---Advertisement---

Muthoot Finance Scholarship 2025 : ಮುತ್ತುಟ್ ಫೈನಾನ್ಸ್ ಕಡೆಯಿಂದ ವಿದ್ಯಾರ್ಥಿಗಳಿಗೆ 2.40 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಯೋಜನೆ. 

karnatakasuddi.com

By: Karnataka Suddi

On: Friday, November 14, 2025 3:25 PM

Muthoot Finance Scholarship 2025 : ಮುತ್ತುಟ್ ಫೈನಾನ್ಸ್ ಕಡೆಯಿಂದ ವಿದ್ಯಾರ್ಥಿಗಳಿಗೆ 2.40 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಯೋಜನೆ. 
Google News
Follow Us
---Advertisement---

Muthoot Finance Scholarship 2025 :  ಮುತ್ತೊಟ್ ಫೈನಾನ್ಸ್ ವಿದ್ಯಾರ್ಥಿವೇತನ  ಸಂಪೂರ್ಣ ಮಾಹಿತಿ

Muthoot Finance Scholarship 2025 : ಭಾರತದಲ್ಲಿ ಉನ್ನತ ಹೆಸರು ಸಂಪಾದಿಸಿರುವ ಮುತ್ತಟ್ ಫೈನಾನ್ಸ್  ಇದೀಗ MBBS,B -Tech ಅಥವಾ B.Sc ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (CSR) ಯೋಜನೆ ಅಡಿಯಲ್ಲಿ ಸುಮಾರು 2.40 ಲಕ್ಷ ವರೆಗಿನ ವಿದ್ಯಾರ್ಥಿವೇತನ ನೀಡಲು ಮುಂದಾಗಿದ್ದಾರೆ. 

Also Read :- BMRCL Recruitment 2025 : ಬೆಂಗಳೂರು ಮೆಟ್ರೋ ರೈಲು ನಿಗಮ ನಲ್ಲಿ ಸುಪ್ರವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

Muthoot Finance Scholarship 2025 : ಹೈಲೈಟ್ಸ್
  • ಕೋರ್ಸ್ : MBBS, B.Tech, ಮತ್ತು B.Sc ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು.
  • ವಿದ್ಯಾರ್ಥಿವೇತನ ಮೊತ್ತ : MBBSಗೆ ₹2,40,000 ಮತ್ತು B.Tech/B.Sc ನರ್ಸಿಂಗ್‌ಗೆ ₹1,20,000.
  • ಅರ್ಜಿ ಪ್ರಕ್ರಿಯೆ : ಸಂಪೂರ್ಣವಾಗಿ ಆನ್‌ಲೈನ್.
  • ಕೊನೆಯ ದಿನಾಂಕ : 30 ನವೆಂಬರ್ 2025.

ಈ ಲೇಖನದಲ್ಲಿ ಮುತ್ತುಟ್ ಫೈನಾನ್ಸ್ ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಹಾಗೂ ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಆಸಕ್ತಿ ಇರುವ ವಿದ್ಯಾರ್ಥಿಗಳು ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.

Also Read :-  Labor Card Gift 2025 : ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಗಿಫ್ಟ್ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.  

Muthoot Finance Scholarship 2025 : ಮುತ್ತೊಟ್ ಫೈನಾನ್ಸ್ ವಿದ್ಯಾರ್ಥಿ ವೇತನ 

ಭಾರತದ ಪ್ರಮುಖ ಆರ್ಥಿಕ ಸೇವಾ ಸಂಸ್ಥೆಗಳಲ್ಲಿ ಈ ಮುತ್ತುಟ್ ಫೈನಾನ್ಸ್ ಕೂಡ ಒಂದು. ಇದೀಗ ಮುತ್ತುಟ್ ಫೈನಾನ್ಸ್ ತನ್ನ CSR ಯೋಜನೆ ಚಟುವಟಿಕೆಗಳ ಮೂಲಕ ಸಾಮಾಜಿಕ ಸಹಾಯವೂ ಕೂಡ ಮಾಡಲು ಪ್ರಾರಂಭಿಸಿದೆ. ಈ ಸಂಸ್ಥೆ ಇದೀಗ ವಿದ್ಯಾರ್ಥಿವೇತನವನ್ನು ಘೋಷಿಸಿದ್ದಾರೆ.

