor Card Gift 2025 : ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಗಿಫ್ಟ್ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ 

Rajiv Gandhi Housing Scheme : ರಾಜೀವ್ ಗಾಂಧಿ ವಸತಿ ಯೋಜನೆ ಇದು ಬರೀ ಮನೆ ನಿರ್ಮಾಣಕ್ಕೆ ಸಹಾಯಧನವಲ್ಲ. ಅದೆಷ್ಟೋ ಬಡ ಕುಟುಂಬಗಳಿಗೆ ತಮ್ಮ ಸ್ವಂತ ನಿವೇಶನವನ್ನು ನಿರ್ಮಿಸಲು ಸಹಾಯ ಮಾಡುವ ಒಂದು ಉಪಕಾರಿ ಸಾಧನವಾಗಿದೆ. ಏಕೆಂದರೆ ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟುವವರಿಗೆ ಸುಮಾರು 1.75 ಲಕ್ಷದಿಂದ 2 ಲಕ್ಷದವರೆಗೆ ಸಹಾಯಧನ ಸಿಗುತ್ತದೆ ಹಾಗೂ ನಗರ ಪ್ರದೇಶದಲ್ಲಿ ಮನೆ ಕಟ್ಟುವವರೆಗೆ 2.25 ಲಕ್ಷದಿಂದ 2.50 ಲಕ್ಷದ ವರೆಗೂ ಸಹಾಯಧನ ಸಿಗುತ್ತದೆ. ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ಸಹಾಯಧನ ನಿಮ್ಮದಾಗಿಸಿಕೊಳ್ಳಿ. ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಿ. 

Rajiv Gandhi Housing Scheme : ಮುಖ್ಯ ಲಿಂಕ್ 

  • ಅಧಿಕೃತ ವೆಬ್‌ಸೈಟ್: https://ashraya.karnataka.gov.in
  • ಹೆಲ್ಪ್‌ಲೈನ್ ನಂಬರ್: 080-23118888
  • ಅರ್ಜಿ ಸಲ್ಲಿಸಲು: ನಿಮ್ಮ ಸಮೀಪದ ಗ್ರಾಮ ಒನ್ / ಕರ್ನಾಟಕ ಒನ್ / ಅಟಲ್ ಜೀ ಕೇಂದ್ರ.

FAQ  : Rajiv Gandhi Housing Scheme ಈ ಯೋಜನೆ ಬಗ್ಗೆ ಜನರು ಹೆಚ್ಚು ಕೇಳುವ ಪ್ರಶ್ನೆಗಳು ?

1 ರಾಜೀವ್ ಗಾಂಧಿ ವಸತಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ? 

A : ಅರ್ಜಿ ಸಲ್ಲಿಸುವವರು ತಮ್ಮ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು. ಹಾಗೂ ರೇಷನ್ ಕಾರ್ಡ್ ಹೊಂದಿರಬೇಕು ಮತ್ತು 20×30 ಅಥವಾ 38×40 ಅಡಿ ತಮ್ಮ ಸ್ವಂತ ಜಾಗ ಹೊಂದಿರಬೇಕು. ಮನೆ ಹೆಸರು ಮಹಿಳೆಯರ ಮಾಲೀಕತ್ವದಲ್ಲಿ ಇದ್ದರೆ ಅಂತವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 

2 ಮನೆ ಕಟ್ಟಲು ಎಷ್ಟು ಸಹಾಯಧನ ನೀಡುತ್ತಾರೆ ?

A: ಗ್ರಾಮೀಣ ಪ್ರದೇಶದಲ್ಲಿ 1.75 ಲಕ್ಷ ರಿಂದ 2 ಲಕ್ಷ. ಹಾಗೂ ನಗರ ಪ್ರದೇಶದಲ್ಲಿ 2.25 ಲಕ್ಷದಿಂದ 2.50 ಲಕ್ಷದ ವರೆಗೂ ಸಹಾಯಧನ ಸಿಗುತ್ತದೆ. 

3 ಅರ್ಜಿ ಹೇಗೆ ಸಲ್ಲಿಸಬೇಕು ?

A:: ಅರ್ಜಿಯನ್ನು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಅಥವಾ ಅಟಲ್ ಜೀ ಕೇಂದ್ರಗಳಲ್ಲಿ ಉಚಿತವಾಗಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಪ್ರಕ್ರಿಯೆ ಇದೆ. ಅರ್ಜಿ ಸಲ್ಲಿಸಲು ಯಾವುದೇ ಮಧ್ಯವರ್ತಿಗಳು ಅಗತ್ಯವಿಲ್ಲ.

4. ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಅಗತ್ಯ?

