DHFWS Hassan Recruitment 2025 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 06 ಹುದ್ದೆಗಳಿಗೆ ಅರ್ಜಿ ಆಹ್ವಾನ!
DHFWS Hassan Recruitment 2025 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ ( DHFWS Hassan ) ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮ ಯೋಜನೆಯೆಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. DHFWS Hassan Recruitment 2025 ಪ್ರಕಾರ ಜಿಲ್ಲೆಯಲ್ಲಿ ಖಾಲಿ ಇರುವ ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್, ಡಿಸ್ಟ್ರಿಕ್ಟ್ ಎಪಿಡೆಮಿಯೋಲಾಜಿಸ್ಟ್ (ಸಾಂಕ್ರಾಮಿಕ ರೋಗಶಾಸ್ತ್ರಜ್ಞ) ಮತ್ತು ಬ್ಲಾಕ್ ಎಪಿಡೆಮಿಯೋಲಾಜಿಸ್ಟ್ ಹುದ್ದೆಗಳಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಸದ್ಯಕ್ಕೆ ಒಟ್ಟು ಆರು ಕಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ನಮೆಂಬರ್ 11 / 2025 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಈ ನೇಮಕಾತಿಯ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಹಾಗೂ ಕೊನೆಯ ದಿನಾಂಕವನ್ನು ಕೆಳಗೆ ಲೇಖನದಲ್ಲಿ ನೀಡಲಾಗಿದೆ.
Also Read :- SBI Platinum Jubilee Asha Scholarship : 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ₹15,000 ವಿದ್ಯಾರ್ಥಿವೇತನ ಸೌಲಭ್ಯ !
DHFWS Hassan Recruitment 2025 : ನೇಮಕಾತಿಯ ಹೆಚ್ಚಿನ ಮಾಹಿತಿ
- ಸಂಸ್ಥೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ (District Health and Family Welfare Society, Hassan)
- ಹುದ್ದೆ ಹೆಸರು : ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್, ಡಿಸ್ಟ್ರಿಕ್ಟ್ ಎಪಿಡೆಮಿಯೋಲಾಜಿಸ್ಟ್, ಬ್ಲಾಕ್ ಎಪಿಡೆಮಿಯೋಲಾಜಿಸ್ಟ್
- ಒಟ್ಟು ಹುದ್ದೆಗಳ ಸಂಖ್ಯೆ: 06
- ಉದ್ಯೋಗ ಸ್ಥಳ: ಹಾಸನ ಜಿಲ್ಲೆ, ಕರ್ನಾಟಕ
- ವೇತನ: ಮಾಸಿಕ ರೂ. 30,000/-
- ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್ (ಪೋಸ್ಟ್ ಮೂಲಕ)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 11, 2025
- ಅಧಿಕೃತ ವೆಬ್ಸೈಟ್: hassan.nic.in
DHFWS Hassan Recruitment 2025 : ಹಾಸನ ಜಿಲ್ಲೆ ಆರೋಗ್ಯ ಇಲಾಖೆ ನೇಮಕಾತಿ 2025 ಖಾಲಿ ಇರುವ ಹುದ್ದೆಯ ವಿವರಗಳು
DHFWS Hassan : ಸದ್ಯಕ್ಕೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು ಆರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಸಂಪೂರ್ಣ ವಿವರಣೆ ಕೆಳಗಿನ ಲೇಖನದಲ್ಲಿ ಇದೆ.
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ | 1 |
| ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ (ಡಿಸ್ಟ್ರಿಕ್ಟ್ ಎಪಿಡೆಮಿಯೋಲಾಜಿಸ್ಟ್) | 1 |
| ಬ್ಲಾಕ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ (ಬ್ಲಾಕ್ ಎಪಿಡೆಮಿಯೋಲಾಜಿಸ್ಟ್) | 4 |
| ಒಟ್ಟು | 6 |
DHFWS Hassan Recruitment 2025 : ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಕೆಳಗಿ ನೀಡಿರುವ ಎಲ್ಲಾ ಶೈಕ್ಷಣಿಕೆ ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.
- ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್: ಎಂಬಿಬಿಎಸ್ (MBBS) ಪದವಿ ಹೊಂದಿರಬೇಕು.
- ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ (ಡಿಸ್ಟ್ರಿಕ್ಟ್ ಎಪಿಡೆಮಿಯೋಲಾಜಿಸ್ಟ್): ಎಂಬಿಬಿಎಸ್ (MBBS) ಪದವಿಯೊಂದಿಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಕನಿಷ್ಠ 1 ವರ್ಷದ ಅನುಭವ ಹೊಂದಿರಬೇಕು. ಅಥವಾ, ಸಾರ್ವಜನಿಕ ಆರೋಗ್ಯ/ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಪದವೀಧರರಾಗಿದ್ದರೆ (MD/DNB in PSM/Community Medicine/ Epidemiology) ಅನುಭವ ಅಗತ್ಯವಿಲ್ಲ.
- ಬ್ಲಾಕ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ (ಬ್ಲಾಕ್ ಎಪಿಡೆಮಿಯೋಲಾಜಿಸ್ಟ್): ಎಂಬಿಬಿಎಸ್ (MBBS) / ಬಿಡಿಎಸ್ (BDS) / ಎಂಎಚ್‌ಎ (MHA) ಪದವಿ ಹೊಂದಿರಬೇಕು.
ಗಮನಿಸಿ : ಶೈಕ್ಷಣಿಕ ಅರ್ಹತೆ ಇನ್ನು ಹೆಚ್ಚಾಗಿ ತಿಳಿಯಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು.
DHFWS Hassan Recruitment 2025 : ವಯೋಮಿತಿ
ವಿವಿಧ ಹುದ್ದೆಗಳಿಗೆ ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿ ಮಾಡಲಾಗಿದೆ.
- ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ : 40 ವರ್ಷ
- ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ : 45 ವರ್ಷ
- ಬ್ಲಾಕ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ : 45 ವರ್ಷ
DHFWS Hassan Recruitment 2025 : ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಒಟ್ಟು ಮಾತಿಕ ಸಂಬಳ ರೂ. 30,000 ಇರುತ್ತದೆ. ವೇತನವು ಸಂಬಂಧಿತ ಹುದ್ದೆಗಳಿಗೆ ಅನುಗುಣವಾಗಿ ಬದಲಾಗುತ್ತಿರಬಹುದು.
Also Read :- Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ 1.50ಲಕ್ಷ ರೂಪಾಯಿ ನೆರವು?
DHFWS Hassan Recruitment 2025 : ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆಯು 3 ರೀತಿಯಲ್ಲಿ ವಿಂಗಡಿಸಿ ಅಭ್ಯರ್ಥಿಯ ಆಯ್ಕೆಯನ್ನು ಮಾಡುತ್ತಾರೆ.
- ರೋಸ್ಟರ್ ಕಂ ಮೆರಿಟ್ ಲಿಸ್ಟ್ : ಅರ್ಜಿದಾರರ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹಾಗೂ ಇತರೆ ನಿಗದಿತ ಅಂಶಗಳ ಆಧಾರದ ಮೇಲೆ ಮೆಟ್ರಿಕ್ ಲಿಸ್ಟ್ ತಯಾರಿಸುತ್ತಾರೆ
- ದಾಖಲೆ ಪರಿಶೀಲನೆ : ಮೆಟ್ರಿಕ್ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಯನ್ನು ಪರಿಶೀಲನೆ ಮಾಡುತ್ತಾರೆ
- ಸಂದರ್ಶನ : ದಾಖಲೆ ಪರಿಶೀಲನೆ ನಂತರ ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಾರೆ ಇದರಲ್ಲಿ ಚೆನ್ನಾಗಿ ಅಂಕ ಪಡೆದ ಅಭ್ಯರ್ಥಿಗಳು ನೇರ ಕಾಲು ಇರುವ ಹುದ್ದೆಗಳಿಗೆ ಹಾಕಲಾಗುತ್ತದೆ.
DHFWS Hassan Recruitment 2025 : ಅರ್ಜಿ ಸಲ್ಲಿಸುವ ವಿಧಾನ ?
DHFWS Hassan Recruitment 2025 : ಈ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೇವಲ ಆಫ್ಲೈನ್ ಮೂಲಕ ಮಾತ್ರವೇ ಅವಕಾಶವನ್ನು ನೀಡಿದ್ದಾರೆ. ಯಾವುದೇ ರೀತಿಯ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಲೇಖನವನ್ನು ಸರಿಯಾಗಿ ಅನುಸರಿಸಿ ಅರ್ಜಿಯನ್ನು ಸಲ್ಲಿಸಿ.
- ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ : ಡೌನ್ಲೋಡ್ ಮಾಡಲು https://hassan.nic.in/ ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ‘DHFWS Hassan Recruitment 2025′ ಅಧಿಸೂಚನೆ/ನೋಟಿಫಿಕೇಶನ್ ಲಿಂಕ್‌ನ್ನು ಕ್ಲಿಕ್ ಮಾಡಿ PDF ಡೌನ್ಲೋಡ್ ಮಾಡಿ.
- ಅಪ್ಲಿಕೇಶನ್ ಫಾರಂ ತೆಗೆದುಕೊಳ್ಳಿ : ಅರ್ಜಿ ನಮೂನೆ ಅಥವಾ ಅಪ್ಲಿಕೇಶನ್ ಫಾರಂ ಇರುವುದು ಅದನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
- ಪ್ರಿಂಟ್ ಔಟ್ ತೆಗೆದುಕೊಂಡ ಅರ್ಜಿ ಫಾರಂನಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ. ಉದಾಹರಣೆಗೆ:- ನಿಮ್ಮ ಹೆಸರು, ನಿಮ್ಮ ವಿಳಾಸ, ಶೈಕ್ಷಣಿಕ ವಿವರ, ಇತ್ಯಾದಿ…
- ನಂತರ ನಿಮ್ಮ ಅರ್ಜಿ ಫಾರಂ ಮೇಲೆ ನಿಮ್ಮ ಇತ್ತೀಚಿನ ತೆಗೆದ ಪಾಸ್ಪೋರ್ಟ್ ಸೈಜ್ ಫೋಟೋ ಅಂಟಿಸಿ.
- ಅಗತ್ಯ ದಾಖಲೆಗಳನ್ನು ಜೋಡಿಸಿ : ಈ ಹುದ್ದೆಗೆ ಬೇಕಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿಯ ಫಾರಂ ಮೇಲೆ ಅಂಟಿಸಬೇಕು. ಅಗತ್ಯ ದಾಖಲೆಗಳ ಪಟ್ಟಿ ಕೆಳಗಿನ ನೀಡಲಾಗಿದೆ.
- ಅರ್ಜಿ ಕಳುಹಿಸಿ : ಮೊದಲೇ ಹೇಳಿದಂತೆ ಈ ಹುದ್ದೆಗೆ ಕೇವಲ ಆಫ್ ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕು ಅದಕ್ಕಾಗಿ ನೀವು ಭರ್ತಿ ಮಾಡಿದ ಅರ್ಜಿಯನ್ನು ಕೆಳಗೆ ನೀಡಿರುವ ವಿಳಾಸಕ್ಕೆ ರಿಜಿಸ್ಟ್ರೇಟ್ ರೆಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮುಖಾಂತರ ನವೆಂಬರ್ 11 /2025 ರೊಳಗೆ ಕಳುಹಿಸಬೇಕು.
ಅಭ್ಯರ್ಥಿಗಳ ಗಮನಕ್ಕೆ : ನಿಮ್ಮ ಅರ್ಜಿಯನ್ನು ಕೊರಿಯರ್ ಅಥವಾ ಸಾಮಾನ್ಯ ಪೋಸ್ಟ್ ನಲ್ಲಿ ಕಳುಹಿಸಬೇಡಿ. ಮತ್ತು ಬಹು ಮುಖ್ಯವಾಗಿ ಅರ್ಜಿ ಪ್ರಕ್ರಿಯೆಯ ಕಾಲಾವಧಿ ಮೀರಿದರೆ ನಿಮ್ಮ ಅರ್ಜಿ ಸ್ವೀಕರಿಸುವುದಿಲ್ಲ.
DHFWS Hassan Recruitment 2025 : ಅರ್ಜಿ ಸಲ್ಲಿಸುವ ವಿಳಾಸ
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಕಟ್ಟಡ,
ಹಾಸನಾಂಬ ಒಳಾಂಗಣ ಕ್ರೀಡಾಂಗಣದ ಪಕ್ಕ,
ಸಾಲಗಾಮೆ ರಸ್ತೆ, ಹಾಸನ – 573 201.
DHFWS Hassan Recruitment 2025 : ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ಹಾಗೂ ಕೊನೆಯ ದಿನಾಂಕ ?
ಈ ನೇಮಕಾತಿಗೆ ಅರ್ಜಿ ಸ್ವೀಕರಿಸಲು ಪ್ರಾರಂಭವಾಗುವ ದಿನಾಂಕವು ನವೆಂಬರ್ 3 / 2025 ರಂದು ಪ್ರಾರಂಭವಾಗುತ್ತದೆ. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11 /2025 ರಂದು ಮುಗಿಯುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆದಷ್ಟು ಬೇಗ ಸಲ್ಲಿಸಿ.
DHFWS Hassan Recruitment 2025 : ಮುಖ್ಯ ಲಿಂಕ್
DHFWS Hassan Recruitment 2025 : ಈ ನೇಮಕಾತಿಗೆ ಅಧಿಸೂಚನೆ ಹಾಗೂ ಅಪ್ಲೈ ಮಾಡುವ ಲಿಂಕ್ ಕೆಳಗೆ ನೀಡಲಾಗಿದೆ.
- DHFWS Hassan Recruitment 2025 ಅಧಿಸೂಚನೆ: https://hassan.nic.in/
DHFWS Hassan Recruitment 2025 : ಅರ್ಜಿ ಸಲ್ಲಿಸುವಾಗ ಕೇಳಲಾಗುವ ಅಗತ್ಯ ದಾಖಲೆಗಳು
ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ಕೇಳಲಾಗುತ್ತದೆ.
- ಅಭ್ಯರ್ಥಿಯ ಆಧಾರ್ ಕಾರ್ಡ್
- ಶೈಕ್ಷಣಿಕ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿಮ್ಮ ಅನುಭವದ ಪ್ರಮಾಣ ಪತ್ರ ( Experience Letter )
- ನಿಮ್ಮ ಪಾನ್ ಕಾರ್ಡ್
- 4 ಪಾಸ್ಪೋರ್ಟ್ ಸೈಜ್ ಫೋಟೋ
DHFWS Hassan Recruitment 2025 : ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು ?
- ಅರ್ಜಿ ಸಲ್ಲಿಸುವಾಗ ಸ್ಪಷ್ಟವಾದ ಹಾಗೂ ಸುಂದರವಾದ ನಿಮ್ಮ ಅಕ್ಷರದಿಂದ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ನಿಮ್ಮ ಅಕ್ಷರದ ಮೇಲೆ ಗೀಚಬೇಡಿ.
- ಅರ್ಜಿಯೊಂದಿಗೆ ಜೋಡಿಸುವ ಎಲ್ಲಾ ಉಪಯುಕ್ತ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
- ಅರ್ಜಿ ಕಳಿಸುವಾಗ ನಿಮ್ಮ ವಿವರ, ನಿಮ್ಮ ದಾಖಲೆ ಎಲ್ಲವೂ ಸರಿಯಾಗಿದೆಯೇ ಎಂದು ಎರಡು ಬಾರಿ ಪರಿಶೀಲಿಸಿ.
ಹಾಗೂ ಬಹಳ ಮುಖ್ಯವಾಗಿ ನಿಮ್ಮ ಅರ್ಜಿಯನ್ನು ನಿಗದಿತ ದಿನಾಂಕದ ಮುನ್ನ ಪೋಸ್ಟ್ ಮಾಡಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11 / 2025 ಮಾತ್ರ ಅವಕಾಶವನ್ನು ನೀಡಿದ್ದಾರೆ. ಒಂದು ವೇಳೆ ನಿಮ್ಮ ಅರ್ಜಿ ಸಲ್ಲಿಕೆಯನ್ನು ವಿಳಂಬ ಮಾಡಿದರೆ ಅರ್ಜಿ ಪರಿಗಣಿಸುವುದಿಲ್ಲ ಎಂದು ಅಧಿಕೃತವಾಗಿ ಇಲಾಖೆಯು ಸೂಚಿಸಿದ್ದಾರೆ.
Also Read :- Canara Bank personal loan 2025 : ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!
DHFWS Hassan Recruitment 2025 : ಹಾಸನ ಜಿಲ್ಲೆಯಲ್ಲಿ ಆರೋಗ್ಯ ವಲಯದಲ್ಲಿ ಸೇವೆ ಸಲ್ಲಿಸುವ ಆಸಕ್ತಿ ನಿಮಗಿದ್ದರೆ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಹಾಗೂ ಈ ನೇಮಕಾತಿಯ ವೇತನವು 30,000 ಮಾಸಿಕ ವೇತನವಾಗಿರುತ್ತದೆ ಮತ್ತು ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ನೀವು ಪಡೆಯಬಹುದು. ಆಸಕ್ತಿ ಇರುವ ಮತ್ತು ಅರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ. ನೇಮಕಾತಿಯ ಇನ್ನು ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ https://hassan.nic.in/ ಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಿ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆ, ಉದ್ಯೋಗದ ಮಾಹಿತಿ, ಕೃಷಿ ಸುದ್ದಿ, ಹಾಗೂ ವಿದ್ಯಾರ್ಥಿ ವೇತನ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡುತ್ತಾ ಇರಿ. ಇದರಲ್ಲಿ ನಾವು ನಿಖರವಾದ ಮಾಹಿತಿಯೊಂದಿಗೆ ನಿಮ್ಮ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಎಂದಿಗೂ ಸಿದ್ದರಾಗಿರುತ್ತೇವೆ.
DHFWS Hassan Recruitment 2025: 10 ಸಾಮಾನ್ಯ ಪ್ರಶ್ನೋತ್ತರಗಳು (FAQ)
- ಈ ನೇಮಕಾತಿಯಲ್ಲಿ ಎಷ್ಟು ಹುದ್ದೆಗಳು ಇರುತ್ತದೆ ?
- ಒಟ್ಟು 06 ಹುದ್ದೆಗಳು ಲಭ್ಯವಿವೆ. ಇದರಲ್ಲಿ ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ (01), ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ (01), ಮತ್ತು ಬ್ಲಾಕ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ (04) ಹುದ್ದೆಗಳು ಸೇರಿವೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11 2025 ರಂದು ಮುಕ್ತಾಯಗೊಳ್ಳುತ್ತದೆ. ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
- ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾ ?
- ಇಲ್ಲ ಈ ಹುದ್ದೆಗೆ ಕೇವಲ ಆಫ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಿದ್ದಾರೆ. ನಿಮ್ಮ ಅರ್ಜಿಯನ್ನು ಸಲ್ಲಿಸಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಅಂಚೆ ಕಚೇರಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.
- ಈ ಹುದ್ದೆಗೆ ಎಷ್ಟು ವೇತನ ?
- ಈ ಹುದ್ದೆಗೆ ಮಾಸಿಕ 30,000 ಇರುತ್ತದೆ ಹಾಗೂ ಹುದ್ದೆಗೆ ಅನುಗುಣವಾಗಿ ಬದಲಾಗುತ್ತಿರಬಹುದು.
- ವಯೋಮಿತಿಯಲ್ಲಿ ಮೀಸಲಾತಿ ರಿಯಾಯಿತಿ ಇರುತ್ತದೆಯೇ ?
- ಹೌದು ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ವಿವಿಧ ಜಾತಿ ಆಧಾರದ ಮೇಲೆ ವಯಸ್ಸಿನ ರಿಯಾಯಿತಿಯು ಕೂಡ ಇರುತ್ತದೆ.
- ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?
- ಈ ಹೇಮಕಾತಿಯಲ್ಲಿ ಒಟ್ಟು ಮೂರು ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೆಟ್ರಿಕ್ ಆಧಾರದ ಮೇಲೆ, ದಾಖಲೆ ಪರಿಶೀಲನೆ, ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
- ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲೆಗಳು ಬೇಕು?
- ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಶಿಕ್ಷಣ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ನಿಮ್ಮ ಆದಾಯ ಪ್ರಮಾಣ ಪತ್ರ, ನಾಲಕ್ಕು ಪಾಸ್ಪೋರ್ಟ್ ಸೈಜ್ ಫೋಟೋ, ಇತ್ಯಾದಿ..
- ಮೂಲ ದಾಖಲೆಗಳ ಪರಿಶೀಲನೆ ಯಾವಾಗ ನಡೆಯುವುದು?
- ನವೆಂಬರ್ 13, 2025 ರಂದು ಮೂಲ ದಾಖಲಾತಿಗಳ ಪರಿಶೀಲನೆ ನಡೆಯಲಿದೆ. ಈ ದಿನಾಂಕವು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
- ಹೆಚ್ಚಿನ ಮಾಹಿತಿ ಮತ್ತು ಅಧಿಸೂಚನೆಯನ್ನು ಎಲ್ಲಿ ಪಡೆಯಬಹುದು?
- ಎಲ್ಲಾ ಅಧಿಕೃತ ಮಾಹಿತಿ ಮತ್ತು ಅಧಿಸೂಚನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನದ ಅಧಿಕೃತ ವೆಬ್‌ಸೈಟ್ hassan.nic.in ನಲ್ಲಿ ಪಡೆಯಬಹುದು. ಯಾವುದೇ ನವೀಕೃತ ಮಾಹಿತಿಗಾಗಿ ಈ ವೆಬ್‌ಸೈಟ್‌ನ್ನು ನಿಯಮಿತವಾಗಿ ಪರಿಶೀಲಿಸಿ.