 ಮುತ್ತುಟ್ ಫೈನಾನ್ಸ್  ಅರ್ಹತೆ – Muthoot Finance Scholarship Eligibility

ಈ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿರಬೇಕು. 

  1. ನೀವು ಭಾರತದ ನಾಗರಿಕರಾಗಿರಬೇಕು 
  2. 12ನೇ ತರಗತಿ ಪರೀಕ್ಷೆಯಲ್ಲಿ 90% ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು. 
  3. ನಿಮ್ಮ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು. 
  4. ಹಾಗೂ ಬಹು ಮುಖ್ಯವಾಗಿ ವಿದ್ಯಾರ್ಥಿಯು ಭಾರತ ಸರ್ಕಾರದ ಮಾನ್ಯತೆ ಪಡೆದ ಯಾವುದೇ ಕಾಲೇಜಿನಲ್ಲಿ MBBS/ B.Tech / B.Sc ಪದವಿ ಕೋರ್ಸ್ ಗಳಲ್ಲಿ ಪ್ರವೇಶ ಪಡೆದಿರಬೇಕು. 

 ಮುತ್ತುಟ್ ಫೈನಾನ್ಸ್ ವಿದ್ಯಾರ್ಥಿವೇತನದ ಮೊತ್ತ – Muthoot Finance Scholarship Amount

ಮುತ್ತುಟ್ ಫೈನಾನ್ಸ್ : ವಿದ್ಯಾರ್ಥಿಯು ಓದುತ್ತಿರುವ ಕೋರ್ಸ್ ನ ಆಧಾರದ ಮೇಲೆ ಸ್ಕಾಲರ್ಶಿಪ್ ಮೊತ್ತ ನಿರ್ಧಾರವಾಗುತ್ತದೆ. ಈ ಮತ್ತು ಅವು ಶೈಕ್ಷಣಿಕ ಫೀಸ್ ಅಥವಾ ಪುಸ್ತಕ ಹಾಗೂ ದಿನನಿತ್ಯ ಸಂಬಂಧಿತ ಖರ್ಚುಗಳಿಗೆ ಬಳಸಿಕೊಳ್ಳಬಹುದು. 

ಕೋರ್ಸ್ ಸ್ಕಾಲರ್ಶಿಪ್ ಮೊತ್ತ (ಪ್ರತಿ ವರ್ಷ)
MBBS₹2,40,000
B.Tech₹1,20,000
B.Sc ₹1,20,000

Also Read :-    SBI Platinum Jubilee Asha Scholarship :  9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ₹15,000 ವಿದ್ಯಾರ್ಥಿವೇತನ ಸೌಲಭ್ಯ ! 

ಮುತ್ತುಟ್ ಫೈನಾನ್ಸ್  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last Date to Apply)

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ 30 / 2025 ರಂದು ಕೊನೆಯ ಅವಕಾಶವನ್ನು ನೀಡಿದ್ದಾರೆ. ನೀವೇನಾದರೂ ಈ ಯೋಜನೆಗೆ ಆಸಕ್ತಿ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯಬೇಡಿ ಆದಷ್ಟು ಬೇಗ ಈ ಅರ್ಜಿಗೆ ಅಪ್ಲೈ ಮಾಡಿ ಹಾಗೂ ನಿಮ್ಮ ವಿದ್ಯಾರ್ಥಿವೇತನವನ್ನು ಮಿಸ್ ಮಾಡಿಕೊಳ್ಳಬೇಡಿ .

ಮುತ್ತುಟ್ ಫೈನಾನ್ಸ್ ಅರ್ಜಿ ಸಲ್ಲಿಸುವ ವಿಧಾನ (How to Apply Online Step by Step)

ಮುತ್ತುಟ್ ಫೈನಾನ್ಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ ಇದರಲ್ಲಿ ಅರ್ಜಿ ಸಲ್ಲಿಸುವ ಅಂತಹ ಪ್ರಕ್ರಿಯೆಯು ಕೂಡ ತುಂಬಾ ಸರಳವಾಗಿ ನೀಡಲಾಗಿದೆ. ಹಾಗೂ ಅರ್ಜಿ ಪ್ರಕ್ರಿಯೆಯು ಸಂಪೂರ್ಣ ಆನ್ಲೈನ್ ಮೂಲಕವೇ ಸಲ್ಲಿಸಬೇಕು. 

  1. ಮೊದಲು ಮುತ್ತುಟ್ ಫೈನಾನ್ಸ್ ವಿದ್ಯಾರ್ಥಿವೇತನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ಇಲ್ಲಿ https://www.muthootfinance.com/ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. 
  2. ನೋಂದಣಿ ಅಥವಾ ರಜಿಸ್ಟರ್ ಮಾಡಿ : ವೆಬ್ಸೈಟ್ ಓಪನ್ ಆದ ನಂತರ ನೀವು ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಬೇಕು.  “New Student? Register Here” ಅಥವಾ “Register” ಎಂಬ ಬಟನ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. 
  3. ನಂತರ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಉದಾಹರಣೆ: ನಿಮ್ಮ ಪೂರ್ಣ ಹೆಸರು, ಇಮೇಲ್ ಐಡಿ, ನಿಮ್ಮ ವಿಳಾಸ, ಮೊಬೈಲ್ ನಂಬರ್, ಜನ್ಮ ದಿನಾಂಕ, ಹಾಗೂ ಸುರಕ್ಷಿತವಾದ ಪಾಸ್ವರ್ಡ್. 
  4. ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ ರಿಜಿಸ್ಟರ್ ಅಥವಾ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. 
  5. ಲಾಗಿನ್ ಮಾಡಿಕೊಳ್ಳಿ : ರಿಜಿಸ್ಟರ್ ಆದ ನಂತರ  “Existing Student? Login Here”  ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ
  6. ಅರ್ಜಿ ಭರ್ತಿ ಮಾಡಿ : ಲಾಗಿನ್ ಆದ ನಂತರ ನಿಮ್ಮ ಮುಂದೆ ಒಂದು ಅರ್ಜಿ ಫಾರಂ ಓಪನ್ ಆಗುವುದು ಅದರಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಬೇಕು. ಉದಾಹರಣೆ :- ನಿಮ್ಮ ಹೆಸರು, ತಂದೆ ತಾಯಿಯ ಹೆಸರು, ನಿಮ್ಮ ಖಾಯಂ ವಿಳಾಸ, ನಿಮ್ಮ ಶೈಕ್ಷಣಿ ಮಾಹಿತಿ, ಕಾಲೇಜಿನ ಹೆಸರು ಹಾಗೂ ರಿಜಿಸ್ಟ್ರೇಷನ್ ನಂಬರ್, ಮತ್ತು ಬಹು ಮುಖ್ಯವಾಗಿ ಕುಟುಂಬದ ಆದಾಯದ ವಿವರಗಳು. 
  7. ದಾಖಲೆಗಳನ್ನು ಅಪ್ಲೋಡ್ ಮಾಡಿ : ಫಾರಂ ಕೊನೆಯ ಭಾಗದಲ್ಲಿ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡುವ ಆಯ್ಕೆ ಕಾಣಿಸುತ್ತದೆ ಅದರಲ್ಲಿ ನಿಮ್ಮ ಎಲ್ಲಾ ದಾಖಲೆಗಳ ಸ್ಕ್ಯಾನ್ ಕಾಫಿಯನ್ನು ಅಪ್ಲೋಡ್ ಮಾಡಿಕೊಳ್ಳಬೇಕು. ಉದಾಹರಣೆ : PDF, JPEG, PNG. ಹಾಗೂ ಅಗತ್ಯ ದಾಖಲೆಗಳ ಪಟ್ಟಿ ಕೆಳಗೆ ಲೇಖನದಲ್ಲಿ ನೀಡಲಾಗಿದೆ ಅದನ್ನು ಅನುಸರಿಸಿ. 
  8. ಅರ್ಜಿಯನ್ನು ಸಲ್ಲಿಸಿ : ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ನಿಮ್ಮ ಅರ್ಜಿಯನ್ನು ಇನ್ನೊಂದು ಸಲ ಸಂಪೂರ್ಣವಾಗಿ ಪರಿಶೀಲಿಸಿ. ಎಲ್ಲ ಮಾಹಿತಿ ಸರಿಯಾಗಿದೆಯೇ ಎಂದು ನೋಡಿದ ನಂತರ (Submit) ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. 
  9. ನಿಮ್ಮ ಅರ್ಜಿ ಪ್ರಕ್ರಿಯೆ ಯಶಸ್ವಿಯಾಗಿ ಮುಗಿಯುವುದು. ಅರ್ಜಿ ಸಲ್ಲಿಕೆಯಾದ ನಂತರ ನೀವು ನೀಡಿರುವ ಇಮೇಲ್ ಐಡಿಗೆ ಒಂದು ಸಂದೇಶ ಬರುವುದು. ಸಂದೇಶ ಬಂದ ಪ್ರತಿಯನ್ನು ಭದ್ರವಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ. 
Muthoot Finance Scholarship 2025 : ಮುತ್ತುಟ್ ಫೈನಾನ್ಸ್ ಕಡೆಯಿಂದ ವಿದ್ಯಾರ್ಥಿಗಳಿಗೆ 2.40 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಯೋಜನೆ. 

Also Read :-   Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ 1.50ಲಕ್ಷ ರೂಪಾಯಿ ನೆರವು? 

ಗಮನಿಸಿ : ನೀವು ಸ್ವತಹ ಈ ಅರ್ಜಿ ಸಲ್ಲಿಸಲು ಬರುವುದಿಲ್ಲವೆಂದರೆ ದಯವಿಟ್ಟು ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡುವುದರ ಮೂಲಕ ನಿಮ್ಮ ಅರ್ಜಿಯನ್ನು ತುಂಬಾ ಸುಲಭವಾಗಿ ಸಲ್ಲಿಸಬಹುದು. 

ಅಗತ್ಯ ದಾಖಲೆಗಳು (Important Documents)

ನೀವು ಅರ್ಜಿ ಸಲ್ಲಿಸುವಾಗ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ಕೇಳಲಾಗುತ್ತದೆ. ಮತ್ತು ನೀವು ಆನ್ಲೈನ್ ಮುಖಾಂತರ ಅಪ್ಲೋಡ್ ಮಾಡುವಾಗ ದಾಖಲೆಗಳ ಸ್ಕ್ಯಾನ ಕಾಫಿ ಬೇಕಾಗುತ್ತದೆ. ಉದಾಹರಣೆ : PDF/ JPEG.

  • ನಿಮ್ಮ ಆಧಾರ್ ಕಾರ್ಡ್ 
  • ಹತ್ತನೇ ತರಗತಿಯ ಮಾರ್ಕ್ಸ್ ಸೀಟ್ 
  • ಶೈಕ್ಷಣಿಕ ಪ್ರಮಾಣ ಪತ್ರ 
  • ಕೋರ್ಸ್ನ ಪ್ರವೇಶ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ 
  • ನಿಮ್ಮ ಪಾನ್ ಕಾರ್ಡ್ 
  • ನಿಮ್ಮ ಆಧಾರ್ ಕಾರ್ಡ್ 
  • 4 ಪಾಸ್ಪೋರ್ಟ್ ಸೈಜ್ ಫೋಟೋ 
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್.

ಈ ವಿದ್ಯಾರ್ಥಿ ವೇತನ ಯಾರಿಗೆ ಹೆಚ್ಚು ಉಪಯೋಗ ವಾಗುತ್ತದೆ ? -Who benefits the most? 

ಈ ವಿದ್ಯಾರ್ಥಿ ವೇತನವೂ MBBS/ B.Tech ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುತ್ತದೆ ಏಕೆಂದರೆ ಇವರು ಅಧ್ಯಯನ ಮಾಡುತ್ತಿರುವ ಕೋರ್ಸ್ ನ ಫೀಸ್ ಅತ್ಯಾಧಿಕವಾಗಿರುತ್ತದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಉತ್ತಮವಾಗಿ ಮುಂದುವರೆಯಲು ಈ ಯೋಜನೆ ಸಹಾಯ ಮಾಡುತ್ತದೆ. ಇವರು ಉದ್ದೇಶವೇನೆಂದರೆ ಪ್ರತಿ ವಿದ್ಯಾರ್ಥಿಯು ಕೂಡ ಹಣದ ಸಮಸ್ಯೆಯಿಂದಾಗಿ ಅಥವಾ ಕುಟುಂಬದ ಒತ್ತಡ ಇಂದಾಗಿ ಶಿಕ್ಷಣ ತೊರೆಯಬಾರದೆಂದು ಮುತ್ತುಟ್ ಫೈನಾನ್ಸ್ ಫೌಂಡೇಶನ್ ಪ್ರತಿ ವಿದ್ಯಾರ್ಥಿಗೂ ಕೂಡ 2. 40 ಲಕ್ಷ ರೂಪಾಯಿ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.

Also Read :-   DHFWS Hassan Recruitment 2025 :  ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! 

ಸ್ಕಾಲರ್ಶಿಪ್ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?- Selection Process

ನಿಮ್ಮ ಅರ್ಜಿಗಳು ಸಲ್ಲಿಸಿದ ನಂತರ, ಮುತ್ತುಟ್ ಫೈನಾನ್ಸ್ ಫೌಂಡೇಶನ್ ತಂಡವು ನಿಮ್ಮ ಎಲ್ಲಾ ಅರ್ಜಿಯನ್ನು ಪರಿಶೀಲಿಸುತ್ತಾರೆ, ನಂತರ ನಿಮ್ಮ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿದ ನಂತರ ಅವರ ಎಲ್ಲಾ ಅರ್ಹತೆ  ಪೂರೈಸುವ ವಿದ್ಯಾರ್ಥಿಗೆ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಪ್ರತಿ ವಿದ್ಯಾರ್ಥಿಗೂ ಕೂಡ ಇ-ಮೇಲ್ ಅಥವಾ ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ. 

ಗಮನಿಸಿ : ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ನೀವು ಯಾವುದೇ ರೀತಿಯ ನಕಲಿ ದಾಖಲೆಗಳು ಅಥವಾ ಸುಳ್ಳು ಮಾಹಿತಿಯನ್ನು ಭರ್ತಿ ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ನಿಮ್ಮ ಅರ್ಜಿಯನ್ನು ಪರಿಗಣಿಸುವುದಿಲ್ಲ ಮತ್ತು ನಿಮ್ಮ ಮೇಲೆ ಕಾನೂನಿನ ಕ್ರಮಗಳು ಕೈಗೊಳ್ಳಬಹುದು. 

ಮುತ್ತುಟ್ ಫೈನಾನ್ಸ್ ವಿದ್ಯಾರ್ಥಿ ವೇತನ ನಂಬಬಹುದೇ ?-Can Muthoot Finance Scholarship be trusted ? 

ಹೌದು ಸ್ನೇಹಿತರೆ ಮುತ್ತುಟ್ ಫೈನಾನ್ಸ್ , ಭಾರತದಲ್ಲಿ ಅತ್ಯಂತ ಹೆಸರುವಾಸಿ ಆಗಿರುವ ಒಂದು ಫೈನಾನ್ಸ್ ಸಂಸ್ಥೆಯಾಗಿದೆ. ಇವರು ಈ ಸಾಮಾಜಿಕ ಕಾರ್ಯಗಳನ್ನು ಮೊದಲಿಂದಲೂ ಕೂಡ ಮಾಡ್ತಾ ಬರುತ್ತಿದ್ದಾರೆ. ಎಷ್ಟು ಭಾರತದ ಪ್ರತಿಭಾವಂತ ವಿದ್ಯಾರ್ಥಿಗೆ ಇವರ ಸ್ಕಾಲರ್ಶಿಪ್ ಹಣದಿಂದ ಸಹಾಯವಾಗಿದೆ. ಇವರ ಮೂಲ ಉದ್ದೇಶವೇನೆಂದರೆ ಪ್ರತಿಭಾವಂತ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೂಡ ತಮ್ಮ ಶಿಕ್ಷಣವನ್ನು ತೊರೆಯಬಾರದು ಎಂಬ ಅತ್ಯುತ್ತಮ ಮನಸ್ಸಿನಿಂದ ಈ ಯೋಜನೆಯನ್ನು ಕೈಗೊಂಡಿದ್ದಾರೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ನಾನು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ ಅಥವಾ ಇವರದೇ ಅಧಿಕೃತ ವೆಬ್ಸೈಟ್ ಆದ ಮುತ್ತುಟ್ ಫೈನಾನ್ಸ್ ಪೋರ್ಟಲ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಿ. 

Also Read :- Canara Bank personal loan 2025 : ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ! 

ಮುತ್ತುಟ್ ಫೈನಾನ್ಸ್ ವಿದ್ಯಾರ್ಥಿವೇತನ 2025 : ಈ ಯೋಚನೆ ಕೇವಲ ಹಣಕಾಸಿನ ಸಹಾಯವಲ್ಲ. ಅದೆಷ್ಟು ಪ್ರತಿಭಾವಂತ ವಿದ್ಯಾರ್ಥಿಯನ್ನು ಮೇಲೆತ್ತುವ ಗುರಿಯುವರದು. ಏಕೆಂದರೆ MBBS, B.Tech, ಅಥವಾ B.Sc ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು 2.40 ಲಕ್ಷ ವರೆಗಿನ ಸ್ಕಾಲರ್ಶಿಪ್ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ಅರ್ಜಿ ಪ್ರಕ್ರಿಯೆ ಕೇವಲ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕು. ಹಾಗೂ ವರ್ಜಿಸಲಿಸಲು ನವೆಂಬರ್ 30 / 2025  ಕೊನೆಯ ದಿನಾಂಕವಾಗಿದೆ. ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕವನ್ನು ಕಾಯದೆ ಆದಷ್ಟ ಬೇಗ ಅರ್ಜಿಯನ್ನು ಸಲ್ಲಿಸಿ.

ಮುತ್ತುಟ್ ಫೈನಾನ್ಸ್ ಸ್ಕಾಲರ್ಶಿಪ್ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಿ. 

Link : https://www.muthootfinance.com/ 

ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆ, ಉದ್ಯೋಗದ ಮಾಹಿತಿ, ಕೃಷಿ ಸುದ್ದಿ,  ಹಾಗೂ ವಿದ್ಯಾರ್ಥಿ ವೇತನ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡುತ್ತಾ ಇರಿ. ಇದರಲ್ಲಿ ನಾವು ನಿಖರವಾದ ಮಾಹಿತಿಯೊಂದಿಗೆ ನಿಮ್ಮ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಎಂದಿಗೂ ಸಿದ್ದರಾಗಿರುತ್ತೇವೆ. 

karnataka Suddi

For Feedback - feedback@example.com

Join WhatsApp

Join Now

Join Telegram

Join Now

Leave a Comment