  • ಉತ್ತರ: ಅಗತ್ಯ ದಾಖಲೆಗಳ ಪಟ್ಟಿ:
    • ಆಧಾರ್ ಕಾರ್ಡ್ (ಎಲ್ಲಾ ಕುಟುಂಬ ಸದಸ್ಯರು)
    • AAY/BPL/SC/ST ರೇಷನ್ ಕಾರ್ಡ್
    • ಆದಾಯ ಪ್ರಮಾಣಪತ್ರ
    • ಜಾಗದ RTC/ಪಹಾನಿ
    • ಮನೆ/ಜಾಗದ ಫೋಟೋ
    • ಬ್ಯಾಂಕ್ ಪಾಸ್ಬುಕ್
    • ಮತದಾರರ ಐಡಿ
    • ಮೊಬೈಲ್ ನಂಬರ್

5. ನನ್ನ ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸಬಹುದು?

  • ಉತ್ತರ: ಅಧಿಕೃತ ವೆಬ್ಸೈಟ್ https://ashraya.karnataka.gov.in ಗೆ ಭೇಟಿ ನೀಡಿ. “Beneficiary Information System (BIS)” ವಿಭಾಗದಲ್ಲಿ ನಿಮ್ಜಿಲ್ಲೆ, ತಾಲೂಕು, ಮತ್ತು ಗ್ರಾಮ/ವಾರ್ಡ್ ಆಯ್ಕೆ ಮಾಡಿ. ಫಲಾನುಭವಿ ಪಟ್ಟಿ ಅಥವಾ ಪಾವತಿ ಸ್ಥಿತಿಯನ್ನು ನಿಮ್ಮ ಹೆಸರು ಅಥವಾ ರೇಷನ್ ಕಾರ್ಡ್ ನಂಬರ್ ಮೂಲಕ ಹುಡುಕಬಹುದು.

6. ಯೋಜನೆಯಲ್ಲಿ ಮೋಸದಿಂದ ಹೇಗೆ ತಪ್ಪಿಸಿಕೊಳ್ಳಬಹುದು?

  • ಮಧ್ಯವರ್ತಿಗಳಿಗೆ ಹಣ ಕೊಡಬೇಡಿ.
  • ಎಲ್ಲಾ ದಾಖಲೆಗಳು ನಿಜವಾಗಿರುವಂತೆ ಖಚಿತಪಡಿಸಿಕೊಳ್ಳಿ.
  • ಸಹಾಯಕ್ಕಾಗಿ ಸರ್ಕಾರಿ ಕಚೇರಿಗೆ ಅಥವಾ ಅಧಿಕೃತ ಹೆಲ್ಪ್ಲೈನ್ ಸಂಖ್ಯೆ (080-23118888) ಗೆ ಸಂಪರ್ಕಿಸಿ.
  • ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕೃತವಾಗಬಹುದು ಮತ್ತು ಕಾನೂನು ಕ್ರಮ ಜರುಗಬಹುದು.

7. ನನ್ನ ಬ್ಯಾಂಕ್ ಖಾತೆ DBT ಸಕ್ರಿಯ ಎಂದು ಹೇಗೆ ಖಚಿತಪಡಿಸಿಕೊಳ್ಳಬಹುದು?

  • ಉತ್ತರ: ನಿಮ್ಮ ಬ್ಯಾಂಕ್ಗೆ ಭೇಟಿ ನೀಡಿ ಮತ್ತು ನಿಮ್ಮ ಖಾತೆಯಲ್ಲಿ DBT (Direct Benefit Transfer) ಸೇವೆ ಸಕ್ರಿಯವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಖಾತೆಯ KYC (ನಿಮ್ಮನ್ನು ನೀವು ತಿಳಿದುಕೊಳ್ಳುವುದು) ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.

8. ಯೋಜನೆಯ ಅರ್ಜಿ ಪ್ರಕ್ರಿಯೆಯಲ್ಲಿ ತಡವಾಗಿದ್ದೇನೆ, ಈಗಲೂ ಅರ್ಜಿ ಸಲ್ಲಿಸಬಹುದೇ?

  • ಉತ್ತರ: ಹೌದು, 2025-26ನೇ ಸಾಲಿನ ಹೊಸ ಫಲಾನುಭವಿ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಆರಂಭವಾಗಿದೆ. ನೀವು ಅರ್ಹತೆ ಹೊಂದಿದ್ದರೆ, ಅರ್ಜಿ ಸಲ್ಲಿಸಲು ಇನ್ನೂ ಸಮಯವಿದೆ. ನಿಮ್ಮ ಎಲ್ಲಾ ದಾಖಲೆಗಳು ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಂಡು, ಅತಿ ತ್ವರಿತವಾಗಿ ಅರ್ಜಿ ಸಲ್ಲಿಸಿ.

9. ಮುಖ್ಯ ಲಿಂಕ್ 

  • ಅಧಿಕೃತ ವೆಬ್‌ಸೈಟ್: https://ashraya.karnataka.gov.in
  • ಹೆಲ್ಪ್‌ಲೈನ್ ನಂಬರ್: 080-23118888
  • ಅರ್ಜಿ ಸಲ್ಲಿಸಲು: ನಿಮ್ಮ ಸಮೀಪದ ಗ್ರಾಮ ಒನ್ / ಕರ್ನಾಟಕ ಒನ್ / ಅಟಲ್ ಜೀ ಕೇಂದ್ರ.

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment